ಸಸ್ಯಾಹಾರದ ಪ್ರಯೋಜನಗಳ ಬಗ್ಗೆ ಉಪೇಂದ್ರ ಏನಂತಾರೆ? ಅವರ ಮನೆಯಲ್ಲಿ ಯಾರೆಲ್ಲಾ ಮಾಂಸಾಹಾರ ಸೇವಿಸ್ತಾರೆ?

ಸಸ್ಯಹಾರ ಉತ್ತಮವೋ ಮಾಂಸಾಹಾರ ಉತ್ತಮವೋ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಸಾಕಷ್ಟು ಜನ ಮಾಂಸಾಹಾರ ಬಿಟ್ಟು ವೇಗನ್ ಆಗಿದ್ದಾರೆ. ಸಿನಿಮಾ ನಟ-ನಟಿಯರು ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ.

ಮಾಂಸಾಹಾರ ತ್ಯಜಿಸಲು ಸಾಕಷ್ಟು ಜನ ಇನ್ನಿಲ್ಲದ ಪ್ರಯತ್ನಪಡುತ್ತಲೇ ಇದ್ದಾರೆ. ಸಾಧ್ಯವಾಗದೇ ಸುಮ್ಮನಾಗಿರುವವರು ಇದ್ದಾರೆ. ನಟ ಉಪೇಂದ್ರ ಮೊದಲಿನಿಂದಲೂ ಸಸ್ಯಹಾರಿ. ಇತ್ತೀಚೆಗೆ ತೆಲುಗು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಸಸ್ಯಾಹಾರ ಎಷ್ಟು ಶ್ರೇಷ್ಠ ಎನ್ನುವುದನ್ನು ವಿವರಿಸಿದ್ದಾರೆ.

Actor director Upendra opens up about the benefits of vegetarianism

ಬಹಳ ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಸದ್ದಿಲ್ಲದೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

ಕೆ. ಪಿ ಶ್ರೀಕಾಂತ್ ಹಾಗೂ ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಾಧುಕೋಕಿಲ, ಆರ್ಮುಗ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಇತ್ತೀಚೆಗೆ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಎ' ಸಿನಿಮಾ ರೀ ರಿಲೀಸ್ ಆಗಿತ್ತು. ಆಂಧ್ರ, ತೆಲಂಗಾಣದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತು. ಉಪೇಂದ್ರ ಸಹ ಪ್ರಚಾರ ಮಾಡಿ ಸಿನಿಮಾ ರೀ-ರಿಲೀಸ್‌ಗೆ ಬೆಂಬಲವಾಗಿ ನಿಂತಿದ್ದರು. ಇದೇ ವೇಳೆ ಸಾಕಷ್ಟು ತೆಲುಗು ಸಂದರ್ಶನಗಳಲ್ಲಿ ರಿಯಲ್ ಸ್ಟಾರ್ ಭಾಗವಹಿಸಿ ಮಾತನಾಡಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ "ನಾನು ಸಸ್ಯಹಾರಿ. ವೆಜ್ ಬಹಳ ಉತ್ತಮ. ಮಾಂಸಾಹಾರಿಗಳು ಪ್ರೋಟಿನ್ ಅನ್ನು ಪರೋಕ್ಷವಾಗಿ ತಿಂತಾರೆ. ನಾವು ನೇರವಾಗಿ ತಿಂತೀವಿ. ಸೊಪ್ಪು ತರಕಾರಿ ತಿಂದ ಪ್ರಾಣಿಗಳನ್ನು ತಿಂದು ಮಾಂಸಾಹಾರಿಗಳಿಗೆ ಪ್ರೋಟಿನ್ ಸಿಗುತ್ತದೆ. ನಾವು ನೇರವಾಗಿ ಸೊಪ್ಪು, ತರಕಾರಿ ತಿಂದು ಪ್ರೊಟೀನ್ ಸಿಗುತ್ತದೆ" ಎಂದಿದ್ದಾರೆ.

Actor director Upendra opens up about the benefits of vegetarianism

"ನಮ್ಮ ಪತ್ನಿ ಮಾಂಸಾಹಾರ ತಿಂತಾರೆ. ಅವರು ಪಶ್ಚಿಮ ಬಂಗಾಳದ ಕಡೆಯವರು ಅಲ್ಲವೇ? ನಮ್ಮ ಮಕ್ಕಳು ಕೂಡ ನಾನ್‌ ವೆಜ್ ಸವಿಯುತ್ತಾರೆ. ಆದರೆ ನಮ್ಮ ಅಪ್ಪ, ಅಮ್ಮ, ನಾನು ಪ್ಯೂರ್ ವೆಜ್" ಎಂದು ಉಪೇಂದ್ರ ಹೇಳಿದ್ದಾರೆ.

ಹಿಂದೆ ಕೂಡ ಸಸ್ಯಾಹಾರದ ಪ್ರಯೋಜನಗಳ ಬಗ್ಗೆ ಉಪೇಂದ್ರ ಮಾತನಾಡಿದ್ದರು. "ಸಹಜವಾಗಿ ಸತ್ತಿರುವ ಪ್ರಾಣಿಗೆ ಡೆಡ್ ಬಾಡಿ ಅಂತೀವಿ. ಇನ್ನು ನಾವು ಕೊಂದು ತಿನ್ನುವ ದೇಹದಲ್ಲಿ ಎಷ್ಟು ಟಾಕ್ಸಿಕ್ ಇರುತ್ತದೆ. ಅದಕ್ಕೆ ಸಾಧ್ಯವಾದಷ್ಟು ಸಸ್ಯಾಹಾರಿಗಳಾಗಿದೆ. ನಿಧಾನವಾಗಿ ಮಾಂಸಾಹಾರ ತ್ಯಜಿಸಿ. ಅದು ಆರೋಗ್ಯಕ್ಕೂ ಒಳ್ಳೆಯದು"

"ದೇಹಕ್ಕೆ ಶಕ್ತಿ ಬರಲು ಪ್ರೋಟಿನ್ ಸಿಗಲು ಮಾಂಸಾಹಾರ ಬೇಕು ಎಂದುಕೊಳ್ಳುತ್ತೇನೆ. ಸಾಕಷ್ಟು ಜನ ಬರೀ ಸಸ್ಯಾಹಾರ ತಿಂದು ಬಾಡಿ ಬಿಲ್ಡರ್‌ಗಳಾಗಿದ್ದಾರೆ. ಹಾರ್ಸ್ ಪವರ್ ಅಂತೀವಿ. ಅದಕ್ಕಿರುವ ಶಕ್ತಿ ಮತ್ಯಾವುದಕ್ಕೂ ಇಲ್ಲ. ಆದರೆ ಹಾರ್ಸ್ ವೆಜಿಟೇರಿಯನ್. ಎಲ್ಲರಲ್ಲೂ ಒಂದು ಮನವಿ ಏನಂದ್ರೆ, ಎಲ್ಲರೂ ಸಸ್ಯಾಹಾರಿಗಳಾದರೆ ಎಷ್ಟೋ ಪ್ರಾಣಿಗಳು ಬದುಕುತ್ತವೆ. ಸಾಧ್ಯವಾದಷ್ಟು ಸಸ್ಯಹಾರಿಗಳಾಗಲು ಪ್ರಯತ್ನಿಸಿ" ಎಂದಿದ್ದರು.

More from Filmibeat

English summary
Actor upendra opens up about being a vegan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X