For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿಗೆ ತಾಕತ್ತಿದ್ದರೆ ಆ ಸೀನ್ ತೆಗೆದು ತೋರಿಸಲಿ!

  By ರವೀಂದ್ರ ಕೊಟಕಿ
  |

  ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಬಾಹುಬಲಿ ವಿಶ್ವದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಅದರಲ್ಲೂ ಬಾಹುಬಲಿ ಭಾಗ ಎರಡು ಹತ್ತಿರ, ಹತ್ತಿರ ಎರಡು ಸಾವಿರ ಕೋಟಿ ಹಣ ಗಳಿಸಿ ದೇಶದ ಸಿನಿಮಾ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಈಗಲೂ ಭಾರತೀಯ ಸಿನಿಮಾ ರಂಗದಲ್ಲಿ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದ ದಾಖಲೆ ಬಾಹುಬಲಿ ಭಾಗ 2 ಹೆಸರಿನಲ್ಲಿದೆ.

  ಬಾಹುಬಲಿ ಸೀರಿಸ್ ನಂತರ ರಾಜಮೌಳಿ ಭಾರತದ ನಂಬರ್ ಒನ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಈಗಲೂ 'ಆರ್ ಆರ್ ಆರ್' ಚಿತ್ರ ರಾಜಮೌಳಿ ಹೆಸರಿನಲ್ಲಿ ನಿರ್ಮಾಪಕರು 400 ಕೋಟಿ ಹಣ ಹೂಡಿಕೆ ಮಾಡಿರುವುದು ಮತ್ತು ಅದಕ್ಕೆ ಪ್ರತಿಯಾಗಿ ದೊಡ್ಡಪ್ರಮಾಣದಲ್ಲಿ ವಹಿವಾಟು ಕೂಡ ನಡೆದಿರುವುದು.

  ಭಾರತೀಯ ಸಿನಿಮಾ ರಂಗದಲ್ಲಿ ಗ್ರಾಫಿಕ್ಸ್ ಗೆ ಸಂಬಂಧಪಟ್ಟಂತೆ ರಾಜಮೌಳಿ ಸೃಷ್ಟಿಸಿದ ಅದ್ಭುತಗಳು ಅನೇಕ. ಗ್ರಾಫಿಕ್ಸ್ ನಲ್ಲಿ ಅದ್ಭುತವಾದ ವಿನ್ಯಾಸಗಳನ್ನು ಮಾಡುವ ರಾಜಮೌಳಿಗೆ ಈಗ

  ತೆಲುಗಿನ ಖ್ಯಾತ ಪೋಷಕನಟ ಕೋಟಾ ಶ್ರೀನಿವಾಸ ರಾವ್ ಅವರು ಸವಾಲೆಸೆಯುವಂತೆ ಆ ಒಂದು ದೃಶ್ಯ ತೆಗೆದು ತೋರಿಸುವಂತೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಆತ ಸಾಮಾನ್ಯ ನಟನೇನು ಅಲ್ಲ!

  ಆತ ಸಾಮಾನ್ಯ ನಟನೇನು ಅಲ್ಲ!

  ರಾಜಮೌಳಿ ಅವರಿಗೆ ಚಾಲೆಂಜ್ ಎಸೆಯುವ ಈ ನಟನೇನು ಸಾಮಾನ್ಯನಲ್ಲ. ಸುಮಾರು ನಾಲ್ಕು ದಶಕಗಳ ಕಾಲದಲ್ಲಿ ಪೋಷಕ ನಟನಾಗಿ, ಹಾಸ್ಯ ನಟನಾಗಿ, ವಿಲನಾಗಿ, ಕಾಮಿಡಿ ವಿಲನಾಗಿ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಚಿತ್ರರಂಗದಲ್ಲಿ ಸುಮಾರು 800ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆರ್ಜಿವಿ 'ಸರ್ಕಾರ್' ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಸಮಯದಲ್ಲಿ ಅಭಿಷೇಕ್ ಬಚ್ಚನ್ ಹೇಳಿದ ಮಾತು ' ನಾನು ಕೋಟಾ ಶ್ರೀನಿವಾಸ ರಾವ್ ಅವರ ಜೊತೆಗೆ ಅಭಿನಯಿಸಿದ್ದೇನೆ ಎಂಬುದೇ ನನಗೊಂದು ದೊಡ್ಡ ಪ್ರಶಸ್ತಿ ಬಂದಂತೆ' ಅಂತ. ಅಂತಹ ಕೋಟಾ ಶ್ರೀನಿವಾಸ ರಾವ್ ತೆಲುಗಿನ ಅಗ್ರಗಣ್ಯ ಪೋಷಕ ನಟರಲ್ಲಿ ಒಬ್ಬರು.

  ''ಅದು ಭಾರತೀಯ ಸಿನಿಮಾರಂಗದ ದೃಶ್ಯಕಾವ್ಯ''

  ''ಅದು ಭಾರತೀಯ ಸಿನಿಮಾರಂಗದ ದೃಶ್ಯಕಾವ್ಯ''

  'ಇಂದಿಗೂ ಮಾಯಾಬಜಾರ್ ಚಿತ್ರವನ್ನ ಟಿವಿಯಲ್ಲಿ ಪ್ರಸಾರ ಮಾಡಿದರೆ ಪ್ರೇಕ್ಷಕರು ಕ್ಷಣ ಕಾಲಕ್ಕೂ ಕದಲದೇ ಹಾಗೆ ಕೂತು ವೀಕ್ಷಿಸುತ್ತಾರೆ. ಇಂತಹ ದೃಶ್ಯಕಾವ್ಯ ಮತ್ತೊಂದು ಭಾರತೀಯ ಸಿನಿಮಾ ರಂಗದಲ್ಲಿ ಬಂದಿಲ್ಲ.ಬಾಹುಬಲಿ ಸಿನಿಮಾ ಬಿಡುಗಡೆಯಾದಾಗ ಎಲ್ಲರೂ ಆ ಚಿತ್ರದ ಬಗ್ಗೆ ಮಾತನಾಡಿದ್ದಾರೆ ಆದರೆ ಈಗ ಎಷ್ಟು ಜನ ಆ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ?'ಎಂದು ಪ್ರಶ್ನಿಸುವ ಕೋಟಾ ಕೋಟಾ ಶ್ರೀನಿವಾಸ ರಾವ್ ರವರು 'ಭಾರತೀಯ ಸಿನಿಮಾ ರಂಗದಲ್ಲಿ ಗ್ರಾಫಿಕ್ಸ್ ಪರಿಚಯವೇ ಇಲ್ಲದ ಕಾಲದಲ್ಲಿ ನಿರ್ಮಿಸಿದ 'ಮಾಯಾಬಜಾರ್' ಅಂತಹ ಒಂದು ದಂತಕಥೆ ತೆಗೆಯಲು ಸಾಧ್ಯವೇ ಇಲ್ಲ. ಆರು ದಶಕಗಳೇ (1957) ಕಳೆದುಹೋಗಿದ್ದರು ಇಂದಿಗೂ ಆ ಚಿತ್ರದ ಒಂದೊಂದು ದೃಶ್ಯ ಕೂಡ ವಿದ್ಯಾರ್ಥಿಗಳಿಗೆ ಕಲಿಕೆಯ ಪಠ್ಯಪುಸ್ತಕ ವಿದ್ದಂತೆ' ಅಂತ ನೇರವಾಗಿ ಹೇಳುತ್ತಾರೆ.

  ''ಆ ಒಂದು ದೃಶ್ಯವನ್ನು ತೆಗೆದು ತೋರಿಸಲಿ''

  ''ಆ ಒಂದು ದೃಶ್ಯವನ್ನು ತೆಗೆದು ತೋರಿಸಲಿ''

  ಅಲ್ಲು ರಾಮಲಿಂಗಯ್ಯ, ವಂಗ ಸುಬ್ಬಯ್ಯ ಗಿಂಬಳಿ (ರತ್ನ ಕಂಬಳಿಯಲ್ಲಿ) ಮೇಲೆ ಕೂತು ತಾಂಬೂಲ ಸೇವನೆ ಮಾಡುವಾಗ ತಾಂಬೂಲದ ತಟ್ಟೆ ಮುಂದೆ ಚಲಿಸಿ ಮತ್ತೆ ಹಿಂದೆ ಬರುವ, ಗಿಂಬಳಿ ತನಗೆ ತಾನೇ ಸುತ್ತಿಕೊಳ್ಳುವುದು, ಅದನ್ನು ಬಿಡಿಸಲು ಇವರು ಮಾಡುವ ಸಾಹಸ, ಅಲ್ಲಿಂದ ಭಯಬಿದ್ದು ಪಕ್ಕದಲ್ಲಿದ್ದ ಮಂಚ ಮೇಲೆ ಹೋಗಿ ಕೂತಾಗ ಮಂಚದ ಮರದ ಕಂಬಗಳಿಂದ ಒದೆ ತಿನ್ನುವುದು, ನೋಡನೋಡುತ್ತಿದ್ದಂತೆ ಪಾದರಕ್ಷೆಗಳು ಅಲ್ಲಿಂದ ಮುಂದಕ್ಕೆ ಚಲಿಸುವುದು, ಇವರು ಕೈಯಲ್ಲಿ ಹಿಡಿದು ಬಂದಿದ್ದ ಕೋಲುಗಳು ಇವರನ್ನೇ ಬಡೆಯುವುದು. ಇದರಿಂದ ಅವರು ಅನುಭವಿಸುವ ಪೀಕಲಾಟ ದ ಒಂದು ಅಪರೂಪದ ಹಾಸ್ಯ ದೃಶ್ಯವದು. ಈ ದೃಶ್ಯವನ್ನು ಇಂದಿನ ರಾಜಮೌಳಿ ತರದ ನಿರ್ದೇಶಕರು ಕಲ್ಪನೆಯಲ್ಲಿ ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕೋಟಾ ಶ್ರೀನಿವಾಸ ರಾವ್ 'ಇನ್ನು ಕೆಲವೇ ವರ್ಷದಲ್ಲಿ ಜನ ಪೂರ್ತಿಯಾಗಿ ಬಾಹುಬಲಿ ಮರೆತುಬಿಡುತ್ತಾರೆ. ಆದರೆ ಇನ್ನೂ50 ವರ್ಷವಾದರೂ ಮಾಯಾಬಜಾರ್ ಮರೆಯಲು ಸಾಧ್ಯವಿಲ್ಲ' ಕಡ್ಡಿಮುರಿದಂತೆ ಹೇಳುತ್ತಾರೆ.

  ಈಗಿನ ಸಿನಿಮಾಗಳಲ್ಲಿ ಹಾಸ್ಯ

  ಈಗಿನ ಸಿನಿಮಾಗಳಲ್ಲಿ ಹಾಸ್ಯ

  ಹಾಸ್ಯವನ್ನು ನೋಡಿದಾಗ ಹಾಸ್ಯದ ಅನುಭವವೇ ಆಗುವುದಿಲ್ಲ. ಕಥೆಗೊಂದು ಸ್ವರೂಪ ಇರುವುದಿಲ್ಲ. ಪಾತ್ರಗಳಿಗೆ ಜೀವಂತಿಕೆ ಕೂಡ ಇಲ್ಲ. ಸಿನಿಮಾ ಇಂದು ಕೇವಲ ವ್ಯವಹಾರ ಮಾತ್ರ. ಇದರೊಳಗೆ ಕಲೆ ಎಂಬುದು ಉಳಿದಿಲ್ಲ' ಅಂತ ಬೇಸರ ವ್ಯಕ್ತಪಡಿಸುತ್ತಾರೆ.

  English summary
  Actor Kota Srinivas Rao challenged director Rajamouli to create movie like Mayabazar. He said Mayabazar is a great movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X