For Quick Alerts
  ALLOW NOTIFICATIONS  
  For Daily Alerts

  ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಮಹೇಶ್ ಬಾಬು ಮತ್ತು ನಮ್ರತಾ

  |

  ಟಾಲಿವುಡ್ ನ ಸ್ಟಾರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ದಂಪತಿ ಇಂದು ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇದ್ದಾರೆ. ಈ ಜೋಡಿ 15ನೇ ವರ್ಷದ ವಿವಾಗ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮ, ಸಂತಸವನ್ನು ನಟ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ನಮ್ರತಾ ಜೊತೆಗಿನ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿರುವ ಮಹೇಶ್ ಬಾಬು "ನನ್ನ ಪ್ರೀತಿಗೆ 15 ವರ್ಷ. ಪ್ರತಿ ದಿನ ಇನ್ನು ಹೆಚ್ಚು ಪ್ರೀತಿಸುವೆ" ಎಂದು ಬರೆದುಕೊಂಡು ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಮಹೇಶ್ ಮತ್ತು ನಮ್ರತಾ ಜೋಡಿ 2005 ಫೆಬ್ರವರಿ 10ಕ್ಕೆ ಹಸೆಮಣೆ ಏರಿದ್ದಾರೆ. ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ತಾರಾ ಜೋಡಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

  ಮಹೇಶ್ ಬಾಬುಗೆ ಶಸ್ತ್ರ ಚಿಕಿತ್ಸೆ: 3 ತಿಂಗಳು ಸಂಪೂರ್ಣ ವಿಶ್ರಾಂತಿಮಹೇಶ್ ಬಾಬುಗೆ ಶಸ್ತ್ರ ಚಿಕಿತ್ಸೆ: 3 ತಿಂಗಳು ಸಂಪೂರ್ಣ ವಿಶ್ರಾಂತಿ

  ಈ ತಾರ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮೊದಲ ಮಗ ಗೌತಮ್ ಮತ್ತು ಎರಡನೆ ಮಗಳು ಸಿತಾರಾ. ಸಿತಾರ ಸದ್ಯ ಓದಿನ ಜೊತೆಗೆ ಯೂಟ್ಯೂಬ್ ಚಾನೆಲ್ ತೆರೆದು ಸೆಲೆಬ್ರಿಟಿ ಸಂದರ್ಶನ ಮಾಡುತ್ತಿದ್ದಾರೆ. ನಮ್ರತಾ, ಮಹೇಶ್ ಬಾಬು ವೃತ್ತಿ ಜೀವನದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆ ನಿರ್ಮಾಣ ಕೂಡ ಮಾಡುತ್ತಾರೆ.

  ಮಹೇಶ್ ಬಾಬು ಇತ್ತೀಚಿಗಷ್ಟೆ ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಚಿತ್ರ ಸೂಪರ್ ಹಿಟ್ ಆಗಿದ್ದು, ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಮಹೇಶ್ ಬಾಬು ಸದ್ಯ ಅಮೆರಿಕದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಮೊಣಕಾಲು ಶಸ್ತ್ರ ಚಿಕಿತ್ಸೆಗಾಗಿ ಮಹೇಶ್ ಬಾಬು ಅಮೆರಿಕಗೆ ತೆರಳಿದ್ದಾರೆ. ಸದ್ಯ ಮೂರು ನಾಲ್ಕು ತಿಂಗಳು ವಿಶ್ರಾಂತಿ ಯಲ್ಲಿರಲಿದ್ದಾರೆ ಮಹೇಶ್.

  ವಿಶ್ರಾಂತಿ ಬಳಿಕ ಮಹೇಶ್, ವಂಶಿ ಪೈಡಿಪಲ್ಲಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹರ್ಶಿ ಚಿತ್ರದ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ. ಈಗಾಗಲೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಗಳು ಶುರುವಾಗಿದ್ದು ಮಹೇಶ್ ಬಾಬುಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Telugu Actor mahesh babu And his wife Namratha celebrating 15th wedding anniversary. Mahesh Babu tied the knot to Namratha on February 10 2005.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X