ತಂದೆಯ ಹುಟ್ಟುಹಬ್ಬಕ್ಕೆ ಮಹೇಶ್ ಬಾಬು ಪ್ರೀತಿಯ ವಿಶ್

ಪ್ರಿನ್ಸ್ ಮಹೇಶ್ ಬಾಬು ತಂದೆ, ಟಾಲಿವುಡ್ ನ ಎವರ್ ಗ್ರೀನ್ ಸೂಪರ್ ಸ್ಟಾರ್ ಶಿವ ರಾಮ ಕೃಷ್ಣ ಅವರಿಗೆ ಇಂದು (ಮೇ 31) ಹುಟ್ಟುಹಬ್ಬದ ಸಂಭ್ರಮ. 78ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೃಷ್ಣ ಅವರಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ.

ಟಾಲಿವುಡ್ ಸ್ಟಾರ್ ನಟ ಮತ್ತು ನಿರ್ಮಾಪಕ ಕೃಷ್ಣ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಲೆಜೆಂಡರಿ ಸ್ಟಾರ್ ಗೆ ಪುತ್ರ ಮಹೇಶ್ ಬಾಬು ಮತ್ತು ಸೊಸೆ ನಮ್ರತಾ ಇಬ್ಬರು ಪ್ರೀತಿಯ ವಿಶ್ ಮಾಡಿ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸ್ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಪ್ಪನ ಜೊತೆ ಇರುವ ಸುಂದರ ಫೋಟೋವೊಂದನ್ನು ಶೇರ್ ಮಾಡಿ, 'ಹುಟ್ಟುಹಬ್ಬ ಶುಭಾಶಯಗಳು ಅಪ್ಪ. ಯಾವಾಗಲು ಉತ್ತಮ ಮಾರ್ಗ ತೋರಿದ ನಿಮಗೆ ಧನ್ಯವಾದಗಳು. ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

Actor Mahesh Babu birthday wishes to his father Krishna

ಇನ್ನು ಕೃಷ್ಣ ಅವರ ಸೊಸೆ, ಮಹೇಶ್ ಬಾಬು ಪತ್ನಿ ನಮ್ರತಾ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 'ನನ್ನ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು. ಇವತ್ತು ನಿಮ್ಮ ವಿಶೇಷವಾದ ದಿನ. ನೀವು ಎಷ್ಟು ವಿಶೇಷ ಮತ್ತು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ನಿಮಗೆ ನೆನಪಿಸಬೇಕಾಗಿದೆ. ಮಾವಯ್ಯ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು. ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

Actor Mahesh Babu birthday wishes to his father Krishna

ಮಹೇಶ್ ಬಾಬು ಮಕ್ಕಳು ಸಹ ತಾತನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 2009ರಲ್ಲಿ ಭಾರತ ಸರ್ಕಾರ ಕೃಷ್ಣ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅಪ್ಪನ ಹುಟ್ಟುಹಬ್ಬದ ವಿಶೇಷವಾಗಿ ಇಂದು ಮಹೇಶ್ ಬಾಬು ನಟನೆಯ ಸರ್ಕಾರ ವಾರಿ ಪಾಟ ಚಿತ್ರದ ಪೋಸ್ಟರ್ ಅಥವಾ ಅಪ್ ಡೇಟ್ ಸಿಗಲಿದೆ ಎನ್ನುವ ಮಾತು ವೈರಲ್ ಆಗಿತ್ತು. ಆದರೆ ಈ ಸುದ್ದಿಯನ್ನು ಕಳೆದ ಎರಡು ದಿನಗಳ ಹಿಂದೆ ಚಿತ್ರತಂಡ ತಳ್ಳಿ ಹಾಕುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.

Recommended Video

ಗೆದ್ದ ಮೇಲೆ ನಿಮ್ಮ ಪಕ್ಷದವರೇ ನಿಮಗೆ ಉಲ್ಟಾ ಹೊಡೆದರೆ ಉಪ್ಪಿ ಏನ್ ಮಾಡ್ತಾರೆ | Filmibeat Kannada

More from Filmibeat

English summary
Tollywood Actor Prince Mahesh Babu's father krishna celebrating his 78th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X