ಬ್ಯಾಕ್ ಟು ಬ್ಯಾಕ್ ಟ್ರಿಪ್: ಗುಂಟೂರು ಖಾರಂ ಬಗ್ಗೆ ಮಾತನಾಡಿದವರಿಗೆ ಮಹೇಶ್ ಬಾಬು ತಿರುಗೇಟು!

ತೆಲುಗು ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಮತ್ತು ಮಕ್ಕಳಾದ ಗೌತಮ್ ಮತ್ತು ಸಿತಾರಾ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ತನ್ನ ಕುಟುಂಬದೊಂದಿಗೆ ಹೆಚ್ಚು ಪ್ರವಾಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್, ದುಬೈನಿಂದ ಸ್ಕಾಟ್ಲೆಂಡ್ ಸೇರಿದಂತೆ ಹಲವು ವಿದೇಶಿ ಸ್ಥಳಗಳಿಗೆ ಕಳೆದ ಕೆಲವು ತಿಂಗಳುಗಳಲ್ಲಿ ಬ್ಯಾಕ್ ಟು ಬ್ಯಾಕ್ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ.

ಇದೇ ಕಾರಣಕ್ಕೆ ಟ್ರೋಲ್ ಕೂಡ ಆಗುತ್ತಿದ್ದಾರೆ. ಹೌದು...ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಮಹೇಶ್ ಬಾಬು ತಮ್ಮ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಗುಂಟೂರು ಖಾರಂ' ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಚಿತ್ರದ ನಟರು, ತಂತ್ರಜ್ಞರು ಚಿತ್ರದಿಂದ ಹೊರನಡೆಯುತ್ತಾರೆ ಎಂಬ ವರದಿಗಳು ಸುತ್ತುತ್ತಿವೆ.

mahesh-babu-clarifies-on-guntur-kaaram

ಆರೋಪಗಳಿಗೆ ಉತ್ತರ ನೀಡಿದ ಮಹೇಶ್ ಬಾಬು

ಆಗಸ್ಟ್ 20 ರಂದು, ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮಹೇಶ್ ಬಾಬು ಅವರ ಪ್ರವಾಸಗಳ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಮಹೇಶ್ ಬಾಬು 'ಗುಂಟೂರು ಖಾರಂ' 2024 ರ ಸಂಕ್ರಾಂತಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ್ದಾರೆ. ಇದು ಟೀಕೆ ಮಾಡುತ್ತಿದ್ದವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಬಾಬು, "ನಾನು ಪ್ರವಾಸಕ್ಕೆ ಹೋಗುವುದು ನಿಮಗೇಕೆ ಇಷ್ಟವಿಲ್ಲ" ಎಂದು ಮರು ಪ್ರಶ್ನೆ ಹಾಕಿದ್ದಾರೆ. ಚಿತ್ರೀಕರಣದಿಂದ ಬಿಡುವು ಸಿಕ್ಕಾಗಲೆಲ್ಲಾ ತಾವು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಇಷ್ಟಪಡುವುದು ಮತ್ತು ಸಣ್ಣ ಪ್ರವಾಸಗಳನ್ನು ಮಾಡಲು ಇಷ್ಟಪಡುತ್ತಾರೆ ಎಂಬುದನ್ನು ಮತ್ತೆ ಒತ್ತಿ ಹೇಳಿದ್ದಾರೆ.

mahesh-babu-clarifies-on-guntur-kaaram

ಈ ವರ್ಷದ ಆರಂಭದಲ್ಲಿ, ನಟಿ ಪೂಜಾ ಹೆಗ್ಡೆ ದಿನಾಂಕದ ಸಮಸ್ಯೆಯನ್ನು ಉಲ್ಲೇಖಿಸಿ ಚಿತ್ರದಿಂದ ಹೊರನಡೆದಿದ್ದರು. ಇದಾದ ಬಳಿಕ ಸಂಗೀತ ಸಂಯೋಜಕ ಥಮನ್ ಚಿತ್ರದಿಂದ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಮಹೇಶ್ ಬಾಬು ಅವರ ವಿದೇಶ ಪ್ರವಾಸಗಳೇ ಸಿನಿಮಾ ವಿಳಂಬಕ್ಕೆ ಕಾರಣ ಹೀಗಾಗಿ ನಟರು, ತಂತ್ರಜ್ಞರು ಹೊರ ನಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.

'ಗುಂಟೂರು ಖಾರಂ'

ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿರುವ 'ಗುಂಟೂರು ಖಾರಂ' ಸಿನಿಮಾದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದೊಂದು ಆಕ್ಷನ್ ಎಂಟಟೈನರ್ ಆಗಿದೆ. ಚಿತ್ರದಲ್ಲಿ ನಟಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಜಯರಾಮ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಜನವರಿ 13, 2024 ರಂದು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹಾರಿಕಾ ಮತ್ತು ಹಾಸನ್ ನಿರ್ಮಿಸಿರುವ 'ಗುಂಟೂರು ಖಾರಂ' ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಾಹಕರಾದ ಮನೋಜ್ ಪರಮಹಂಸ, ಪಿ.ಎಸ್.ವಿನೋದ್ ಮತ್ತು ಸಂಕಲನಕಾರ ನವೀನ್ ನೂಲಿ ತಾಂತ್ರಿಕ ತಂಡದ ಭಾಗವಾಗಿದ್ದಾರೆ.

More from Filmibeat

English summary
Mahesh Babu clarifies on Guntur Kaaram's release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X