For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗ

  |

  ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಪ್ರಿನ್ಸ್ ಮಹೇಶ್ ಬಾಬು ಇಬ್ಬರನ್ನು ಒಂದೆ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಯಾವಾಗ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ 'ಆಚಾರ್ಯ' ಸಿನಿಮಾದಿಂದ ಸಿಹಿ ಸುದ್ದಿ ಕೇಳಿ ಬಂದಿತ್ತು.

  ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

  ಹೌದು, ಆಚಾರ್ಯ ಸಿನಿಮಾದಲ್ಲಿ ಮಹೇಶ್ ಬಾಬು ಅಭಿನಯಿಸುತ್ತಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದರು. ಆದರೀಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಮಹೇಶ್ ಬಾಬು ಸಿನಿಮಾದಿಂದ ಹೊರಬಂದಿದ್ದಾರಂತೆ. ಯಾಕೆ? ಮುಂದೆ ಓದಿ..

  ಚಿರಂಜೀವಿ ಸಿನಿಮಾದಿಂದ ಹೊರಬಂದ ತ್ರಿಷಾ ಜಾಗಕ್ಕೆ ಸ್ಟಾರ್ ನಟಿಯ ಎಂಟ್ರಿಚಿರಂಜೀವಿ ಸಿನಿಮಾದಿಂದ ಹೊರಬಂದ ತ್ರಿಷಾ ಜಾಗಕ್ಕೆ ಸ್ಟಾರ್ ನಟಿಯ ಎಂಟ್ರಿ

  ಚಿರು ಸಿನಿಮಾದಿಂದ ಹೊರಬಂದ ಮಹೇಶ್ ಬಾಬು

  ಚಿರು ಸಿನಿಮಾದಿಂದ ಹೊರಬಂದ ಮಹೇಶ್ ಬಾಬು

  ಮೊದಲ ಬಾರಿಗೆ ಚಿರಂಜೀವಿ ಮತ್ತು ಮಹೇಶ್ ಬಾಬು ಒಟ್ಟಿಗೆ ಒಂದೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಅಭಿಮಾನಿಗಳು ಸಂತಸಪಟ್ಟಿದ್ದರು. ಆದರೀಗ ಈ ಸಂತಸದ ಬೆನ್ನಲ್ಲೆ ನಿರಾಸೆಯ ಸುದ್ದಿ ಹೊರಬಿದ್ದಿದೆ. ಆಚಾರ್ಯ ಸಿನಿಮಾದಿಂದ ನಟ ಮಹೇಶ್ ಬಾಬು ಹೊರ ಬಂದಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಟಾಲಿವುಡ್ ಅಂಗಳದಿಂದ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲವಂತೆ.

  ಚಿರಂಜೀವಿ ಸಿನಿಮಾದ ಟೈಟಲ್ ರಿವೀಲ್: ಬಾಯಿತಪ್ಪಿ ಚಿತ್ರದ ಹೆಸರು ಹೇಳಿದ ಮೆಗಾಸ್ಟಾರ್ಚಿರಂಜೀವಿ ಸಿನಿಮಾದ ಟೈಟಲ್ ರಿವೀಲ್: ಬಾಯಿತಪ್ಪಿ ಚಿತ್ರದ ಹೆಸರು ಹೇಳಿದ ಮೆಗಾಸ್ಟಾರ್

  ಸಂಭಾವನೆ ವಿಚಾರವಾಗಿ ಹೊರನಡೆದ್ರಾ ಮಹೇಶ್?

  ಸಂಭಾವನೆ ವಿಚಾರವಾಗಿ ಹೊರನಡೆದ್ರಾ ಮಹೇಶ್?

  ಅಂದ್ಹಾಗೆ ಮಹೇಶ್ ಬಾಬು ಆಚಾರ್ಯ ಸಿನಿಮಾದಿಂದ ಹೊರ ಬರಲು ಕಾರಣ ಸಂಭಾವನೆ ವಿಚಾರ ಎಂದು ಹೇಳಲಾಗುತ್ತಿದೆ. ಚಿತ್ರಕ್ಕಾಗಿ ಮಹೇಶ್ ಬಾಬು 30 ರಿಂದ 35 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದರಂತೆ. ಸಿನಿಮಾ ತಂಡ ಇಷ್ಟು ಮೊತ್ತದ ಹಣ ನೀಡಲು ತಯಾರಿಲ್ಲವಂತೆ. ಹಾಗಾಗಿ ಮಹೇಶ್ ಬಾಬು ಅವರನ್ನು ಸಿನಿಮಾದಿಂದ ದೂರ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

  ಮಹೇಶ್ ಜಾಗಕ್ಕೆ ರಾಮ್ ಚರಣ್ ಎಂಟ್ರಿ

  ಮಹೇಶ್ ಜಾಗಕ್ಕೆ ರಾಮ್ ಚರಣ್ ಎಂಟ್ರಿ

  ಆಚಾರ್ಯ ಸಿನಿಮಾದ 30 ಸಿನಿಮಾದ ದೃಶ್ಯದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಬೇಕಿತ್ತು. ಆದರೆ ಮಹೇಶ್ ಬಾಬುಗೂ ಮೊದಲು ರಾಮ್ ಚರಣ್ ಅವರು ಅಭಿನಯಿಸುವುದು ಪಕ್ಕಾ ಆಗಿತ್ತು. ಆದರೆ ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ರಾಮ್ ಬದಲಿಗೆ ಮಹೇಶ್ ಬಾಬು ಮಾಡಿದರೆ ಹೇಗೆ ಎಂದು ನಿರ್ಧರಿಸಿ ಸಿನಿಮಾತಂಡ ಪ್ರಿನ್ಸ್ ಅವರನ್ನು ಕೇಳಿಕೊಂಡಿತ್ತು. ಆದರೀಗ ಸಂಭಾವನೆ ವಿಚಾರಕ್ಕೆ ಮಹೇಶ್ ಬಾಬು ಚಿತ್ರದಿಂದ ಹೊರಬಂದ ಕಾರಣ ಆ ಪಾತ್ರ ಮಾಡುವ ಜವಾಬ್ದಾರಿ ರಾಮ್ ಚರಣ್ ಅವರ ಹೆಗಲಿಗೆ ಬಿದ್ದಿದೆ.

  'ಬಿಗ್ ಬಾಸ್' ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡುತ್ತಾರಾ?'ಬಿಗ್ ಬಾಸ್' ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡುತ್ತಾರಾ?

  ರಾಮ್ ಚರಣ್ ನಿರ್ಮಾಣದ ಸಿನಿಮಾ

  ರಾಮ್ ಚರಣ್ ನಿರ್ಮಾಣದ ಸಿನಿಮಾ

  ಆಚಾರ್ಯ ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರದ ಕೇವಲ 30 ಸಿನಿಮಾಷದ ದೃಶ್ಯಕ್ಕೆ 30 ರಿಂದ 35 ಕೋಟಿ ಹೆಚ್ಚುವರಿ ವೆಚ್ಚ ಮಾಡುವುದು ಚಿರಂಜೀವಿ ಅವರಿಗೆ ಇಷ್ಟವಿಲ್ಲವಂತೆ. ಹಾಗಾಗಿ ಮಹೇಶ್ ಬಾಬು ಅವರ ಬದಲು ರಾಮ್ ಚರಣ್ ಅವರೆ ಕಾಣಿಸಿಕೊಂಡರೆ ಬಜೆಟ್ ಇನ್ನೂ ಕಡಿಮೆಯಾಗುತ್ತೆ ಎನ್ನುವ ಲೆಕ್ಕಾಚಾರ. ಹಾಗಾಗಿ ಈಗ ಮಹೇಶ್ ಬಾಬು ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Telugu Actor Mahesh Babu is not the part of chiranjeevi starrer acharya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X