ಮಹೇಶ್ ಬಾಬು ಹೊಸ ಸಿನಿಮಾದ ಟೈಟಲ್ ಲೀಕ್: ಗರಂ ಆದ ಪ್ರಿನ್ಸ್

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸರಿಲೇರು ನೀಕೆವ್ವರು ಸಿನಿಮಾ ಸಕ್ಸಸ್ ನ ನಂತರ ಮಹೇಶ್ ಬಾಬು ಮುಂದಿನ ಸಿನಿಮಾ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಆದರೆ ಮಹೇಶ್ ಬಾಬು ಗೀತಾ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡುತ್ತಿರುವುದು ಬಹುತೇಕ ಖಚಿತವಾಗಿದೆ.

Recommended Video

ಹನುಮಂತು ಹೋಟೆಲ್ ಬಿರಿಯಾನಿ ಅಂದ್ರೆ ಅಂಬರೀಶ್ ಗೆ ಪಂಚಪ್ರಾಣ | Ambareesh favourite food & hotels

ಈಗಾಗಲೆ ಮಹೇಶ್ ಬಾಬು ಮತ್ತು ನಿರ್ದೇಶಕ ಪರಶುರಾಮ್ ಕಾಂಬಿನೇಶನ್ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ. ಈಗಾಗಲೆ ಸಿನಿಮಾದ ಕಥೆ ಲೀಕ್ ಆಗಿದ್ದು ಆಘಾತದಲ್ಲಿದ್ದ ಚಿತ್ರತಂಡಕ್ಕೆ ಟೈಟಲ್ ಲೀಕ್ ಆಗಿರುವುದು ಮತ್ತೊಂದು ದೊಡ್ಡ ತಲೆನೋವಾಗಿದೆ. ಮುಂದೆ ಓದಿ..

ಅಫ್ಪನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಸಿದ್ಧವಾಗಿದ್ದ ಪ್ರಿನ್ಸ್

ಅಫ್ಪನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಸಿದ್ಧವಾಗಿದ್ದ ಪ್ರಿನ್ಸ್

ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಸಿದ್ಧವಾಗಿತ್ತು. ಆದರೀಗ ಆಗಲೇ ಚಿತ್ರದ ಟೈಟಲ್ ಬಹಿರಂಗವಾಗಿರುವುದು ಚಿತ್ರತಂಡಕ್ಕೆ ಬೇಸರ ತರಿಸಿದೆ. ಅಂದ್ಹಾಗೆ ಇದೇ ಇದೆ ತಿಂಗಳು ೩೧ಕ್ಕೆ ಮಹೇಶ್ ಬಾಬು ತಂದೆಯ ಹುಟ್ಟುಹಬ್ಬ.

ಲೀಕ್ ಆದ ಟೈಟಲ್ ಏನು?

ಲೀಕ್ ಆದ ಟೈಟಲ್ ಏನು?

ಮಹೇಶ್ ಬಾಬು ಮತ್ತು ನಿರ್ದೇಶಕ ಪರಶುರಾಮ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷೆಯ ಚಿತ್ರಕ್ಕೆ 'ಸರ್ಕಾರ ವಾರಿ ಪಾಟ' ಎಂದು ಟೈಟಲ್ ಇಡಲಾಗಿದೆಯಂತೆ. ತಂಡದ ಅಜಾಗರುಕತೆಯೇ ಟೈಟಲ್ ಲೀಕ್ ಆಗಲು ಕಾರಣ ಎಂದು ಮಹೇಶ್ ಬಾಬು ಫುಲ್ ಗರಂ ಆಗಿದ್ದಾರಂತೆ. ಅಲ್ಲದೆ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರದ ಕಥೆ ಲೀಕ್

ಚಿತ್ರದ ಕಥೆ ಲೀಕ್

ಕಳೆದ ಕೆಲವು ದಿನಗಳ ಹಿಂದೆ ಚಿತ್ರದ ಕಥೆ ಕೂಡ ಲೀಕ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. "ಚಿತ್ರದಲ್ಲಿ ಮಹೇಶ್ ಬಾಬು ತಾಯಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿಯೊಬ್ಬರು ಮಹೇಶ್ ಬಾಬು ತಾಯಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ ಕೋಟಿ ಕೋಟಿ ಹಣ ಸಾಲ ಪಡೆಯುತ್ತಾರೆ. ಆದರೆ ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಮಹೇಶ್ ಬಾಬು ಯು ಎಸ್ ಎಯಲ್ಲಿ ನೆಲೆಸಿರುತ್ತಾರೆ. ಸಾಲ ಪಡೆದ ಖ್ಯಾತ ಉದ್ಯಮಿಯ ಮಗಳು ಸಹ ಯು ಎಸ್ ಎಯಲ್ಲಿ ನೆಲೆಸಿರುತ್ತಾರೆ. ಮಗಳನ್ನು ಪರಿಚಯ ಮಾಡಿಕೊಂಡು ಪ್ರೀತಿಸಲು ಪ್ರಾರಂಭಿಸುತ್ತಾರೆ. ನಂತರ ಅವಳು ಮಹೇಶ್ ಬಾಬು ಅವರನ್ನು ಮದುವೆ ಆಗುವಂತೆ ಒತ್ತಾಯಿಸುತ್ತಾಳೆ. ಆಗ ಮಹೇಶ್ ಬಾಬು ಅಪ್ಪ ಪಡೆದ ಸಾಲವನ್ನು ಅಮ್ಮನ ಬ್ಯಾಂಕ್ ಗೆ ಮರುಪಾವತಿಸುವಂತೆ ಶರತ್ತು ಹಾಕುತ್ತಾರೆ" ಇದೆ ಸಿನಿಮಾದ ಕಥೆ ಎಂದು ಹೇಳಲಾಗುತ್ತಿದೆ.

ಶ್ರದ್ಧಾ ಕಪೂರ್ ನಾಯಕಿ

ಶ್ರದ್ಧಾ ಕಪೂರ್ ನಾಯಕಿ

ಮಹೇಶ್ ಬಾಬು ಮತ್ತು ಪರಶುರಾಮ್ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದರೆ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಈಗಾಗಲೆ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಶ್ರದ್ಧಾ ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Actor Mahesh Babu new movie title leaked. Parasuram directed this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X