For Quick Alerts
  ALLOW NOTIFICATIONS  
  For Daily Alerts

  ಹಿಟ್ ನೀಡಿದ ನಿರ್ದೇಶಕನ ಚಿತ್ರದಿಂದ ಮಹೇಶ್ ಬಾಬು ಔಟ್

  |

  'ಮಹರ್ಶಿ' ಚಿತ್ರದ ಗೆಲುವಿನಿಂದ ಥ್ರಿಲ್ ಆಗಿದ್ದ ತೆಲುಗು ಸ್ಟಾರ್ ನಟ ಮಹೇಶ್ ಬಾಬು, ಮತ್ತೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸಕ್ತಿ ತೋರಿದ್ದರು.

  ಅಂತೆಯೇ 'ಮಹರ್ಶಿ' ಚಿತ್ರ ನಿರ್ದೇಶಿಸಿದ್ದ ವಂಶಿ ಪೈಡಿಪಲ್ಲಿ ಜೊತೆ ಹೊಸ ಚಿತ್ರ ಮಾಡಲು ಸಿದ್ಧವಾಗಿದ್ದರು. ಮಹೇಶ್ ಅಭಿಮಾನಿಗಳೂ ಸಹ ಹೊಸ ಚಿತ್ರಕ್ಕಾಗಿ ಕಾಯುತ್ತಿದ್ದರು. ಆದರೆ ಹಠಾತ್ತನೆ ಚಿತ್ರದಿಂದ ಮಹೇಶ್ ಹೊರಬಂದಿದ್ದಾರೆ.

  ಹೌದು, ಪ್ರಸ್ತುತ ರಜೆ ಮೂಡ್‌ನಲ್ಲಿರುವ ಮಹೇಶ್ ಬಾಬು, ಕೆಲವೇ ದಿನಗಳಲ್ಲಿ ವಂಶಿ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಅಚಾನಕ್ಕಾಗಿ ಮಹೇಶ್ ಅವರು ಚಿತ್ರದಿಂದ ಹೊರಗೆ ಬಂದಿದ್ದಾರೆ. ಇದಕ್ಕೆ ಚಿತ್ರದ ಕತೆ ಮಹೇಶ್ ಬಾಬು ಗೆ ಒಪ್ಪಿಗೆ ಆಗದಿರುವುದೇ ಕಾರಣ ಎನ್ನಲಾಗಿದೆ.

  'ಮಹರ್ಶಿ' ಚಿತ್ರದಲ್ಲಿ ಮಿಂಚಿದ್ದ ಮಹೇಶ್ ಬಾಬು

  'ಮಹರ್ಶಿ' ಚಿತ್ರದಲ್ಲಿ ಮಿಂಚಿದ್ದ ಮಹೇಶ್ ಬಾಬು

  'ಮಹರ್ಶಿ' ಚಿತ್ರದಲ್ಲಿ ಸಾಮಾಜಿಕ ಮೌಲ್ಯಗಳುಳ್ಳ ಶ್ರೀಮಂತ ವ್ಯಕ್ತಿಯಾಗಿ ಮಿಂಚಿದ್ದ ಮಹೇಶ್‌ ಬಾಬು ಅನ್ನು ಭೂಗತ ಪಾತಕಿಯಾಗಿ ತೋರಿಸುವ ಕತೆಯನ್ನು ವಂಶಿ ತಯಾರು ಮಾಡಿದ್ದರು. ಈ ಕತೆ ಒಪ್ಪದೆ ಮಹೇಶ್ ಬಾಬು ಚಿತ್ರದಿಂದ ಹೊರಬಂದಿದ್ದಾರೆ.

  ಕತೆ ತಿದ್ದುತ್ತಿರುವ ನಿರ್ದೇಶಕ ವಂಶಿ ಪೈಡಿಪಲ್ಲಿ

  ಕತೆ ತಿದ್ದುತ್ತಿರುವ ನಿರ್ದೇಶಕ ವಂಶಿ ಪೈಡಿಪಲ್ಲಿ

  ಆದರೆ ಚಿತ್ರದ ಕತೆಯನ್ನು ತಿದ್ದಿದಲ್ಲಿ ತಾವು ನಟಿಸುವುದಾಗಿ ಮಹೇಶ್ ಬಾಬು ಹೇಳಿರುವ ಕಾರಣ, ನಿರ್ದೇಶಕ ವಂಶಿ ಕತೆ ತಿದ್ದುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

  ಗೀತಾ ಗೋವಿಂದಂ ನಿರ್ದೇಶಕರೊಂದಿಗೆ ಚಿತ್ರ

  ಗೀತಾ ಗೋವಿಂದಂ ನಿರ್ದೇಶಕರೊಂದಿಗೆ ಚಿತ್ರ

  ಗೀತಾ ಗೋವಿಂದಂ ನಿರ್ದೇಶಕ ಪರಶುರಾಂ ಮಹೇಶ್ ಬಾಬು ಅವರಿಗೆ ಕತೆಯೊಂದನ್ನು ಹೇಳಿದ್ದು, ಆ ಕತೆಯ ಬಗ್ಗೆ ಮಹೇಶ್ ಬಾಬು ಆಸಕ್ತಿವಹಿಸಿದ್ದಾರೆ ಹಾಗಾಗಿ ವಂಶಿ ಚಿತ್ರವನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿಯೂ ತೆಲುಗು ಸಿನಿರಂಗದಲ್ಲಿ ಹರಿದಾಡುತ್ತಿದೆ.

  ಬಾಲಿವುಡ್‌ ಗೆ ಪಾದಾರ್ಪಣೆ ಮಾಡುತ್ತಿರುವ ಮಹೇಶ್ ಬಾಬು

  ಬಾಲಿವುಡ್‌ ಗೆ ಪಾದಾರ್ಪಣೆ ಮಾಡುತ್ತಿರುವ ಮಹೇಶ್ ಬಾಬು

  ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಬಾಲಿವುಡ್ ಪ್ರವೇಶಕ್ಕೂ ಸಜ್ಜಾಗಿದ್ದಾರೆ. ರಣವೀರ್ ಸಿಂಗ್ ನಟನೆಯ ಸಾಜಿದ್ ನಾಡಿಯಾವಾಲಾ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ.

  English summary
  Actor Mahesh Babu put stay to director Vamshi Paidipally's movie. sources saying he dislike the scripte so he stay put.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X