For Quick Alerts
  ALLOW NOTIFICATIONS  
  For Daily Alerts

  ನಿಜ ಜೀವನದಲ್ಲೂ ಹೀರೊ ಮಹೇಶ್‌ ಬಾಬು; ಟಾಲಿವುಡ್ ಪ್ರಿನ್ಸ್ ಒಟ್ಟು ಆಸ್ತಿ ಮೌಲ್ಯ ಎಷ್ಟು?

  |

  ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೆನ್ಸೇಷನ್‌ ಕ್ರಿಯೇಟ್ ಮಾಡಿರುವ ತೆಲುಗು ನಟ ಮಹೇಶ್ ಬಾಬು. ಬಾಲಿವುಡ್ ಚಿತ್ರದಲ್ಲಿ ನಟಿಸದೇ ಇದ್ದರೂ ನ್ಯಾಷನಲ್‌ ವೈಡ್‌ ಟಾಲಿವುಡ್‌ ಪ್ರಿನ್ಸ್‌ಗೆ ಕ್ರೇಜ್‌ ಇದೆ. ಬಿಟೌನ್‌ ನಿರ್ಮಾಪಕರೇ ಕಾಲ್‌ಶೀಟ್‌ ಕೇಳಿದರೂ ಅತ್ತ ಮುಖ ಮಾಡುತ್ತಿಲ್ಲ ಮಹೇಶ್ ಬಾಬು.

  ಇಂದು(ಆಗಸ್ಟ್ 9) ಸೂಪರ್‌ ಸ್ಟಾರ್‌ ಮಹೇಶ್ ಬಾಬು 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 50ರ ಸಮೀಪದಲ್ಲಿದ್ದರೂ ಚಿರಯುವಕನಂತೆ ಮಿಂಚುತ್ತಿರುವ ಮಹೇಶ್ ಬಾಬು ಗ್ಲಾಮರ್ ಸೀಕ್ರೆಟ್ ಏನು ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ತಂದೆ ಸೂಪರ್ ಸ್ಟಾರ್ ಕೃಷ್ಣ ಹಾದಿಯಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಮುಂದೆ ಹೀರೊ ಆಗಿಯೂ ಯಶಸ್ವಿಯಾದರು.

  ಮಹೇಶ್ ಬಾಬು ಬರ್ತ್‌ಡೇಗೆ 'ಪೋಕಿರಿ' ರೀ-ರಿಲೀಸ್ : ಬಾಕ್ಸಾಫೀಸ್ ಗಡ ಗಡ!ಮಹೇಶ್ ಬಾಬು ಬರ್ತ್‌ಡೇಗೆ 'ಪೋಕಿರಿ' ರೀ-ರಿಲೀಸ್ : ಬಾಕ್ಸಾಫೀಸ್ ಗಡ ಗಡ!

  ನಟನಾಗಿ ಮಾತ್ರವಲ್ಲದೇ ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಮಹೇಶ್ ಬಾಬು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಚಿತ್ರವೊಂದಕ್ಕೆ ಹತ್ತಾರು ಕೋಟಿ ಸಂಭಾವನೆ ಪಡೆಯುವ ಟಾಲಿವುಡ್ ಪ್ರಿನ್ಸ್, ಜಾಹೀರಾತುಗಳಿಂದಲೂ ಪ್ರತಿ ವರ್ಷ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. 'ರಾಜಕುಮಾರುಡು' ಚಿತ್ರದ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ ಮಹೇಶ್‌ ಬಾಬು ತೆಲುಗು ಚಿತ್ರರಂಗದಲ್ಲಿ ರಾಜಕುಮಾರನಂತೆಯೇ ಮೆರೆಯುತ್ತಿದ್ದಾರೆ.

   ಮಹೇಶ್ ಬಾಬು ಸಂಭಾವನೆ?

  ಮಹೇಶ್ ಬಾಬು ಸಂಭಾವನೆ?

  ಪ್ರಿನ್ಸ್ ಮಹೇಶ್ ಬಾಬು ನಟನೆಯ ಸಿನಿಮಾಗಳು ಅನಾಯಾಸವಾಗಿ 100 ರಿಂದ 150 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ಅದಕ್ಕೆ ತಕ್ಕಂತೆ ಮಹೇಶ್ ಬಾಬು ಸಹ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. 'ಸರ್ಕಾರು ವಾರಿ ಪಾಟ' ಚಿತ್ರಕ್ಕೆ 50 ಕೋಟಿ ರೂ. ಸಂಭಾವನೆ ಪಡೆದಿದ್ದ ಪ್ರಿನ್ಸ್ ಮುಂದಿನ ಚಿತ್ರಕ್ಕೆ 70 ಕೋಟಿ ರೂ. ಚಾರ್ಜ್ ಮಾಡ್ತಿದ್ದಾರೆ ಅನ್ನಲಾಗ್ತಿದೆ. ಇನ್ನು ಹಲವು ವಾಣಿಜ್ಯ ಉತ್ಪನ್ನಗಳ ರಾಯಭಾರಿ ಆಗಿರುವ ಮಹೇಶ್‌ ಬಾಬು ಕೋಟಿ ಕೋಟಿ ರೂ. ಗಳಿಸುತ್ತಿದ್ದಾರೆ.

   ಮಹೇಶ್ ಬಾಬು ಆಸ್ತಿ ಎಷ್ಟು?

  ಮಹೇಶ್ ಬಾಬು ಆಸ್ತಿ ಎಷ್ಟು?

  ಟಾಲಿವುಡ್ ಮೂಲಗಳ ಪ್ರಕಾರ ಮಹೇಶ್ ಬಾಬು ಒಟ್ಟಾರೆ ಆಸ್ತಿ ಮೌಲ್ಯ 2000 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಹೇಳಿ ಕೇಳಿ ಸೂಪರ್ ಸ್ಟಾರ್ ಕೃಷ್ಣ ಪುತ್ರ. ಜೊತೆಗೆ ಪತ್ನಿ ನಮ್ರತಾ ಮನೆಯಿಂದಲೂ ಸಾಕಷ್ಟು ಆಸ್ತಿ ಸಿಕ್ಕಿದೆಯಂತೆ. ಇನ್ನು ಚಿತ್ರವೊಂದಕ್ಕೆ 50ರಿಂದ 60 ಕೋಟಿ ರೂ. ಸಂಭಾವನೆಯಾಗಿ ಪಡೆಯುವ ಪ್ರಿನ್ಸ್‌ ಆಸ್ತಿ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.

   ಐಷಾರಾಮಿ ಮನೆ, ದುಬಾರಿ ಕಾರುಗಳು

  ಐಷಾರಾಮಿ ಮನೆ, ದುಬಾರಿ ಕಾರುಗಳು

  ಮಹೇಶ್‌ ಬಾಬು ಬ್ಯೂಬಿಲಿ ಹಿಲ್ಸ್‌ನಲ್ಲಿರುವ ಅರಮನೆಯಂತಹ ಮನೆಯಲ್ಲಿ ಪತ್ನಿ ಮಕ್ಕಳ ಜೊತೆ ವಾಸವಾಗಿದ್ದಾರೆ. ಬಹಳ ವಿಶಾಲವಾದ ಜಾಗದಲ್ಲಿ ಬಹಳ ಅದ್ಧೂರಿಯಾಗಿ ಮನೆ ನಿರ್ಮಾಣ ಮಾಡಲಾಗಿದ್ದು, ಆ ಮನೆಯ ಮೌಲ್ಯವೇ ಅಂದಾಜು 30 ಕೋಟಿ ರೂಪಾಯಿ. ಇನ್ನು ದೇಶ ವಿದೇಶಗಳಲ್ಲಿ ವಿವಿಧ ವ್ಯಾಪಾರಗಳಲ್ಲಿ ಮಹೇಶ್ ಬಾಬು ಹಣ ತೊಡಗಿಸಿದ್ದಾರೆ ಅನ್ನುವ ಮಾಹಿತಿಯೂ ಇದೆ. ಒಂದು ಪ್ರೈವೇಟ್ ಜೆಟ್ ಹಾಗೂ ವ್ಯಾನಿಟಿ ವ್ಯಾನ್ ಕೂಡ ಮಹೇಶ್ ಬಾಬು ಬಳಿಯಿದೆ.

  ಮಹೇಶ್ ಬಾಬು ಬಳಿ ಇರುವ ಕಾರುಗಳು

  1. ರೇಂಜ್ ರೋವರ್ ವೋಗ್- 3.50 ಕೋಟಿ ರೂ.
  2. ಆಡಿ ಎ8- 1.57 ಕೋಟಿ ರೂ.
  3. ಲಾಂಬೋರ್ಗಿನಿ ಗಲ್ಲಾರ್ಡೊ- 2.80 ಕೋಟಿ ರೂ.
  4. ಮರ್ಸಿಡೀಸ್ ಬೆನ್ಜ್- 82 ಲಕ್ಷ ರೂ.
  5. ಬಿಎಂಡಬ್ಲ್ಯೂ 730 ಎಲ್‌ಡಿ- 1.31 ಕೋಟಿ ರೂ.
  6. ಟೊಯಾಟೊ ಲ್ಯಾಂಡ್ ಕ್ರೂಸರ್- 1.5 ಕೋಟಿ ರೂ.
  7. ಆಡಿ ಇಟ್ರಾನ್- 1.19 ಕೋಟಿ ರೂ.

   ನಿಜ ಜೀವನದಲ್ಲೂ ಪ್ರಿನ್ಸ್ ಹೀರೊ!

  ನಿಜ ಜೀವನದಲ್ಲೂ ಪ್ರಿನ್ಸ್ ಹೀರೊ!

  ಸಾಮಾಜಿಕ ಕೆಲಸಗಳ ಮೂಲಕ ನಿಜ ಜೀವನದಲ್ಲೂ ಮಹೇಶ್‌ ಬಾಬು ಹೀರೊ ಅನ್ನಿಸಿಕೊಂಡಿದ್ದಾರೆ. ತಮ್ಮ 'ಮಹೇಶ್ ಬಾಬು ಫೌಂಡೇಷನ್‌'ನಿಂದ ಈಗಾಗಲೇ ಸಾವಿರಾರು ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಗುಣಮುಖರನ್ನಾಗಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಬಡ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಹಣ ನೀಡಿ ಜೀವ ಉಳಿಸಿದ್ದಾರೆ. ತಮ್ಮ ಸಂಭಾವನೆಯ ಶೇ. 30ರಷ್ಟು ಹಣವನ್ನು ಮಹೇಶ್‌ ಬಾಬು ಈ ಫೌಂಡೇಷನ್‌ಗೆ ನೀಡುತ್ತಾರೆ ಅನ್ನುವ ಮಾಹಿತಿಯಿದೆ.

   2 ಹಳ್ಳಿ ದತ್ತು ಪಡೆದ ರಾಜಕುಮಾರ

  2 ಹಳ್ಳಿ ದತ್ತು ಪಡೆದ ರಾಜಕುಮಾರ

  'ಶ್ರೀಮಂತುಡು' ಚಿತ್ರದಲ್ಲಿ ಶ್ರೀಮಂತರು ಹಳ್ಳಿಗಳನ್ನ ದತ್ತು ತೆಗೆದುಕೊಳ್ಳಬೇಕು ಎಂದು ಮಹೇಶ್ ಬಾಬು ಸಾರಿದ್ದರು. ಅಷ್ಟೇ ಅಲ್ಲ ನಿಜಜೀವನದಲ್ಲೂ ಬುರಿಪಾಲೆಂ ಹಾಗೂ ಸಿದ್ಧಾಪುರಂ ಅನ್ನುವ ಎರಡು ಹಳ್ಳಿಗಳನ್ನು ದತ್ತು ಪಡೆದುಕೊಂಡಿದ್ದರು. ಆ ಹಳ್ಳಿಗಳಿಗೆ ಸಾಕಷ್ಟು ಸಹಾಯ ಮಾಡಿರುವ ಮಹೇಶ್ ಬಾಬು ಅಲ್ಲಿ ಮೂಲ ಸೌಕರ್ಯ ದೊರಕಿಸಿಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಎರಡೂ ಹಳ್ಳಿಗಳ ಜನರಿಗೆ ಸರ್ಕಾರದ ಅಧಿಕಾರಿಗಳ ಜೊತೆ ಮಾತನಾಡಿ ಕೋವಿಡ್ ವ್ಯಾಕ್ಸಿನ್ ವ್ಯವಸ್ಥೆ ಮಾಡಿದ್ದರು.

  English summary
  Actor Mahesh Babu Total net worth And Luxurious Lifestyle. Know More.
  Wednesday, August 10, 2022, 10:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X