"ಸಮಂತಾ ತುಂಬಾ ಒಳ್ಳೆ ಹುಡ್ಗಿ.. ನಮ್ಮ ಡಿವೋರ್ಸ್‌ಗೆ ಕಾರಣ ಏನು ಅಂದ್ರೆ..?": ಕೊನೆಗೂ ಮೌನ ಮುರಿದ ನಾಗಚೈತನ್ಯಾ

ನಟ ನಾಗಚೈತನ್ಯಾ ಹಾಗೂ ಸಮಂತಾ ದಂಪತಿ ದೂರಾಗಿ 2 ವರ್ಷಗಳಾಗುತ್ತಿದೆ. ಆದರೆ ಇಬ್ಬರು ಡಿವೋರ್ಸ್ ಪಡೆಯಲು ಕಾರಣ ಏನು ಎನ್ನುವ ಬಗ್ಗೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇಬ್ಬರ ಡಿವೋರ್ಸ್ ವಿಷಯ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದರು. ಪ್ರೀತಿಸಿ ಮದುವೆ ಆಗಿದ್ದ ಜೋಡಿ ಈ ನಿರ್ಧಾರಕ್ಕೆ ಬರಲು ಏನು ಕಾರಣ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ ಆಗಿತ್ತು.

ಚೈಸ್ಯಾಮ್ ಡಿವೋರ್ಸ್ ನಂತರ ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಸ್ಯಾಮ್ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ನಡುವೆಯೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ನಾಗಚೈತನ್ಯ ನಟನೆಯ 'ಕಸ್ಟಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಈ ಸಿನಿಮಾ ಪ್ರಚಾರದ ವೇಳೆ ಅಕ್ಕಿನೇನಿ ಫ್ಯಾಮಿಲಿ ಹೀರೊ ಡಿವೋರ್ಸ್ ಬಗ್ಗೆ ಮೌನ ಮುರಿದಿದ್ದಾರೆ. ಮಾಜಿ ಪತ್ನಿ ಸಮಂತಾ ಕುರಿತು ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಸದ್ಯ ಇದೇ ವಿಚಾರ ಈಗ ಟಾಲಿವುಡ್‌ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.

Actor Naga chaitanya finally reveals the reason behind his divorce from Samantha

ನಾಗಚೈತನ್ಯಾ ಮಾತನಾಡುತ್ತಾ "ನಾವಿಬ್ಬರು ದೂರಾಗಿ 2 ವರ್ಷಗಳಾಯಿತು. ವರ್ಷದ ಹಿಂದೆ ಕಾನೂನು ಪ್ರಕಾರ ಡಿವೋರ್ಸ್ ಸಿಕ್ಕಿದೆ. ಸದ್ಯ ನಮ್ಮ ನಮ್ಮ ಲೈಫ್‌ನಲ್ಲಿ ನಾವು ಬ್ಯುಸಿ ಆಗಿದ್ದೀವಿ. ನಾವು ಬೇರಾದರೂ ಆಕೆ ಜೊತೆಗಿದ್ದ ದಿನಗಳನ್ನು ಬಹಳ ಗೌರವಿಸುತ್ತೇನೆ. ನಿಜ ಹೇಳಬೇಕು ಅಂದ್ರೆ ಸಮಂತಾ ಬಹಳ ಒಳ್ಳೆಯವಳು. ಎಲ್ಲಾ ಸಂತೋಷಕ್ಕೂ ಆಕೆ ಅರ್ಹಳು" ಎಂದು ಹೇಳಿದ್ದಾರೆ.

Actor Naga chaitanya finally reveals the reason behind his divorce from Samantha

"ನಾವಿಬ್ಬರು ದೂರಾಗಲು ನಿಜವಾದ ಕಾರಣ ವದಂತಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಊಹಾಪೋಹ, ಮಾಧ್ಯಮಗಳಲ್ಲಿ ಬಂದ ಕೆಲ ಸುದ್ದಿಗಳೇ ನಮ್ಮ ನಡುವೆ ಜಗಳಕ್ಕೆ ಕಾರಣವಾಗಿತ್ತು. ಮೊದಲಿಗೆ ಆ ವದಂತಿಗಳ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ನಂತರ ಅವೇ ದೊಡ್ಡದಾಗುತ್ತಾ ಹೋದವು. ಅದು ಕೊನೆಗೆ ಡಿವೋರ್ಸ್‌ವರೆಗೆ ಕೊಂಡೊಯ್ಯಿತು" ಎಂದು ನಾಗಚೈನನ್ಯಾ ವಿವರಿಸಿದ್ದಾರೆ.

ಇತ್ತೀಚೆಗೆ ಬಂದ ಡೇಟಿಂಗ್ ವದಂತಿ ಬಗ್ಗೆ ಮಾತನಾಡಿರುವ ಚೈತನ್ಯಾ "ಜನ ಈಗಲೂ ನನ್ನ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ. ಸಮಂತ ಇಲ್ಲದ 3ನೇ ವ್ಯಕ್ತಿಯನ್ನು ಇಲ್ಲಿ ಎಳೆದು ತರುತ್ತಿದ್ದಾರೆ. ಆಕೆಗೆ ಅಗೌರವ ಆಗುವಂತೆ ಮಾಡುತ್ತಿದ್ದಾರೆ. ಜೀವನದಲ್ಲಿ ಪ್ರತಿಯೊಂದು ಕೂಡ ಗುಣಪಾಠವೇ. ಪ್ರತಿ ಹಂತದಲ್ಲೂ ಏನಾದರೂ ಒಂದನ್ನು ಕಲಿಯುತ್ತೇವೆ. ಸದ್ಯ ಏನೇ ನಡೆದರೂ ಒಳ್ಳೆದಕ್ಕೆ ಎಂದುಕೊಳ್ಳುತ್ತಿದ್ದೇನೆ. ಈಗ ನಾನು ಕೂಡ ಸಂತೋಷವಾಗಿ ಇದ್ದೀನಿ" ಎಂದಿದ್ದಾರೆ. ಚೈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ನಾಗಚೈತನ್ಯಾ ನಟನೆಯ 'ಕಸ್ಟಡಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಅಕ್ಕಿನೇನೆ ಫ್ಯಾಮಿಲಿ ಹೀರೋಗಳ ಸಿನಿಮಾಗಳ ಹೀನಾಯಾವಾಗಿ ಸೋಲುತ್ತಿವೆ. ನಾಗಾರ್ಜುನ ನಟನೆಯ 'ದಿ ಘೋಷ್ಟ್', ಅಖಿಲ್ ಅಕ್ಕಿನೇನಿ ನಟನೆಯ 'ಏಜೆಂಟ್' ಸಿನಿಮಾಗಳು ದಯನೀಯವಾಗಿ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದವು. ಇನ್ನು ನಟಿಸಿದ್ದ ಬಾಲಿವುಡ್ ಸಿನಿಮಾ 'ಲಾಲ್‌ ಸಿಂಗ್ ಚಡ್ಡಾ' ಕಳೆದ ವರ್ಷ ಮುಗ್ಗರಿಸಿತ್ತು. ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಒಂದೊಳ್ಳೆ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಡಿವೋರ್ಸ್ ನಂತರ ಸಮಂತಾ 'ಪುಷ್ಪ' ಚಿತ್ರದ ಐಟಂ ಸಾಂಗ್‌ನಿಂದ ಭಾರೀ ಸುದ್ದಿ ಮಾಡಿದ್ದರು. 'ಯಶೋದ' ಸಿನಿಮಾ ಒಂದು ರೇಂಜಿಗೆ ಸದ್ದು ಮಾಡಿದ್ರು, 'ಶಾಕುಂತಲಂ' ಸಿನಿಮಾ ಹೀನಾಯವಾಗಿ ಸೋತಿತ್ತು. ಸದ್ಯ ಬಾಲಿವುಡ್‌ನಲ್ಲಿ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಸ್ಯಾಮ್ ಬಣ್ಣ ಹಚ್ಚಿದ್ದಾರೆ. ವಿಜಯ್ ದೇವರಕೊಂಡ ಜೊತೆ 'ಖುಷಿ' ರೊಮ್ಯಾಂಟಿಕ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇನ್ನು ಮಯೋಸೈಟಿಸ್ ಸಮಸ್ಯೆಯಿಂದ ಹೊರ ಬರಲು ಸ್ಯಾಮ್ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಚಿಕಿತ್ಸೆಯ ಜೊತೆಗೆ ಜಿಮ್ ವರ್ಕೌಟ್, ಧ್ಯಾನ ಮಾಡುತ್ತಿದ್ದಾರೆ.

More from Filmibeat

English summary
Actor Naga chaitanya finally reveals the reason behind his divorce from Samantha. the couple issued a statement on October 2nd, 2021 as they ended their marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X