ಕ್ಯಾನ್ಸರ್ ಪೀಡಿತ ಪುಟಾಣಿಗಳ ಜೊತೆಗೆ ಮಗುವಾಗಿ ಆಟವಾಡಿದ ನಟ ನಾಗ ಚೈತನ್ಯ
ತಮ್ಮ ನೆಚ್ಚಿನ ನಟ, ನಟಿಯರನ್ನು ಭೇಟಿಯಾಗಲು ಕೋಟ್ಯಾಂತರ ಮಂದಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅವರೊಂದಿಗೆ ಕಳೆಯುವ ಒಂದೆರಡು ನಿಮಿಷಗಳನ್ನೆ ನೆನೆಯುತ್ತಾ ಖುಷಿ ಪಡುತ್ತಾರೆ. ಆದರೆ, ಕೆಲವೇ ಕೆಲವು ಜನರನ್ನು ಮಾತ್ರ ಕಲಾವಿದರೆ ಹುಡುಕಿಕೊಂಡು ಹೋಗುತ್ತಾರೆ ಅವರೊಂದಿಗೆ ಸಮಯ ಕಳೆಯುತ್ತಾರೆ. ಅವರ ಜೊತೆಗೆ ಕಳೆದ ಕ್ಷಣಗಳಿಗೆ ಮೌಲ್ಯ ನೀಡುತ್ತಾರೆ.
ಹೌದು....ಇದು ಅಂತಹದ್ದೆ ಪುಟಾಣಿಗಳ ಕಥೆ ಇದು. ತಮ್ಮ ನೆಚ್ಚಿನ ನಟ ನಾಗ ಚೈತನ್ಯರನ್ನು ನೋಡಬೇಕು ಎಂದುಕೊಂಡಿದ್ದ ಪುಟಾಣಿಗಳಿಗೆ ನಟ ಖುದ್ದು ಹುಡುಕಿಕೊಂಡು ಹೋಗಿ ಅವರ ಜೊತೆಗೆ ಸಾಕಷ್ಟು ಸಮಯ ಕಳೆದಿರುವ ಘಟನೆ ವರದಿಯಾಗಿದೆ. ಹೈದರಾಬಾದ್‌ನ ಸೇಂಟ್ ಜೂಡ್ಸ್‌ನಲ್ಲಿ ಕ್ಯಾನ್ಸರ್ ರೋಗದಿಂದ ಹಿಂಸೆ ಅನುಭವಿಸುತ್ತಿರುವ ಮಕ್ಕಳ ಜೊತೆಗೆ ನಾಗ ಚೈತನ್ಯ ಮಗುವಾಗಿ ಬೆರೆತಿದ್ದಾರೆ.

ಕ್ಯಾನ್ಸರ್ ಪೀಡಿತ ಪುಟಾಣಿಗಳೊಂದಿಗೆ ನಟ ನಾಗ ಚೈತನ್ಯ
ಕ್ಯಾನ್ಸರ್ ಪೀಡಿತ ಪುಟಾಣಿಗಳೊಂದಿಗೆ ಸಮಯ ಕಳೆಯಲು ತೆಲುಗು ನಟ ನಾಗ ಚೈತನ್ಯ ತಮ್ಮ ಸಿನಿಮಾ ಶೂಟಿಂಗ್‌ಗಳಿಂದ ಬಿಡುವು ತೆಗೆದುಕೊಂಡಿದ್ದಾರೆ. ಮಕ್ಕಳ ಜೊತೆಗೆ ಮಾತನಾಡುತ್ತಿರುವುದು, ಅವರೊಂದಿಗೆ ಮ್ಯೂಸಿಕಲ್ ಛೇರ್ ಆಟ ಆಡುತ್ತಿರುವುದು, ಸಂತೋಷದಿಂದ ನಗುತ್ತಿರುವುದು ಸೇರಿದಂತೆ ಹಲವು ಫೋಟೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ಮಕ್ಕಳ ದಿನಚಾರಣೆಯಂದು ನಟ ಕ್ಯಾನ್ಸರ್ ಪೀಡಿತ ಪುಟಾಣಿಗಳೊಂದಿಗೆ ಸಮಯ ಕಳೆದಿದ್ದಾರೆ. ಆ ದಿನ ಅವರಿರುವ ಜಾಗಕ್ಕೆ ಭೇಟಿ ನೀಡಿರುವ ಅವರು, ಮಕ್ಕಳನ್ನು ನೋಡಿಕೊಳ್ಳಲು ಅಗತ್ಯವಿರುವ ಸಾಮಗ್ರಿಗಳನ್ನು ನೀಡಿದ್ದಾರೆ. ಮಕ್ಕಳ ಜೊತೆಗೆ ಸುಮಾರು ಹೊತ್ತು ಮಾತನಾಡಿ, ಆಟವಾಡಿ, ಅವರೊಂದಿಗೆ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ನಾಗ ಚೈತನ್ಯ ಅವರ ಚೊಚ್ಚಲ ಓಟಿಟಿ ಸಿನಿಮಾ
ನಾಗ ಚೈತನ್ಯ ಶೀಘ್ರದಲ್ಲೇ ವಿಕ್ರಮ್ ಕುಮಾರ್ ನಿರ್ದೇಶನದ 'ಧೂತ' ಎಂಬ ವೆಬ್ ಸೀರಿಸ್ ಮೂಲಕ ಓಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ವೆಬ್ ಸೀರಿಸ್ ಡಿಸೆಂಬರ್ 1 ರಂದು ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ. ನಟ ನಾಗಚೈತನ್ಯ ಸದ್ಯ ವೆಬ್ ಸೀರಿಸ್ ಸರಣಿಯ ಪ್ರಚಾರ ಆರಂಭಿಸಿದ್ದಾರೆ.

ಇನ್ನು, ನಾಗಚೈತನ್ಯ ಇತ್ತೀಚೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ನೋಡಲು ಮುಂಬೈಗೆ ತೆರಳಿದ್ದರು. ಈ ವೇಳೆ ಕ್ರಿಕೆಟ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಡುಗಡೆಯಾಗಲಿರುವ ವೆಬ್ ಸೀರಿಸ್ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ನಾಗ ಚೈತನ್ಯ ಅವರ ಮುಂಬರುವ ಸಿನಿಮಾಗಳ ಪಟ್ಟಿ
ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಬಹುಭಾಷಾ ಚಿತ್ರ 'ಕಸ್ಟಡಿ' ಬಳಿಕ ನಾಗ ಚೈತನ್ಯ ಅಭಿನಯದ ಮತ್ತೊಂದು ಸಿನಿಮಾ ಬಿಡುಗಡೆಯಾಗಿಲ್ಲ. ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ, ಕಸ್ಟಡಿಯ ಕಥೆ ಮತ್ತು ನಾಗ ಚೈತನ್ಯ ಅವರ ಅಭಿನಯಕ್ಕಾಗಿ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನು, ಚಂಡೂ ಮೊಂಡೇಟಿ ನಿರ್ದೇಶನದ ಚಿತ್ರದಲ್ಲಿ ನಾಗ ಚೈತನ್ಯ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಈ ಹಿಂದೆ ಪ್ರೇಮಂನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೇ ಸಿನಿಮಾದಲ್ಲಿ 'ಲವ್ ಸ್ಟೋರಿ'ಯಲ್ಲಿ ನಾಯಕಿಯಾಗಿದ್ದ ಸಾಯಿ ಪಲ್ಲವಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮೀನುಗಾರಿಕಾ ಕುಗ್ರಾಮದ ಸುತ್ತ ಸುತ್ತಲಿದ್ದು, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮೀನುಗಾರನ ಪಾತ್ರದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











