ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರ
ಟಾಲಿವುಡ್ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಬಾಲಕೃಷ್ಣ ಅಭಿನಯದ 100ನೇ ಸಿನಿಮಾ ಡಿಕ್ಟೇಟರ್ ಅಥವಾ ಕಳೆದ ವರ್ಷ ತೆರೆಗೆ ಬಂದ ರೂಲರ್ ಸಿನಿಮಾದಲ್ಲಿ ಮಗ ಮೋಕ್ಷಗ್ನ ಅಭಿನಯಸಲಿದ್ದಾರೆ ಎಂದು ಹೇಳಲಾಗಿತ್ತು ಆದರೆ ಕಾರಣಾಂತರಗಳಿಂದ ನೆರವೇರಲಿಲ್ಲ.
Recommended Video
ಆದ್ರೀಗ ಪುತ್ರನನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡಿಸಲು ಸಕಲತಯಾರಿಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಮಾತನಾಡಿರುವ ಖ್ಯಾತ ನಟ ಬಾಲಕಷ್ಣ, ಪುತ್ರ ಮೋಕ್ಷಗ್ನ ಚೊಚ್ಚಲ ಸಿನಿಮಾ ಸಧ್ಯದಲ್ಲೇ ಪ್ರಾರಂಭವಾಗಲಿದೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
"ಮೋಕ್ಷಗ್ನ ಚೊಚ್ಚಲ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ ಎನ್ನುವುದು ತಿಳಿದಿದೆ. ನಟನೆ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಸಮಯದಲ್ಲಿ ತನ್ನ ನಟನೆ ಬಗ್ಗೆ ಕಲಿಯುತ್ತಿದ್ದಾರೆ. ಸಾಯಿ ಮಾಧೇವ್ ಸಿನಿಮಾ ಕಥೆ ತಯಾರಿಸುತ್ತಿದ್ದಾರೆ. ಈ ವರ್ಷ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದೀವಿ. ಖಂಡಿತವಾಗಿಯೂ ಅಭಿಮಾನಿಗಳು ಸಹಾಯ ಮಾಡುತ್ತಾರೆ ಮತ್ತು ಬೆಂಬಲಿಸುತ್ತಾರೆ ಎನ್ನುವುದು ಖಾತ್ರಿಯಿದೆ" ಎಂದು ಹೇಳಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ಬರಹಗಾರ ಸಾಯಿ ಮಾಧವ್ ಸದ್ಯ ಆರ್ ಆರ್ ಆರ್ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ. ಈ ಹಿಂದೆ ಬಾಲಯ್ಯ ಅವರ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. ವಿಶೇಷ ಅಂದರೆ ಬಾಲಯ್ಯ ಪುತ್ರ ಮೋಕ್ಷಗ್ನ ಚೊಚ್ಚಲ ಚಿತ್ರಕ್ಕೆ ಅನಿಲ್ ರವಿಪುಡಿ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಮೂಲಗಳ ಪ್ರಕಾರ ಬಯೋಪತಿ ಶ್ರೀನು ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











