ಮಹೇಶ್ ಬಾಬು ಸಿನಿಮಾ ತಿರಸ್ಕರಿಸಿದ ನಾನಿ, ಕಾರಣ ವೈಮನಸ್ಸು!

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಸದ್ಯ 'ಸರ್ಕಾರು ವಾರಿ ಪಾಟ' ಚಿತ್ರದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈಗ ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸಿದ್ದಾರೆ. ಮುಂಬರುವ ಪ್ರಾಜೆಕ್ಟ್ #SSMB28 ಸಿನಿಮಾ ಶೂಟಿಂಗ್ ತಯಾರಿಯಲ್ಲಿ ಇದ್ದಾರೆ. ಸದ್ಯದಲ್ಲಿಯೇ ಸಿನಿಮಾ ಸೆಟ್‌ ಸೇರಲಿದೆ.

ಈ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ್ ಸಿನಿವಾಸ್ ನಿರ್ದೇಶನ ಇದೆ. ಈಗಾಗಲೇ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನೆರವೇರಿದ್ದು, ಪ್ರೀ ಪ್ರೋಡಕ್ಷನ್ ಕೆಲಸಗಳು ಕೂಡ ಮುಗಿವೆ. ಇನ್ನೇನಿದ್ದರು ಸಿನಿಮಾದ ಚಿತ್ರೀಕರಣ ಆರಂಭ ಆಗಬೇಕು ಅಷ್ಟೇ. ಈ ನಡುವೆ ಸಿನಿಮಾದ ತಾರ ಬಳಗದ ಬಗ್ಗೆ ಹೊಸ ದುದ್ದಿ ಒಂದು ಹರಿದಡುತ್ತಾ ಇದೆ.

ನಟ ಮಹೇಶ್ ಬಾಬು ಸಿನಿಮಾದಲ್ಲಿ ಪಾತ್ರವರ್ಗ ಸದಾ ಪ್ಲಸ್ ಪಾಯಿಂಟ್. ಅದು ಸಹ ಕಲಾವಿದರಾಗಿರ ಬಹುದು ಅಥವಾ ಖಳನಾಯಕರಾಗಿರಬಹುದು. ಎಲ್ಲಾ ಪಾತ್ರಗಳಲ್ಲೂ ಹೆಸರಾಂತ ಕಲಾವಿದರು ಇದ್ದೇ ಇರುತ್ತಾರೆ. ಅದರೆ ಈ ಬಾರಿ ಮಹೇಶ್ ಬಾಬು ಸಿನಿಮಾವನ್ನು ತೆಲುಗಿನ ನಟ ನಾನಿ ತಿರಸ್ಕರಿಸಿದ್ದಾರೆ ಎನ್ನುವ ಹೊಸ ಸುದ್ದಿ ಹೊರ ಬಂದಿದೆ.

Actor Nani Rejected To Act With Mahesh Babu Upcoming Movie

ಹೌದು ನಟ ನಾನಿಯನ್ನು ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಶೇಷ ಪಾತ್ರ ಒಂದರಲ್ಲಿ ನಟಿಸುವಂತೆ ಕೇಳಲಾಗುತ್ತಂತೆ. ಆದರೆ ಇದನ್ನು ನಟ ನಾನಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಮಹೇಶ್ ಬಾಬು ಜೊತೆಗೆ ಅಭಿನಯಿಸುವ ಅವಕಾಶವನ್ನು ನಾನಿ ತಿರಸ್ಕರಿಸಿದ್ದಾರಂತೆ. ಹಾಗಾಗಿ ಮಹೇಶ್ ಬಾಬು ಜೊತೆಗೆ ಅಭಿನಯಿಸಲು ಇಷ್ಟ ಇಲ್ಲದ ಕಾರಣ ನಾನಿ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

ನಾನಿ ಸಿನಿಮಾ ತಿರಸ್ಕರಿಸಿದ ಬಳಿಕ ಈ ಪಾತ್ರಕ್ಕೆ ಮತ್ತೊಬ್ಬ ನಟನ ಮೊರೆ ಹೋಗಿದೆ ಸಿನಿಮಾತಂಡ. ನಟ ಸುಶಾಂತ್ ಅವರನ್ನು ನಾನಿ ಜಾಗಕ್ಕೆ ಕರೆತರಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಈಗಾಗಲೇ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ 'ಅಲಾ ವೈಕುಂಠಪುರಂಲೋ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಸುಶಾಂತ್. ಈ ಚಿತ್ರಕ್ಕೆ ಸುಶಾಂತ್ ಒಪ್ಪಿಗೆ ನೀಡಿದ್ದು, ಸುಶಾಂತ್ ಸೇರ್ಪಡೆ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.

ಮಹೇಶ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಈ ಹಿಂದೆ ಎರಡು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ. 'ಅತಡು' ಮತ್ತು 'ಖಲೇಜಾ' ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿದೆ. ಈಗ ಮಹೇಶ ಬಾಬು 28ನೇ ಸಿನಿಮಾದ ಮೂಲಕ ಮೂರನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಫೆಬ್ರವರಿ 3ರಂದು ಸಿನಿಮಾ ಲಾಂಚ್ ಅಗಿದೆ. ಕಾರ್ಯಕ್ರಮದಲ್ಲಿ ನಮ್ರತಾ ಶಿರೋಡ್ಕರ್, ಪೂಜಾ ಹೆಗ್ಡೆ ಸೇರಿದಂತೆ ಪಾತ್ರವರ್ಗ ಹಾಜರಿತ್ತು.

More from Filmibeat

English summary
Actor Nani Rejected To Act With Mahesh Babu Upcoming Movie, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X