ಮತ್ತೆಂದಿಗೂ ಟಿವಿ ಶೋ ಹೋಸ್ಟ್ ಮಾಡಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇಕೆ ನಟ ನಾನಿ?

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ಸ್ಟಾರ್ ನಾನಿ ಇತ್ತೀಚಿಗಷ್ಟೆ ಒಟಿಟಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಟಕ್ ಜಗದೀಶ್ ಸಿನಿಮಾ ಇತ್ತೀಚಿಗಷ್ಟೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಪ್ರೇಕ್ಷಕರ ಮೆಚ್ಚುಗೆ ಗಳಿಸಲು ಈ ಸಿನಿಮಾ ಸೋತಿದೆ. ಸಿನಿಮಾ ಸೋತ ತಲೆನೋವಿನಲ್ಲೇ ನಟ ನಾನಿ ಈ ಸಮಯದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇತ್ತೀಚಿಗಷ್ಟೆ ನಟ ನಾನಿ ಒಟಿಟಿ ಬಗ್ಗೆ ಮಾತನಾಡಿದ್ದರು. ಚಿತ್ರಮಂದಿರಗಳು ಎಷ್ಟು ಮುಖ್ಯ, ಎಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ನಾನಿ ಹೇಳಿದ್ದರು. "ನಾವು ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇವೆ. ನಾನು ನಟ ಅಲ್ಲದಿದ್ದರೂ, ನಾನು ಆ ಅನುಭವವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಈಗ ಜಗತ್ತು ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಪರ್ಯಾಯ ಆಯ್ಕೆಗಳಿಗೆ ಹೊಂದಿಕೊಳ್ಳಬೇಕು. OTT ಕೂಡ ಒಂದು ಉತ್ತಮ ಆಯ್ಕೆಯಾಗಿ"ಎಂದು ನಟ ನಾನಿ ಅಭಿಪ್ರಾಯ ಪಟ್ಟಿದ್ದರು.

ಆದರೆ ಒಟಿಟಿಯಲ್ಲಿ ಬಂದ ಟಕ್ ಜಗದೀಶ್ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಲಿಲ್ಲ. ಇದೇ ಸಮಯದಲ್ಲಿ ನಾನಿ ಇನ್ಮುಂದೆ ಯಾವತ್ತು ಟಿವಿ ಶೋಗಳನ್ನು ಹೋಸ್ಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಟ ನಾನಿ, " ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವಾಗ ಸಾಕಷ್ಟು ಲೆಕ್ಕಾಚಾರಗಳು ಇರುತ್ತವೆ ಮತ್ತು ಅದು ಇನ್ಮುಂದೆ ನನ್ನ ಭಾಗವಲ್ಲ" ಎಂದು ಹೇಳಿದ್ದಾರೆ.

Actor Nani says Never Host A TV Show Again

ನಟ ನಾನಿ ತೆಲುಗು ಬಿಗ್ ಬಾಸ್ ಸೀಸನ್-2ರನ್ನು ಹೋಸ್ಟ್ ಮಾಡಿದ್ದರು. ಆ ಸಮಯದಲ್ಲಿ ನಾನಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ನಾನಿ ನಡೆಸಿಕೊಡುತ್ತಿದ್ದ ಶೈಲಿಗೆ ಟ್ರೋಲಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಬಳಿಕ ನಾನಿ ಯಾವುದೇ ಶೋ ನಡೆಸಿಕೊಟ್ಟಿಲ್ಲ. ಇದೀಗ ಟಿವಿ ಹೋಸ್ಟ್ ಮಾಡದೆ ಇರುವ ನಿರ್ಧಾರಕ್ಕೆ ಬಂದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ನಾನಿ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾನಿ ಜೊತೆ ಮೂವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಕೃತಿ ಶೆಟ್ಟಿ ಮತ್ತು ಮಡೊನ್ನಾ ಮೂವರು ನಾಯಕಿಯರು ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಇನ್ನು ಅಂಟೆ ಸುಂದರಾನಿಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು ನಾನಿ ನಟನೆಯ ಸೂಪರ್ ಹಿಟ್ ಜರ್ಸಿ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಈಗಾಗಲೇ ಹಿಂದಿ ರಿಮೇಕ್ ಚಿಕ್ರೀಕರಣ ಮುಗಿದಿದ್ದು ಬಿಡುಗಡೆ ಸಿದ್ಧವಾಗುತ್ತಿದೆ. ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ. ಶಾಹಿದ್ ಕಪೂರ್ ಬಗ್ಗೆ ಮಾತನಾಡಿದ್ದ ನಾನಿ ಮೂಲ ಸಿನಿಮಾಗಿಂತ ಉತ್ತಮವಾಗಿ ನಟಿಸಲಿದ್ದಾರೆ ಎಂದು ಹಾಡಿಹೊಗಳಿದ್ದರು.

ತಾನು ಕೂಡ ಹಿಂದಿ ವರ್ಷನ್ ಗಾಗಿ ಎದುರು ನೋಡುತ್ತಿರುವುದಾಗಿ ನಾನಿ ಹೇಳಿದ್ದಾರೆ. ಶಾಹಿದ್ ಅದ್ಭುತ ನಟ, ಮೂಲ ಸಿನಿಮಾಗಿಂತ ಶಾಹಿದ್ ಉತ್ತಮವಾಗಿ ನಟಿಸಲಿದ್ದಾರೆ ಎಂದು ನಾನಿ ಹಾಡಿ ಹೊಗಳಿದ್ದರು. ಶಾಹಿದ್ ಕಪೂರ್ ಜರ್ಸಿಯಲ್ಲಿ ಹೇಗೆ ನಟಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

More from Filmibeat

English summary
Telugu Actor Nani says Never Host A TV Show Again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X