For Quick Alerts
  ALLOW NOTIFICATIONS  
  For Daily Alerts

  ನಟ ನಿಖಿಲ್ ಗೆ ಹನಿಮೂನ್ ಹೋಗುವಷ್ಟು ಸಮಯ ಇಲ್ಲವಂತೆ

  |

  ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ನಿಖಿಲ್ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿಖಿಲ್ ಮದುವೆ ಅಂದಾಕ್ಷಣ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಂತ ಅಂದ್ಕೋಬೇಡಿ. ನಾವು ಹೇಳುತ್ತಿರುವುದು ತೆಲುಗು ನಟ ನಿಖಿಲ್ ಸಿದ್ದಾರ್ಥ್ ಅವರ ಮದುವೆ ಬಗ್ಗೆ.

  Yash spoke about Challenging Star Darshan's Robert Cinema

  ಇತ್ತೀಚಿಗೆ ಬಹುಕಾಲದ ಗೆಳತಿ ಡಾ.ಪಲ್ಲವಿ ವರ್ಮ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರ ಮದುವೆ ವಿಚಾರ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಿನಿಮಾಮೀಯ ರೀತಿಯಲ್ಲಿ ಭಾವಿ ಪತ್ನಿ ಪಲ್ಲವಿಗೆ ಪ್ರೊಪೋಸ್ ಮಾಡಿ ಸದ್ದು ಮಾಡಿದ್ದರು. ಈಗ ಹನಿಮೂನ್ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಮುಂದೆ ಓದಿ..

  ನಿಶ್ಚಿತಾರ್ಥದ ಸಂಭ್ರಮದಲ್ಲಿ ತೆಲುಗು 'ಕಿರಿಕ್ ಪಾರ್ಟಿ' ಹೀರೋ ಸಿದ್ಧಾರ್ಥ್ನಿಶ್ಚಿತಾರ್ಥದ ಸಂಭ್ರಮದಲ್ಲಿ ತೆಲುಗು 'ಕಿರಿಕ್ ಪಾರ್ಟಿ' ಹೀರೋ ಸಿದ್ಧಾರ್ಥ್

  ಕಾರ್ತಿಕೇಯ-2 ನಲ್ಲಿ ನಿಖಿಲ್ ಬ್ಯುಸಿ

  ಕಾರ್ತಿಕೇಯ-2 ನಲ್ಲಿ ನಿಖಿಲ್ ಬ್ಯುಸಿ

  ನಿಖಿಲ್ ಮತ್ತು ಪಲ್ಲವಿ ಏಪ್ರಿಲ್ ನಲ್ಲಿ ಹಸೆಮಣೆ ಏರಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮದುವೆ ಬಗ್ಗೆ ಮಾತನಾಡಿದ ನಿಖಿಲ್ "ನನ್ನ ಗಮನ ಈಗೇನಿದ್ದರು ಸಿನಿಮಾದತ್ತ ಮಾತ್ರ. ಕಾರ್ತಿಕೇಯ-2 ಸಿನಿಮಾ ರಿಲೀಸ್ ಗೆ ಸಿದ್ಧವಾಗುತ್ತಿದೆ. ದಸರಾಗೆ ಸಿನಿಮಾ ರಿಲೀಸ್ ಮಾಡಬೇಕು. ಹಾಗಾಗಿ ಸಾಕಷ್ಟು ಬ್ಯುಸಿಯಾಗಿದ್ದೀನಿ" ಎಂದಿದ್ದಾರೆ.

  ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?

  ಹನಿಮೂನ್ ಗೆ ಹೋಗಲು ಸಮಯವಿಲ್ಲ

  ಹನಿಮೂನ್ ಗೆ ಹೋಗಲು ಸಮಯವಿಲ್ಲ

  ಮದುವೆ ತಯಾರಿಯ ಜೊತೆಗೆ ಸಿನಿಮಾದಲ್ಲೂ ಬ್ಯುಸಿಯಾಗಿರುವ ನಿಖಿಲ್ ಮದುವೆ ನಂತರ ಹನಿಮೂನ್ ಪ್ಲಾನ್ ಅನ್ನು ರದ್ದು ಮಾಡಿದ್ದಾರಂತೆ. "ಸಿನಿಮಾ ಮೊದಲು, ಸಿನಿಮಾ ಕೆಲಸಗಳು ಮುಗಿದ ಬಳಿಕ ಹನಿಮೂನ್ ಪ್ಲಾನ್ ಮಾಡಬೇಕು. ಮದುವೆಗಾಗಿ ಹೆಚ್ಚು ರಜೆ ತೆಗೆದುಕೊಂಡಿಲ್ಲ" ಎಂದು ಹೇಳಿದ್ದಾರೆ.

  ಏಪ್ರಿಲ್ 16ಕ್ಕೆ ಮದುವೆ

  ಏಪ್ರಿಲ್ 16ಕ್ಕೆ ಮದುವೆ

  ನಿಖಿಲ್ ಸಿದ್ಧಾರ್ಥ ಮತ್ತು ಪಲ್ಲವಿ ವರ್ಮಾ ಮದುವೆ ಏಪ್ರಿಲ್ 16ಕ್ಕೆ ನಡೆಯಲಿದೆ. ಹೈದರಾಬಾದ್ ನಲ್ಲಿ ಮದುವೆ ನಡೆಯಲಿದ್ದು. ಈಗಾಗಲೆ ಮದುವೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿಖಿಲ್ ಪಲ್ಲವಿ ಮದುವೆ ಅದ್ದೂರಿಯಾಗಿ ನಡೆಯಲಿದೆಯಂತೆ.

  ವಿಜಯ್ ದೇವರಕೊಂಡಗೆ ಬಾಲಿವುಡ್‌ನಲ್ಲಿ 100 ಕೋಟಿ ರೂ. ಆಫರ್?ವಿಜಯ್ ದೇವರಕೊಂಡಗೆ ಬಾಲಿವುಡ್‌ನಲ್ಲಿ 100 ಕೋಟಿ ರೂ. ಆಫರ್?

  'ಕಿರಿಕ್ ಪಾರ್ಟಿ'ಯಲ್ಲಿ ಅಭಿನಯಿಸಿದ್ದ ನಿಖಿಲ್

  'ಕಿರಿಕ್ ಪಾರ್ಟಿ'ಯಲ್ಲಿ ಅಭಿನಯಿಸಿದ್ದ ನಿಖಿಲ್

  ನಿಖಿಲ್ ಸಿದ್ದಾರ್ಥ್ ಕನ್ನಡದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ತೆಲುಗು ರಿಮೇಕ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಹ್ಯಾಪಿಡೇಸ್, ಸ್ವಾಮಿ ರಾ ರಾ, ಸೂರ್ಯ ವರ್ಸಸ್ ಸೂರ್ಯ, ಕಾರ್ಕಿಕೇಯ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಕಾರ್ತಿಕೇಯ ಪಾರ್ಟ್-2ನಲ್ಲಿ ಬ್ಯುಸಿಯಾಗಿದ್ದಾರೆ.

  English summary
  Telugu Actor Nikhil Siddharth and Pallavi Varma canceled honeymoon trip for his busy schedule. Telugu Actor Nikhil Siddharth will tie the knot with Pallavi Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X