ಮುಂದೂಡಿಕೆ ನಂತರ ಕೊನೆಗೂ ನಿಗದಿಯಾದ ನಿತಿನ್ ಮದುವೆ
ಕೆಲವು ಮುಂದೂಡಿಕೆಗಳ ನಂತರ ಕೊನೆಗೂ ತೆಲುಗು ನಟ, ಜಯಂ ಖ್ಯಾತಿಯ ನಿತಿನ್ ಅವರ ಮದುವೆ ನಿಗದಿಯಾಗಿದೆ.
Recommended Video
ಲಾಕ್‌ಡೌನ್‌ಗೂ ಮೊದಲು ನಿತಿನ್ ಹಾಗೂ ಶಾಲಿನಿ ಅವರ ನಿಶ್ಚಿತಾರ್ಥವಾಗಿತ್ತು. ಮದುವೆಯನ್ನು ಏಪ್ರಿಲ್‌ನಲ್ಇ ನಿಗದಿ ಮಾಡಲಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಮದುವೆ ಮುಂದೂಡಿಕೆಯಾಗಿತ್ತು.
ಕೊನೆಗೆ ಈಗ ಮದುವೆ ನಿಗದಿಯಾಗಿದ್ದು, ನಿತಿನ್ ಹಾಗೂ ಶಾಲಿನಿ ಜುಲೈ 26 ಕ್ಕೆ ವಿವಾಹಕ್ಕೆ ಬಂಧನಕ್ಕೆ ಒಳಗಾಗಲಿದ್ದಾರೆ. ಹೈದರಾಬಾದ್‌ನಲ್ಲಿ ಮದುವೆ ನಡೆಯಲಿದೆ.

ಲಾಕ್‌ಡೌನ್ ನಿಯಮದಂತೆ ಮದುವೆ
ನಿತಿನ್ ಹಾಗೂ ಶಾಲಿನಿ ವಿವಾಹವು ಜುಲೈ 26 ರ ಬೆಳಿಗ್ಗೆ 8:30 ಕ್ಕೆ ನಡೆಯಲಿದ್ದು, ಲಾಕ್‌ಡೌನ್ ನಿಯಮಾವಳಿಗಳನ್ನು ಅನುಸರಿಸಿ ಸರಳಾಗಿ ವಿವಾಹ ಸಮಾರಂಭ ಆಯೋಜಿಸಲಾಗಿದೆ.

ನಿಖಿಲ್ ಸಹ ಮದುವೆ ಆಗಲಿದ್ದಾರೆ
ತೆಲುಗಿನ ಮತ್ತೊಬ್ಬ ನಟ ನಿಖಿಲ್ ಮದುವೆ ಸಹ ನಿಗದಿಯಾಗಿತ್ತು. ಮದುವೆಯನ್ನು ದುಬೈನಲ್ಲಿ ಮಾಡಲು ಯೋಜನೆ ರೂಪಿಸಲಾಗಿತ್ತು, ಆದರೆ ಲಾಕ್‌ಡೌನ್ ಕಾರಣದಿಂದ ವಿವಾಹ ಮುಂದೂಡಲ್ಪಟ್ಟಿದೆ. ಅವರ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ರಾಣಾ ದಗ್ಗುಬಾಟಿ ವಿವಾಹ ಡಿಸೆಂಬರ್‌ನಲ್ಲಿ?
ರಾಣಾ ದಗ್ಗುಬಾಟಿ ಸಹ ಇದೇ ಸಮಯದಲ್ಲಿ ಎಂಗೇಜ್ ಆಗಿದ್ದು, ಅವರ ಹಾಗೂ ಮಿಹಿಕಾ ಬಜಾಜ್ ಅವರ ಮದುವೆ ಸಹ ನಿಶ್ಚಯವಾಗಿದ್ದು, ಇಬ್ಬರೂ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ. ದಿನಾಂಕ ಇನ್ನಷ್ಟೆ ನಿಗದಿ ಆಗಬೇಕಿದೆ.

ರಂಗ್ ದೇ ಸಿನಿಮಾದಲ್ಲಿ ನಟನೆ
'ಜಯಂ' ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿದ ನಿತಿನ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು 'ರಂಗ್ ದೇ' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ನಾಯಕಿ ಕೀರ್ತಿ ಸುರೇಶ್.


Click it and Unblock the Notifications











