ಕೊರೊನಾ ಎಫೆಕ್ಟ್: ನಟ ನಿತಿನ್ ಮದುವೆ ಮತ್ತೆ ಮುಂದೂಡಿಕೆ?

ತೆಲುಗಿನ ಖ್ಯಾತ ನಟ ನಿತಿನ್ ಮದುವೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಗೆಳತಿ ಶಾಲಿನಿ ಜೊತೆ ನಿತಿನ್ ಫೆಬ್ರವರಿಯಲ್ಲಿ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿತಿನ್ ಮತ್ತು ಶಾಲಿನಿ ಮದುವೆ ಏಪ್ರಿಲ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು.

ಆದರೆ ಏಪ್ರಿಲ್ ನಿಂದ ಮತ್ತೆ ಮೇ ತಿಂಗಳಿಗೆ ಮುಂದೂಡಲಾಗಿತ್ತು. ದುಬೈನಲ್ಲಿ ನಿತಿನ್ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ, ಹೊರ ಬಿದ್ದಿರುವ ಬ್ರೇಕಿಂಗ್ ನ್ಯೂಸ್ ಪ್ರಕಾರ, ನಿತಿನ್ ಮದುವೆ ಮತ್ತೆ ಮುಂದಕ್ಕೆ ಹೋಗಿದೆಯಂತೆ. ಕೊರೊನಾ ವೈರಸ್ ಪರಿಣಾಮ ಮದುವೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಮದುವೆ

ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಮದುವೆ

ನಿತಿನ್ ಮತ್ತು ಶಾಲಿನಿ ಮದುವೆ ಏಪ್ರಿಲ್ 15 ರಂದು ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ದುಬೈನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದರು. ಆದರೆ ಏಪ್ರಿಲ್ 15 ರಿಂದ ಮೇ ತಿಂಗಳಿಗೆ ಶಿಫ್ಟ್ ಆಗಿದೆ ಎಂದು ಹೇಳಲಾಗಿತ್ತು. ಏಪ್ರಿಲ್ ನಿಂದ ಮೇ ತಿಂಗಳಿಗೆ ಮದುವೆ ಶಿಫ್ಟ್ ಆಗಲು ಕಾರಣವೇನು ಎಂದು ತಿಳಿದಿಲ್ಲ. ಆದರೆ ಮದುವೆ ತಯಾರಿ ಮಾಡಿಕೊಳ್ಳಲು ಕಡಿಮೆ ಸಮಯ ಉಳಿದಿದೆ ಎಂಬ ಕಾರಣಕ್ಕೆ ಕುಟುಂಬಸ್ಥರು ಏಪ್ರಿಲ್ ನಿಂದ ಮೇ ತಿಂಗಳಿಗೆ ಮದುವೆ ಶಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು.

ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ

ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ

ಸದ್ಯ ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಇರುವ ಕಾರಣ ನಿತಿನ್ ಮದುವೆ ದಿನಾಂಕ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮೇ ತಿಂಗಳಿನಲ್ಲಿಯೂ ಮದುವೆ ನಡೆಯುವುದು ಅನುಮಾನ ನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಕುಟುಂಬಸ್ಥರು ಯಾವುದೆ ಮಾಹಿತಿ ನೀಡಿಲ್ಲ.

ದುಬೈ ಬದಲು ಹೈದರಾಬಾದ್ ನಲ್ಲಿ ಮದುವೆ?

ದುಬೈ ಬದಲು ಹೈದರಾಬಾದ್ ನಲ್ಲಿ ಮದುವೆ?

ದುಬೈನಲ್ಲಿ ನಿತಿನ್ ಮತ್ತು ಶಾಲಿನಿ ಮದುವೆ ಅದ್ದೂರಿಯಾಗಿ ನಡೆಸಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಆದರೀಗ ಕೊರೊನಾ ವೈರಸ್ ಕಾರಣ ದುಬೈನಲ್ಲಿ ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಮಾಡಿ ಹೈದರಾಬಾದ್ ನಲ್ಲಿ ನಡೆಸಲು ಕುಟುಂಬಸ್ಥರು ಪ್ಲಾನ್ ಮಾಡಿದ್ದಾರೆ.

ಭಾವಿ ಪತ್ನಿ ಶಾಲಿನಿ ಬಗ್ಗೆ

ಭಾವಿ ಪತ್ನಿ ಶಾಲಿನಿ ಬಗ್ಗೆ

ನಿತಿನ್ ಮದುವೆ ಆಗುತ್ತಿರುವ ಹುಡುಗಿ ಶಾಲಿನಿ ಯು.ಕೆ.ನಲ್ಲಿ ಎಂ.ಬಿ.ಎ ವಿದ್ಯಾಭ್ಯಾಸ ಮುಗಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಿತಿನ್ ಮತ್ತು ಶಾಲಿನಿ ಆತ್ಮೀಯ ಸ್ನೇಹಿತರು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ಮೇಲೆ ಅದಕ್ಕೆ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ. ಗುರು-ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ನಿತಿನ್-ಶಾಲಿನಿ ಮದುವೆ ಅದ್ಧೂರಿಯಾಗಿ ನಡೆಯಲಿದೆ. ದುಬೈನಲ್ಲಿ ನಿತಿನ್ ಮತ್ತು ಶಾಲಿನಿ ಮದುವೆ ಅದ್ದೂರಿಯಾಗಿ ನಡೆಸಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಆದರೀಗ ಕೊರೊನಾ ವೈರಸ್ ಕಾರಣ ದುಬೈನಲ್ಲಿ ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಮಾಡಿ ಹೈದರಾಬಾದ್ ನಲ್ಲಿ ನಡೆಸಲು ಕುಟುಂಬಸ್ಥರು ಪ್ಲಾನ್ ಮಾಡಿದ್ದಾರೆ.

More from Filmibeat

English summary
Telugu Actor Nithin and Shalini marriage postponed because of Corona Virus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X