twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ನಟ ಪೊಸಾನಿ ಕೃಷ್ಣ ಮುರಳಿಗೆ ಕೊರೊನಾ, ಕ್ಷಮೆ ಕೇಳಿದ ಕಲಾವಿದ

    |

    ತೆಲುಗು ಚಿತ್ರರಂಗದ ಹಿರಿಯ ಕಲಾವಿದ ಪೊಸಾನಿ ಕೃಷ್ಣ ಮುರಳಿ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ ಎಂದು ವರದಿಯಾಗಿದೆ. ಸೋಂಕು ದೃಢವಾಗುತ್ತಿದ್ದಂತೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ವರದಿಗಳ ಪ್ರಕಾರ, ಕಳೆದ ರಾತ್ರಿ (ಜುಲೈ 29) ಪೊಸಾನಿ ಕೃಷ್ಣ ಮುರಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, ಅವರ ಅರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಿರಿಯ ನಟನಿಗೆ ಸೋಂಕು ತಗುಲಿದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಚಿತ್ರರಂಗ ಅನೇಕರು ''ಬೇಗ ಗುಣಮುಖರಾಗಿ'' ಎಂದು ಹಾರೈಸುತ್ತಿದ್ದಾರೆ.

    'ನಾರಪ್ಪ' ಚಿತ್ರೀಕರಣದ ಸಂದರ್ಭದಲ್ಲೇ ನಾಲ್ವರು ಬಲಿಯಾದರು: ನಿರ್ಮಾಪಕ'ನಾರಪ್ಪ' ಚಿತ್ರೀಕರಣದ ಸಂದರ್ಭದಲ್ಲೇ ನಾಲ್ವರು ಬಲಿಯಾದರು: ನಿರ್ಮಾಪಕ

    ಕೃಷ್ಣ ಮುರಳಿ ಆಸ್ಪತ್ರೆಗೆ ದಾಖಲಾದ ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ನಟನ ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರಿಗೂ ಕೊರೊನಾ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ನಟಿಸುತ್ತಿರುವ ಸಿನಿಮಾಗಳ ನಿರ್ಮಾಪಕರಲ್ಲಿ ಕ್ಷಮೆಯಾಚಿಸಿದ್ದಾರೆ.

    Actor Posani krishna murali tested COVID19 positive

    ''ನನಗೆ ಕೋವಿಡ್ ಪಾಸಿಟಿವ್ ಬಂದ ನಂತರ ನಾನು ನಟಿಸುತ್ತಿದ್ದ ಎರಡು ಚಿತ್ರಗಳ ಶೂಟಿಂಗ್ ಮುಂದೂಡಲಾಗಿದೆ. ಇದರಿಂದ ನಷ್ಟ ಆಗಿದೆ. ಅದಕ್ಕಾಗಿ ನಾನು ನಿರ್ಮಾಪಕರಲ್ಲಿ ಕ್ಷಮೆಯಾಚಿಸುತ್ತೇನೆ. ಶೀಘ್ರದಲ್ಲೇ ನಾನು ಹಿಂತಿರುಗುತ್ತೇನೆ. ನನ್ನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವುದು ಬೇಡ ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ'' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ನಟಿಸುತ್ತಿರುವ ಆಚಾರ್ಯ ಚಿತ್ರದಲ್ಲಿ ಪೊಸಾನಿ ಕೃಷ್ಣ ಮುರಳಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ.

    ಕೊರೊನಾದಿಂದ ಕೆಲಸ ಹೋಯ್ತು: ರಸ್ತೆ ಬದಿ ಮೀನು ಮಾರುತ್ತಿರುವ ನಟಕೊರೊನಾದಿಂದ ಕೆಲಸ ಹೋಯ್ತು: ರಸ್ತೆ ಬದಿ ಮೀನು ಮಾರುತ್ತಿರುವ ನಟ

    ಗೋಪಿಚಂದ್-ತಮನ್ನಾ ಭಾಟಿಯ ನಟಿಸಿರುವ ಕ್ರೀಡಾ ಆಧಾರಿತ 'ಸೀಟಿಮಾರ್' ಚಿತ್ರದಲ್ಲೂ ಕೃಷ್ಣಮುರಳಿ ಅಭಿಯಿಸಿದ್ದಾರೆ. ಈ ಚಿತ್ರ ಸಂಪತ್ ನಂದಿ ನಿರ್ದೇಶಿಸಿದ್ದಾರೆ. ನಾಗಚೈತನ್ಯ ಹಾಗು ಸಾಯಿ ಪಲ್ಲವಿ ಕಾಣಿಸಿಕೊಂಡಿರುವ 'ಲವ್‌ಸ್ಟೋರಿ' ಚಿತ್ರದಲ್ಲೂ ಕೃಷ್ಣ ಮುರಳಿ ಇದ್ದಾರೆ. ಈ ಸಿನಿಮಾವನ್ನು ಶೇಕರ್ ಕಮ್ಮುಲಾ ನಿರ್ದೇಶಿಸಿದ್ದಾರೆ. ಈ ಎಲ್ಲಾ ಚಿತ್ರಗಳ ಬಿಡುಗಡೆ ಕೊರೊನಾ ವೈರಸ್ ಕಾರಣದಿಂದ ಮುಂದೂಡಿಕೆಯಾಗಿದೆ. ಹೊಸ ದಿನಾಂಕಗಳನ್ನು ಸದ್ಯಕ್ಕೆ ಪ್ರಕಟಿಸಿಲ್ಲ.

    ಮೇ 27 ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ 'ಏಕ್ ಮಿನಿ ಕತಾ' ಚಿತ್ರದಲ್ಲಿ ಪೊಸಾನಿ ಕೃಷ್ಣ ಮುರಳಿ ಕಾಣಿಸಿಕೊಂಡಿದ್ದರು. ಕಾವ್ಯ ತಪ್ಪರ್, ಬ್ರಹ್ಮಾಜಿ, ಶ್ರದ್ಧಾ ದಾಸ್, ಸಪ್ತಗಿರಿ, ಹರ್ಷವರ್ಧನ್ ಸೇರಿದಂತೆ ಹಲವರು ನಟಿಸಿದ್ದರು. ಮೇರ್ಲಪಾಕ ಗಾಂಧಿ ಕಥೆ ರಚಿಸಿದ್ದು, ಕಾರ್ತಿಕ್ ರಾಪೋಲು ನಿರ್ದೇಶಿಸಿದ್ದರು.

    Actor Posani krishna murali tested COVID19 positive

    ಟಾಲಿವುಡ್ ಸ್ಟಾರ್‌ಗಳಿಗೂ ಕಾಡಿತ್ತು ಕೊರೊನಾ

    ಹಾಗ್ನೋಡಿದ್ರೆ, ಕೊರೊನಾ ವೈರಸ್‌ನಿಂದ ತೆಲುಗಿನ ಹಲವು ಸ್ಟಾರ್ ನಟರು ಸಂಕಷ್ಟ ಎದುರಿಸಿದ್ದರು. ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ತೇಜ, ವರುಣ್ ತೇಜ, ತಮನ್ನಾ ಭಾಟಿಯಾ, ರಾಜಶೇಖರ್, ಡಿವಿವಿ ದಾನಯ್ಯ, ನಾಗಬಾಬು, ಭಂಡ್ಲ ಗಣೇಶ್, ಅಲ್ಲು ಅರ್ಜುನ್, ರಾಶಿ ಖನ್ನಾ, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವರಿಗೆ ಸೋಂಕು ತಗುಲಿತ್ತು. ನಂತರ ಎಲ್ಲರೂ ಗುಣಮುಖರಾದರು.

    ಜುಲೈ 31ಕ್ಕೆ ಮಹೇಶ್ ಬಾಬು ಚಿತ್ರದಿಂದ ಸರ್ಪ್ರೈಸ್

    ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಿರುವ ಸರ್ಕಾರು ವಾರಿ ಪಾಟ ಚಿತ್ರತಂಡ ಜುಲೈ 31ಕ್ಕೆ ಮೊದಲ ನೋಟಿಸ್ ನೀಡುತ್ತಿದೆ. ಅಂದ್ರೆ ಸಿನಿಮಾಗೆ ಸಂಬಂಧಪಟ್ಟಂತೆ ಅಧಿಕೃತ ಮಾಹಿತಿ ನೀಡುತ್ತಿದೆ. ಪರುಶುರಾಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾ 2022ರ ಸಂಕ್ರಾಂತಿ ಹಬ್ಬದ ವೇಳೆ ತೆರೆಗೆ ಬರಲಿದೆಯಂತೆ.

    ಎಸ್ ತಮನ್ ಸಂಗೀತ ನಿರ್ದೇಶನ ಮಾಡ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ. ಸಿನಿಮಾ ಘೋಷಣೆಯಾದ ಸಂದರ್ಭದಿಂದಲೂ ಈ ಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದೆ.

    English summary
    Popular film actor Posani krishna murali and his family affected with Corona.
    Friday, July 30, 2021, 17:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X