ಪ್ರಭಾಸ್ ಅಭಿನಯದ 20ನೇ ಸಿನಿಮಾಗೆ ಟೈಟಲ್ ಫಿಕ್ಸ್?
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ 20ನೇ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಚಿತ್ರದ ಬಗ್ಗೆ ಯಾವುದೆ ಮಾಹಿತಿ ಬಿಟ್ಟುಕೊಡುವುದಿರಲಿ ಟೈಟಲ್ ಸಹ ಇನ್ನೂ ರಿವೀಲ್ ಆಗಿಲ್ಲ. ಈಗಾಗಲೆ ಬಹುತೇಕ ಚಿತ್ರೀಕರಣ ಸಹ ಮುಗಿದಿದೆ. ಆದರೂ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ.
ಸಾಹೋ ಸಿನಿಮಾ ರಿಲೀಸ್ ಆದ ಬಳಿಕ, ಪ್ರಭಾಸ್ ಮುಂದಿನ ಸಿನಿಮಾದ ಯಾವುದೇ ಅಪ್ ಡೇಟ್ ಸಿಗಲಿಲ್ಲ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ. ಚಿತ್ರದ ಬಗ್ಗೆ ಅಪ್ ಡೇಟ್ ನೀಡುವಂತೆ ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಆದರೀಗ ಸಿನಿಮಾದಿಂದ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

ಪ್ರಭಾಸ್ ಸಿನಿಮಾ ಟೈಟಲ್ ಫಿಕ್ಸ್?
ಪ್ರಭಾಸ್ ಅಭಿನಯದ 20ನೇ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ 'ರಾಧೆ ಶ್ಯಾಮ್' ಎಂದು ಹೆಸರಿಡಲಾಗಿದೆಯಂತೆ. ಆದರೆ ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತಗೊಳಿಸಿಲ್ಲ. ಮೂಲಗಳ ಪ್ರಕಾರ ಸಿನಿಮಾಗೆ ರಾಧೆ ಶ್ಯಾಮ್ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಸಿನಿಮಾ ಟೈಟಲ್-ಫಸ್ಟ್ ಲುಕ್ ರಿಲೀಸ್ ಸಾದ್ಯತೆ
ಅಭಿಮಾನಿಗಳ ಬೇಡಿಕೆಯಂತೆ ಸಿನಿಮಾದ ಫಸ್ಟ್ ಮತ್ತು ಟೈಟಲ್ ಅನ್ನು ಸದ್ಯದಲ್ಲೇ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಅಭಿಮಾನಿಗಳು ಒತ್ತಾಯದ ಮೇರೆಗೆ ಜೂನ್ ಕೊನೆಯ ವಾರದಲ್ಲಿ ಸಿನಿಮಾತಂಡ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ನೀಡುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಲಿದೆ ಎಂದು ಹೇಳಲಾಗುತ್ತಿದೆ.

ಅಭಿಮಾನಿಗಳ ಟ್ರೆಂಡ್
ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಪ್ರಭಾಸ್ 20ನೇ ಸಿನಿಮಾದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಚಿತ್ರತಂಡದ ಬಳಿ ಮಾಡಿಕೊಂಡಿದ್ದರು. #wedemanprabhas20update, #wewantprabhas20update ಎಂದು ಹ್ಯಾಶ್ ಟ್ಯಾಗ್ ಬಳಗಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದರು. ಅಭಿಮಾನಿಗಳ ಬೇಡಿಕೆ ಮೇರಿಗೆ ಚಿತ್ಕತಂಡ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಪೂಜಾ ಹೆಗಡೆ ನಾಯಕಿ
ಪ್ರಭಾಸ್ ಅಭಿನಯದ 20ನೇ ಸಿನಿಮಾದಲ್ಲಿ ನಟಿ ಪೂಜಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಪೂಜಾ ಹೆಗಡೆ ಮತ್ತು ಪ್ರಭಾಸ್ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಇದಾಗಿದ್ದು ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.


Click it and Unblock the Notifications











