twitter
    For Quick Alerts
    ALLOW NOTIFICATIONS  
    For Daily Alerts

    "ಇದು ಹೊಸ ಟೆಕ್ನಾಲಜಿ.. 3D ಕನ್ನಡಕ ಹಾಕ್ಕೊಂಡು ನೋಡಬೇಕು": ಕೊನೆಗೂ 'ಆದಿಪುರುಷ್' ಟೀಸರ್ ಬಗ್ಗೆ ಮೌನ ಮುರಿದ ಪ್ರಭಾಸ್

    |

    ಭಾನುವಾರ ಅಯೋಧ್ಯೆಯಲ್ಲಿ 'ಆದಿಪುರುಷ್' ಟೀಸರ್ ಈವೆಂಟ್ ನಡೆದಿದ್ದು, ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಗೊತ್ತೇಯಿದೆ. ಚಿತ್ರದ ಕೆಲ ದೃಶ್ಯಗಳನ್ನು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಚಿತ್ರಿಸಿದ್ದಾರೆ, ಸಿನಿಮಾ ಬ್ಯಾನ್ ಮಾಡಬೇಕು ಎಂದು ಕೆಲವರು ಹೇಳಿದ್ದರು. ಸಿನಿಮಾ ಬಾಯ್‌ಕಾಟ್ ಅಭಿಯಾನ ಕೂಡ ದೊಡ್ಡದಾಗಿ ಸದ್ದು ಮಾಡಿತ್ತು. ಅಂತೂ ಇಂತೂ ಚಿತ್ರತಂಡ 'ಆದಿಪುರುಷ್' ಟೀಸರ್ ಬಗ್ಗೆ ಮಾತನಾಡಿದೆ. ಹೈದರಾಬಾದ್‌ನಲ್ಲಿ 3Dಯಲ್ಲಿ ಟೀಸರ್ ತೋರಿಸಿ, ಈಗ ಹೇಗಿದೆ ಹೇಳಿ ಎಂದು ಕೇಳಿದೆ.

    ಪತ್ರಕರ್ತರು ಹಾಗೂ ಆಪ್ತರಿಗೆ ಸ್ಪೆಷಲ್ ಸ್ಕ್ರೀನಿಂಗ್ ಮಾಡಿ 'ಆದಿಪುರುಷ್' ಟೀಸರ್ ತೋರಿಸಲಾಯಿತು. ನಟ ಪ್ರಭಾಸ್, ನಿರ್ದೇಶಕ ಓಂ ರಾವುತ್ ಹಾಗೂ ತೆಲುಗು ಸಿನಿಮಾ ನಿರ್ಮಾಪಕ ದಿಲ್ ರಾಜು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಟ್ರೋಲ್‌ ಬಗ್ಗೆ ಪ್ರಭಾಸ್ ಹೆಚ್ಚು ಮಾತನಾಡಲಿಲ್ಲ. ಹೊಸ ತಂತ್ರಜ್ಞಾನ ಬಳಸಿ ಮಾಡಿರುವ ಸಿನಿಮಾ, 3Dಯಲ್ಲಿ ನೋಡಲು ಮಾಡಿರುವ ಸಿನಿಮಾ. ಅದನ್ನು ಅದೇ ರೀತಿ ನೋಡಬೇಕು ಎಂದಿದ್ದಾರೆ. ಇನ್ನು ನಿರ್ಮಾಪಕ ದಿಲ್ ರಾಜು ಮಾತನಾಡಿ "ಬಾಹುಬಲಿ ಸಿನಿಮಾ ಬಗ್ಗೆ ಮೊದಲು ಎಲ್ಲರು ಟ್ರೋಲ್ ಮಾಡಿದ್ದರು. ನಂತರ ಸಿನಿಮಾ ಹಿಟ್ ಆಗಿದ್ದು ಗೊತ್ತೇಯಿದೆ. 'ಆದಿಪುರುಷ್' ಕೂಡ ಸೂಪರ್ ಹಿಟ್ ಆಗುತ್ತದೆ" ಎಂದರು.

    'ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಿ': ಅಯೋಧ್ಯೆ ಪ್ರಧಾನ ಅರ್ಚಕರ ಆಗ್ರಹ!'ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಿ': ಅಯೋಧ್ಯೆ ಪ್ರಧಾನ ಅರ್ಚಕರ ಆಗ್ರಹ!

    ರಾಮಾಯಣ ಕಾವ್ಯವನ್ನು ಆಧರಿಸಿ ಬಾಲಿವುಡ್ ನಿರ್ದೇಶಕ ಓಂ ರಾವುತ್ 'ಆದಿಪುರುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದ್ದಾರೆ. ಇನ್ನು ಕೃತಿ ಸನೋನ್ ಸೀತೆಯಾಗಿ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗುತ್ತಿದೆ.

    ನನಗಂತೂ 3Dಯಲ್ಲಿ ಟೀಸರ್ ಥ್ರಿಲ್ ಕೊಡ್ತು

    ನನಗಂತೂ 3Dಯಲ್ಲಿ ಟೀಸರ್ ಥ್ರಿಲ್ ಕೊಡ್ತು

    "ಮೊದಲ ಬಾರಿಗೆ 'ಆದಿಪುರುಷ್' ಟೀಸರ್ 3Dಯಲ್ಲಿ ನೋಡಿದಾಗ ನಾನು ಚಿಕ್ಕ ಹುಡುಗ ಆಗಿಬಿಟ್ಟೆ. ನನಗೆ ಟೀಸರ್ ಒಳ್ಳೆ ಅನುಭವ ಕೊಡ್ತು. ಆ ವಿಷ್ಯುವಲ್ಸ್ ಸೂಪರ್. ಅನಿಮಲ್ಸ್ ಕಣ್ಣ ಮುಂದೆ ಬಂದಂತೆ ಕಾಣುವುದು ಮಜಾ ಕೊಡ್ತು. ನಿಜಕ್ಕೂ ಸಖತ್ ಥ್ರಿಲ್ಲಿಂಗ್ ಆಗಿತ್ತು. ಶೀಘ್ರದಲ್ಲೇ 60 ಸ್ಕ್ರೀನ್‌ಗಳಲ್ಲಿ 3Dಯಲ್ಲಿ ಟೀಸರ್ ಪ್ರದರ್ಶನ ಮಾಡಲಾಗುತ್ತದೆ. ಅಭಿಮಾನಿಗಳು ನೋಡಬೇಕು. ಯಾಕೆಂದರೆ ಅವರ ಬೆಂಬಲ ನಮಗೆ ಬಹಳ ಮುಖ್ಯ" ಎಂದರು.

    "ಇದು ಹೊಸ ಟೆಕ್ನಾಲಜಿ"- ಪ್ರಭಾಸ್

    3D ಮೋಷನ್ ಕ್ಯಾಪ್ಚರ್ ಟೆಕ್ನಾಲಜಿ ಬಳಸಿ 'ಆದಿಪುರುಷ್' ಸಿನಿಮಾ ಮಾಡಿರುವುದಾಗಿ ಚಿತ್ರತಂಡ ಹೇಳುತ್ತಾ ಬರುತ್ತದೆ. ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿತ್ತು ಚಿತ್ರತಂಡ. ಗ್ರೀನ್‌ಮ್ಯಾಟ್ ಸ್ಟುಡಿಯೋಗಳಲ್ಲೇ ಸಿನಿಮಾ ಶೂಟಿಂಗ್ ನಡೆದಿತ್ತು. "ಭಾರತದಲ್ಲಿ ಈ ಟೆಕ್ನಾಲಜಿ ಮೊದಲ ಬಾರಿ ಬಳಸಿರುವುದು. ಇದನ್ನು ದೊಡ್ಡ ಪರದೆಗಾಗಿ ಮಾಡಿರುವುದು. ಅದೇ ರೀತಿ ನೋಡಿ ಎಂಜಾಯ್ ಮಾಡಬೇಕು. ಅದರಲ್ಲೂ 3Dಯಲ್ಲೇ ನೋಡಬೇಕು" ಎಂದು ಪ್ರಭಾಸ್ ತಿಳಿಸಿದ್ದಾರೆ.

    ಪ್ರಭಾಸ್ ಬರ್ತ್‌ಡೇಗೆ 'ಆದಿಪುರುಷ್' ಹೊಸ ಟೀಸರ್

    ಪ್ರಭಾಸ್ ಬರ್ತ್‌ಡೇಗೆ 'ಆದಿಪುರುಷ್' ಹೊಸ ಟೀಸರ್

    ಬಾಹುಬಲಿ ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಅಕ್ಟೋಬರ್ 23ಕ್ಕೆ 'ಬಿಲ್ಲಾ' ಸಿನಿಮಾ ರೀ ರಿಲೀಸ್ ಆಗಲಿದೆ. ಇದರ ಜೊತೆಗೆ 'ಸಲಾರ್', 'ಪ್ರಾಜೆಕ್ಟ್ K' ಸಿನಿಮಾಗಳ ಟೀಸರ್ ಗಿಫ್ಟ್ ಆಗಿ ಸಿಗುವ ಸಾಧ್ಯತೆಯಿದೆ. 'ಆದಿಪುರುಷ್' ಮತ್ತೊಂದು ಟೀಸರ್‌ ಕೂಡ ತಮ್ಮ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುವುದಾಗಿ ಯಂಗ್ ರೆಬೆಲ್ ಸ್ಟಾರ್ ಘೋಷಿಸಿದ್ದಾರೆ.

    ಮೊದಲು 'ಬಾಹುಬಲಿ'ಯನ್ನು ಟ್ರೋಲ್ ಆಮೇಲೆ?

    ಮೊದಲು 'ಬಾಹುಬಲಿ'ಯನ್ನು ಟ್ರೋಲ್ ಆಮೇಲೆ?

    ಇನ್ನು 3Dಯಲ್ಲಿ 'ಆದಿಪುರುಷ್' ಟೀಸರ್ ನೋಡಿ ಮಾತನಾಡಿದ ನಿರ್ಮಾಪಕ ದಿಲ್‌ ರಾಜು "ಟೀಸರ್ ಸೂಪರ್, ನಾನು ಮೊಬೈಲ್, ಟಿವಿಯಲ್ಲಿ ನೋಡಿ ಖುಷಿಪಟ್ಟೆ. ಈಗ 3Dಯಲ್ಲಿ ಮತ್ತಷ್ಟು ಮಜಾ ಕೊಡ್ತು. ಕೆಲವರು ಟೀಸರ್ ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಅವರಿಗೆ ನಾನು ಒಂದು ಹೇಳ್ತೀನಿ. 'ಬಾಹುಬಲಿ' ಸಿನಿಮಾ ಸಮಯದಲ್ಲೂ ಇದೇ ರೀತಿ ಟ್ರೋಲ್ ಮಾಡಿದ್ದರು. ಪ್ರಭಾಸ್ ಶಿವಲಿಂಗ ಎತ್ತಿಕೊಂಡಿರುವ ಪೋಸ್ಟರ್‌ನಲ್ಲಿ ಜೆಂಡು ಬಾಂಬ್ ಇಟ್ಟು ಗೇಲಿ ಮಾಡಿದ್ದರು. ಆದರೆ ನಾನು ಒಂದು ದಿನ ಮೊದಲೇ ಸಿನಿಮಾ ನೋಡಿ ಸೂಪರ್ ಹಿಟ್ ಆಗುತ್ತೆ ಎಂದು ಪ್ರಭಾಸ್‌ಗೆ ಹೇಳಿದ್ದೆ. ಅದೇ ರೀತಿ ಆಗಿತ್ತು. 'ಆದಿಪುರುಷ್' ಹೊಸ ಟೆಕ್ನಾಲಜಿ ಬಳಸಿ ಮಾಡಿರುವ ಸಿನಿಮಾ, ದೊಡ್ಡಪರದೆಯಲ್ಲಿ ನೋಡಿದರೆ ಹೊಸ ಅನುಭವ ನೀಡುತ್ತದೆ" ಎಂದರು.

    English summary
    Actor Prabhas First Reaction on Adipurush Teaser Trolls. Know More.
    Friday, October 7, 2022, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X