For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಮ್ ನಲ್ಲಿ ಪ್ರಭಾಸ್ ಫಾಲೋ ಮಾಡುತ್ತಿರುವ 6 ನಟಿಯರು ಯಾರು ಮತ್ತು ಯಾಕೆ?

  |

  ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಅಷ್ಟು ಸಕ್ರಿಯರಾಗಿಲ್ಲ. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್‌ಗೆ ಪದಾರ್ಪಣೆ ಮಾಡುವ ಮೂಲಕ ಪ್ರಭಾಸ್ ಸಾಮಾಜಿಕ ಜಾಲತಾಣಕ್ಕೆ ಕೊಂಚ ಆಕ್ಟೀವ್ ಆಗಿದ್ದಾರೆ.

  ಇನ್ಸ್ಟಾಗ್ರಾಮ್ ಮೂಲಕ ಪ್ರಭಾಸ್ ತಮ್ಮ ಸಿನಿಮಾಗಳ ಮಾಹಿತಿ ಸೇರಿದಂತೆ ಕೆಲವು ಮುಖ್ಯವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ತಮ್ಮ ಸಿನಿಮಾಗಳ ಪ್ರಚಾರ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಮುಖ್ಯವಾಗಿ ಅಭಿಮಾನಿಗಳ ಜೊತೆ ನೇರ ಸಂಪರ್ಕ ಸಾಧಿಸಲು ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣ ಸಹಕಾರಿಯಾಗಿದೆ. ಅನೇಕರು ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಆದರ ಪ್ರಭಾಸ್ ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಇತ್ತೀಚಿಗಷ್ಟೆ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ವಿಶ್ ಪೋಸ್ಟ್ ಶೇರ್ ಮಾಡುವ ಮೂಲಕ ಪ್ರಭಾಸ್ ಇನ್ಸ್ಟಾಗ್ರಾಮ್‌ನಲ್ಲಿ 100ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

  14 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ

  14 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ

  ಅಂದಹಾಗೆ ಇನ್ಸ್ಟಾಗ್ರಾಮ್‌ನಲ್ಲಿ ಪ್ರಭಾಸ್‌ 6.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ವಿಶೇಷ ಎಂದರೆ ಪ್ರಭಾಸ್ ಕೇವಲ 14 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ 6 ಸ್ಟಾರ್ ನಟಿಯರು ಇದ್ದು, ಬಾಲಿವುಡ್‌ನ ಮೂವರು ನಟಿಯರು ಕೂಡ ಸೇರಿದ್ದಾರೆ. ಪ್ರಭಾಸ್ ಫಾಲೋ ಮಾಡುತ್ತಿರುವ ಬಾಲಿವುಡ್‌ನ ಇಬ್ಬರು ಸ್ಟಾರ್ ನಟಿಯರೆಂದರೆ ದೀಪಿಕಾ ಪಡುಕೋಣೆ, ಕೃತಿ ಸನೂನ್ ಮತ್ತು ಶ್ರದ್ಧಾ ಕಪೂರ್.

  ಪ್ರಭಾಸ್ ಜೊತೆ ನಟಿಸಿದ ನಾಯಕಿಯರಿವರು

  ಪ್ರಭಾಸ್ ಜೊತೆ ನಟಿಸಿದ ನಾಯಕಿಯರಿವರು

  ನಟಿ ಶ್ರದ್ಧಾ ಕಪೂರ್ ಜೊತೆ ಪ್ರಭಾಸ್ ಸಾಹೋ ಸಿನಿಮಾದಲ್ಲಿ ನಟಿಸಿದ್ದರು. ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ಹಾಗಾಗಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು ನಟಿ ಕೃತಿ ಸನೂನ್ ಜೊತೆ ಸದ್ಯ ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಕೃತಿಯನ್ನು ಇನ್ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ.

  ದೀಪಿಕಾ ಜೊತೆ ನಟಿಸಲು ಸಜ್ಜಾಗಿರುವ ಪ್ರಭಾಸ್

  ದೀಪಿಕಾ ಜೊತೆ ನಟಿಸಲು ಸಜ್ಜಾಗಿರುವ ಪ್ರಭಾಸ್

  ನಟಿ ದೀಪಿಕಾ ಪಡುಕೋಣೆ ಜೊತೆ ಸಹ ಸಿನಿಮಾ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ, ಹಾಗಾಗಿ ದೀಪಿಕಾರನ್ನು ಸಹ ಫಾಲೋ ಮಾಡುತ್ತಿದ್ದಾರೆ. ಇನ್ನು ಉಳಿದಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ನಿರ್ದೇಶಕ ಪ್ರಶಾಂತ್ ನೀಲ್, ಪೂಜಾ ಹೆಗ್ಡೆ, ನಟಿ ಭಾಗ್ಯಶ್ರೀ, ಶ್ರುತಿ ಹಾಸನ್ ಅವರನ್ನು ಪ್ರಭಾಸ್ ಫಾಲೋ ಮಾಡುತ್ತಿದ್ದಾರೆ.

  33M ಫಾಲೋವರ್ಸ್ ಹೊಂದಿರೋ ಮಾಹಿ ಫಾಲೋ ಮಾಡೋದು ಇವ್ರನ್ನು‌ ಮಾತ್ರ!! | Filmibeat Kannada
  ಸಲಾರ್ -ಆದಿಪುರುಷ್ ಸಿನಿಮಾಗಳಲ್ಲಿ ಬ್ಯುಸಿ

  ಸಲಾರ್ -ಆದಿಪುರುಷ್ ಸಿನಿಮಾಗಳಲ್ಲಿ ಬ್ಯುಸಿ

  ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಭಾಸ್ ಸದ್ಯ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಮತ್ತು ಓ ರಾವತ್ ಅವರ ಆದಿಪುರುಷ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಾಗ್ ಅಶ್ವಿನ್ ಅವರ ಸಿನಿಮಾ ಕೂಡ ಸಾಲಲ್ಲಿ ಇದೆ. ಸದ್ಯದಲ್ಲೇ ಸಲಾರ್ ಸಿನಿಮಾ ಮುಗಿಸಿ ನಾಗ್ ಅಶ್ವಿನ್ ಜೊತೆಹೊಸ ಸಿನಿಮಾ ಶುರುಮಾಡಲಿದ್ದಾರೆ. ಇನ್ನೂ ಬಹುನಿರೀಕ್ಷೆಯ ರಾಧೆ ಶ್ಯಾಮ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

  English summary
  Tollywood Actor Prabhas follows 6 Actress on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X