For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆಗಾಗಿ ಪ್ರಭಾಸ್‌ನನ್ನು ವಿದೇಶಕ್ಕೆ ಕಳುಹಿಸುತ್ತಿರುವ 'ಆದಿಪುರುಷ್' ನಿರ್ದೇಶಕ

  |

  ಟಾಲಿವುಡ್ ಹೀರೋ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ದೊಡ್ಡ ಮಟ್ಟದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ತನ್ನ ಜನಪ್ರಿಯತೆ ಹೆಚ್ಚಾಗುವ ಜೊತೆಗೆ ಪ್ರಭಾಸ್‌ಗೆ​ ಟ್ರೋಲಿಗರ ಕಾಟ ಕೂಡ ಹೆಚ್ಚಾಗಿದೆ.

  ಇತ್ತೀಚಿಗಷ್ಟೆ ಪ್ರಭಾಸ್ ಮುಂಬೈನಲ್ಲಿ ಕಾಣಿಸಿಕೊಂಡ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಪ್ರಭಾಸ್ ಮತ್ತು ನಟಿ ಕೃತಿ ಸನೂನ್ ಸೇರಿದಂತೆ ಆದಿಪುರುಷ್ ಸಿನಿಮಾತಂಡ ಡಾನ್ಸ್ ರಿಹರ್ಸಲ್ ಮುಗಿಸಿ ವಾಪಸ್ ಆಗುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಟ್ರೋಲಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

   50 ವರ್ಷದ ಅಂಕಲ್, ವಡಾ-ಪಾವ್, ವಯಸ್ಸಾಗಿದೆ: ಬಾಲಿವುಡ್‌ನಲ್ಲಿ ಪ್ರಭಾಸ್ ಹಿಗ್ಗಾಮುಗ್ಗಾ ಟ್ರೋಲ್ 50 ವರ್ಷದ ಅಂಕಲ್, ವಡಾ-ಪಾವ್, ವಯಸ್ಸಾಗಿದೆ: ಬಾಲಿವುಡ್‌ನಲ್ಲಿ ಪ್ರಭಾಸ್ ಹಿಗ್ಗಾಮುಗ್ಗಾ ಟ್ರೋಲ್

  ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದ ಪ್ರಭಾಸ್ ನನ್ನು ನೆಟ್ಟಿಗರು ಕಾಲೆಳೆದಿದ್ದರು. 'ಪ್ರಭಾಸ್ ಮತ್ತೆ ದಪ್ಪ ಆಗಿದ್ದಾರೆ', 'ಅಂಕಲ್ ತರ ಕಾಣಿಸುತ್ತಿದ್ದಾರೆ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೆಯಲ್ಲ 'ಪ್ರಭಾಸ್ ನೋಡಿದ್ರೆ 50 ವರ್ಷದ ಅಂಕಲ್ ಹಾಗೆ ಕಾಣಿಸುತ್ತಿದ್ದಾರೆ' ಎಂದು ನೆಟ್ಟಿಗರು ಪ್ರಭಾಸ್ ವಿರುದ್ಧ ಕಾಮೆಂಟ್ ಮಾಡಿದ್ದರು.


  ಇದರಿಂದ 'ಆದಿಪುರುಷ್​' ಸಿನಿಮಾ ನಿರ್ದೇಶಕ ಓಂ ರಾವುತ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ 'ಆದಿಪುರುಷ್​' ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಭಾಸ್​ ಅವರ ದೇಹದ ತೂಕ ಏಕಾಏಕಿ ಹೆಚ್ಚಾಗಿದೆ. ಹೀಗೆ ದಪ್ಪ ಆಗಿರುವ ಅವತಾರದಲ್ಲಿ ರಾಮನನ್ನು ನೋಡಲು ಪ್ರೇಕ್ಷಕರು ಇಷ್ಟಪಡುವುದಿಲ್ಲ. ಹಾಗಾಗಿ ಪ್ರಭಾಸ್ ಗೆ​ ತೂಕ ಕಡಿಮೆ ಮಾಡಿಕೊಳ್ಳಬೇಕಿರುವುದು ತುಂಬ ಅನಿವಾರ್ಯ ಆಗಿದೆ. ಇದು ಚಿತ್ರದ ನಿರ್ದೇಶಕ ಓಂ ರಾವುತ್​ ಸವಾಲಾಗಿದೆ. ಹಾಗಾಗಿ ನಿರ್ದೇಶಕ ಓಂ ರಾವತ್ ಒಂದು ನಿರ್ಧಾರ ಮಾಡಿದ್ದಾರೆ.

  ಪ್ರಭಾಸ್‌ಗೆ​ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಅವರನ್ನು ಯುಕೆ ಗೆ ಕಳುಹಿಸಲು ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಓಂ ರಾವತ್. ಹಠಾತ್ ತೂಕ ಹೆಚ್ಚಾದ ಕಾರಣ ತಿಳಿಯಲು ಪ್ರಭಾಸ್ ಅವರನ್ನು ವಿದೇಶಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಪ್ರಭಾಸ್ ಅವರನ್ನು ಮೊದಲಿನ ಆಕಾರಕ್ಕೆ ತರಲು ನಿರ್ದೇಶಕ ಓಂ ರಾವತ್ ಪ್ರಯತ್ನ ಪಡುತ್ತಿದ್ದಾರೆ. ಬಳಿಕವೇ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಪ್ರಭಾಸ್ ಬಾಹುಬಲಿ ಸಿನಿಮಾ ಸಮಯದಲ್ಲಿ ಫಿಟ್ ಅಂಡ್ ಫೈನ್ ಆಗಿದ್ದರು. ಬಳಿಕ ಬಂದ ಸಾಹೋ ಸಿನಿಮಾ ಸಮಯದಲ್ಲಿ ಫಿಟ್ನೆಸ್ ಕಾಮಾಡಿಕೊಂಡಿದ್ದರು. ಆದರೀಗ ಪ್ರಭಾಸ್ ಸಿಕ್ಕಾಪಟ್ಟೆ ದಪ್ಪಾ ಆಗಿದ್ದಾರೆ. ಏಕಾಏಕಿ ದಪ್ಪ ಆಗಿರುವುದು ಚಿತ್ರದ ನಿರ್ದೇಶಕರಿಗೆ ದೊಡ್ಡ ಚಿಂತೆಯಾಗಿದೆ. ಹಾಗಾಗಿ ಯುಕೆಯಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದಾರೆ.

  ಪ್ರಭಾಸ್ ಕೊನೆಯದಾಗಿ ಸಾಹೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಾಹುಬಲಿ ನಂತರ ಬಂದ ಸಿನಿಮಾ ಆಗಿದ್ದರಿಂದ ಈ ಸಿನಿಮಾದಲ್ಲಿ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಸಾಹೋ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಹುಸಿಮಾಡಿತ್ತು. ಹಾಗಾಗಿ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ರಭಾಸ್ ಸದ್ಯ ಆದಿಪುರುಷ್, ಸಲಾರ್ ಮತ್ತು ಇನ್ನು ಹೆಸರಿಡದ ನಿರ್ದೇಶಕ ನಾಗ್ ಅಶ್ವಿನ್ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Tollywood Actor Prabhas likely to fly UK for Body test.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X