ತೂಕ ಇಳಿಸಿಕೊಂಡ ನಟ ಪ್ರಭಾಸ್, ಟ್ರೋಲ್‌ಗಳಿಗೆ ಬ್ರೇಕ್!
ನಟ ಪ್ರಭಾಸ್ ಅಭಿನಯದ ಮುಂದಿನ ಸಿನಿಮಾ 'ಸಲಾರ್'. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಲಾರ್ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಕೆಲವು ಹಂತದ ಶೂಟಿಂಗ್ ಮುಗಿದಿದೆ. 'ಕೆಜಿಎಫ್ 2' ಬಳಿಕ ಸಿನಿಮಾವನ್ನು ಫುಲ್ ಫ್ಲೆಡ್ಜ್ ನಲ್ಲಿ ಮಾಡಿ ಮುಗಿಸಲು ಚಿತ್ರತಂಡ ಯೋಜನೆ ರೂಪಿಸಿದೆ.
ಹಾಗಾಗಿ ಸದ್ಯ 'ಸಲಾರ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಪ್ರಭಾಸ್ ಲುಕ್ ಕೂಡ ರಿವೀಲ್ ಆಗಿತ್ತು. ವೈರಲ್ ಫೋಟೊದಲ್ಲೇ ಪ್ರಭಾಸ್ ತುಂಬಾ ಸಣ್ಣ ಕಾಣಿಸುತ್ತಿದ್ದರು. ಅಸ್ಪಷ್ಟವಾದ ಈ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಪ್ರಭಾಸ್ ಈ ಲುಕ್ ಹಿಂದೆ ಇರುವ ಸೀಕ್ರೆಟ್ ಏನು ಎನ್ನುವುದು ಈಗ ರಿವೀಲ್ ಆಗಿದೆ. ಸಲಾರ್ ಸಿನಿಮಾಕ್ಕಾಗಿ ನಟ ಪ್ರಭಾಸ್ ತೂಕ ಇಳಿಸಿಕೊಳ್ಳುತ್ತಾ ಇದ್ದಾರೆ. ಈಗಾಗಲೆ ಒಂದು ಲುಕ್‌ನಲ್ಲಿ ಒಂದಷ್ಟು ಚಿತ್ರೀಕರಣ ಮಾಡಲಾಗಿದೆ. ಈಗ ಪ್ರಭಾಸ್ ಸಣ್ಣ ಆಗುತ್ತಿದ್ದು, ಎರಡು ಲುಕ್‌ನಲ್ಲಿ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ.
Recommended Video


ಸಲಾರ್‌ನಲ್ಲಿ ಪ್ರಭಾಸ್ ಎರಡು ಶೇಡ್!
ನಟ ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೂಡ ಗ್ಯಾಗ್‌ಸ್ಟರ್ ಕಥೆ ಎಂದು ಹೇಳಲಾಗಿದ್ದು ಪ್ರಭಾಸ್ ಪಾತ್ರವನ್ನು ಸ್ಟೈಲಿಶ್ ಆಗಿ ಪ್ರಸೆಂಟ್ ಮಾಡಲಿದ್ದಾರಂತೆ ಪ್ರಶಾಂತ್ ನೀಲ್. ಹಾಗಾಗಿ ಈ ಪಾತ್ರಕ್ಕಾಗಿ ನಟ ಪ್ರಭಾಸ್ ತೂಕ ಕಳೆದುಕೊಂಡು ಸಣ್ಣ ಆಗಿದ್ದಾರೆ. ಹಾಗಾಗ ಸಲಾರ್ ಸಿನಿಮಾದಲ್ಲಿ ನಟ ಪ್ರಭಾಸ್ ಎರಡು ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಟ್ರೋಲ್ ಆಗಿದ್ದ ನಟ ಪ್ರಭಾಸ್!
ಪ್ರಭಾಸ್ ಕೆಲವು ದಿನಗಳ ಹಿಂದೆ ಸಿಕ್ಕಾಪಟ್ಟೆ ದಪ್ಪ ಆಗಿದ್ದರು. 'ಆದಿಪುರುಷ್' ಸಿನಿಮಾದ ಸಮಯದಲ್ಲಿ ಪ್ರಭಾಸ್ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದರು. ಹಾಗಾಗಿ ಕ್ಯಾಮೆರ ಕಣ್ಣಿಗೆ ಬಿದ್ದ ಕೂಡಲೇ ಟ್ರೋಲ್ ಆಗುತ್ತಿದ್ದರು. ತೆರೆ ಹಿಂದೆ ಪ್ರಭಾಸ್ ಇಷ್ಟು ಕೆಟ್ಟದಾಗಿ ಇದ್ದಾರಾ ಎಂದು ಅವರನ್ನು ಟ್ರೋಲ್ ಮಾಡಲಾಗುತ್ತಿತ್ತು. ಬಹುಶಃ ಆದಿ ಪುರುಷ್ ಸಿನಿಮಾಗಾಗಿ ಪ್ರಭಾಸ್ ತೂಕ ಹೆಚ್ಚಿಸಿಕೊಂಡಿದ್ದರು.

'ಸಲಾರ್' ಬಳಿಕ 'ಆದಿಪುಷ್', 'ಪ್ರಾಜೆಕ್ಟ್-ಕೆ'!
ಪ್ರಭಾಸ್ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು ಇವೆ. ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಆದರೆ ಈ ಚಿತ್ರಗಳ ಪೈಕಿ ಮೊದಲು ರಿಲೀಸ್ ಆಗೋದು ಸಲಾರ್. ಈ ಸಿನಿಮಾದ ಬಳಿಕ 'ಆದಿಪುರುಷ್' ತೆರೆಕಾಣಲಿದೆ. ಬಳಿಕ ಪ್ರಾಜೆಕ್ಟ್-ಕೆ ಸಿನಿಮಾ ಸಾಲಿನಲ್ಲಿ ಇದೆ. ಬಾಹುಬಲಿ ಸರಣಿ ಸಿನಿಮಾಗಳ ನಂತರ ಪ್ರಭಾಸ್ ಹೆಚ್ಚು ಬ್ರೇಕ್ ತೆಗೆದುಕೊಳ್ಳದೆ, ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ.

ಪ್ರಭಾಸ್ ಗೆ ನಂಬರ್ 1 ಪಟ್ಟ!
ಸದ್ಯ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೈಯಲ್ಲಿ ಹಿಡಿದು ನಿಂತಿರುವ ತೆಲುಗಿನ ಏಕೈಕ ನಟ ಪ್ರಭಾಸ್. ಈ ಮೂರು ಸಿನಿಮಾಗಳ ಬಳಿಕ, ಸ್ಪಿರಿಟ್ ಮತ್ತು ನಿರ್ದೇಶಕ ಮಾರುತಿ ಸಿನಿಮಾಗಳು ಶುರುವಾಗಲಿವೆ. ಪ್ರಭಾಸ್ ಬಿಟ್ಟರೆ ಮತ್ಯಾರು ಈ ಮಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿಲ್ಲ. ಒಂದಾದ ಬಳಿಕಾ ಒಂದು ಸಿನಿಮಾಗಳು ಬರುತ್ತವೆ. ಹಾಗಾಗಿ ಪ್ರಭಾಸ್ ಮುಂದಿನ ಕೆಲವು ವರ್ಷ ತೆಲುಗಿನಲ್ಲಿ ನಂಬರ್ 1 ಹೀರೋ ಪಟ್ಟದಲ್ಲಿ ಕೂರಲಿದ್ದಾರೆ.


Click it and Unblock the Notifications











