For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 23ರಂದು ಪ್ರಭಾಸ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

  |

  ಟಾಲಿವುಡ್ ನಟ ಪ್ರಭಾಸ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸಾಹೋ ಚಿತ್ರದ ಬಳಿಕ ಬಾಹುಬಲಿ ನಟ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಸದ್ಯ ಪ್ರಭಾಸ್ ರಾಧೆ ಶ್ಯಾಮ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಪ್ರಭಾಸ್ ಅಕ್ಟೋಬರ್ 23ಕ್ಕೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಲು ತಯಾರಿ ಮಾಡಿಕೊಂಡಿದ್ದಾರೆ.

  ಅಂದ್ಹಾಗೆ ಅಕ್ಟೋಬರ್ 23 ಪ್ರಭಾಸ್ ಹುಟ್ಟಿದ ದಿನ. ಈ ವಿಶೇಷದಿಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡದೆ ಇರಲು ಸಾಧ್ಯವಿಲ್ಲ. ಹುಟ್ಟುಹಬ್ಬದ ಪ್ರಯುಕ್ತ ರಾಧೆ ಶ್ಯಾಮ ಸಿನಿಮಾದ ಹಾಡಿನ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬ: 'ರಾಧೆ ಶ್ಯಾಮ್' ಸಿನಿಮಾದಿಂದ ಭರ್ಜರಿ ಗಿಫ್ಟ್

  #BeatsOfRadheShyam ಎಂದು ಹ್ಯಾಷ್ ಟ್ಯಾಗ್ ಹಾಕಿ ಮೋಷನ್ ಪೋಸ್ಟರ್ ಗಾಗಿ ಕಾಯುತ್ತಿರಿ' ಎಂದು ಹೇಳಿದ್ದಾರೆ. ಪ್ರಭಾಸ್ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕುತೂಹಲ ದುಪ್ಪಟ್ಟಾಗಿದೆ. ಅಕ್ಟೋಬರ್ 23ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

  ರಾಧೆ ಶ್ಯಾಮ ಸಿನಿಮಾದಲ್ಲಿ ನಟ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಇತ್ತೀಚಿಗೆ ಪೂಜಾ ಹೆಗ್ಡೆ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಮೊದಲ ಬಾರಿಗೆ ಪೂಜಾ ಹೆಗ್ಡೆ ಲುಕ್ ಅನಾವರಣವಾಗಿದೆ. ಇದೀಗ ಪ್ರಭಾಸ್ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ.

  ಉಪಾಧ್ಯಕ್ಷನ ಬೆಂಬಲಕ್ಕೆ ನಿಂತ ರಾಬರ್ಟ್ ನಿರ್ಮಾಪಕ | Upadyaksha | Chikkanna | Umapathy Srinivas

  ಈ ಸಿನಿಮಾ ಜೊತೆಗೆ ಪ್ರಭಾಸ್ ಆದಿಪುರುಷ್ ಸಿನಿಮಾ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲದೆ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಅಭಿನಯದ ಇನ್ನೂ ಹೆಸರಿಡದ ಸಿನಿಮಾ ಕೂಡ ನಿರೀಕ್ಷೆ ಹೆಚ್ಚಿಸಿದೆ. ಸಖತ್ ಬ್ಯುಸಿಯಾಗಿರುವ ಪ್ರಭಾಸ್ ರಾಧೆ ಶ್ಯಾಮ ಬಳಿಕ ಯಾವ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ ಎನ್ನುವುದು ಕಾದುನೋಡಬೇಕು.

  English summary
  Telugu Actor Prabhas make a special Announcement of his movie Radhe Shyam on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X