ವಿದೇಶದಿಂದ ವಾಪಸ್ ಆದ ನಟ ಪ್ರಭಾಸ್ ಸ್ವಯಂ ನಿರ್ಬಂಧದಲ್ಲಿ

ಕೊರೊನಾ ವೈರಸ್ ಆತಂಕ ಹಿನ್ನಲೆ ನಟ ಪ್ರಭಾಸ್ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಇತ್ತೀಚಿಗೆ ನಟ ಪ್ರಭಾಸ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದರು. ಸದ್ಯ ವಾಪಸ್ ಆಗಿರುವ ಬಾಹುಬಲಿ ನಟ ಈಗ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಪ್ರಭಾಸ್ ಜೊತೆಗೆ ಇಡೀ ಸಿನಿಮಾತಂಡ ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ.

ಚಿತ್ರತಂಡ ಇತ್ತೀಚಿಗೆ ವಿದೇಶದಿಂದ ಚಿತ್ರೀಕರಣ ಮುಗಿಸಿ ಹೈದರಾಬಾದ್ ಗೆ ವಾಪಸ್ ಆಗಿದೆ. ಈ ಬಗ್ಗೆ ನಟ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ಹಿನ್ನಲೆ ನಾನು ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ನಟ ಪ್ರಭಾಸ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಜಾರ್ಜಿಯಾಗೆ ತೆರಳಿದ್ದ ಚಿತ್ರತಂಡ

ಜಾರ್ಜಿಯಾಗೆ ತೆರಳಿದ್ದ ಚಿತ್ರತಂಡ

ಪ್ರಭಾಸ್ ಸದ್ಯ ಜಾನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಜಾನ್ ಸಿನಿಮಾ ಶೂಟಿಂಗ್ ಗಾಗಿ ಇಡೀ ತಂಡ ಜಾರ್ಜಿಯಾಗೆ ಪಯಣ ಬೆಳೆಸಿತ್ತು. ಕೊರೊನಾ ವೈರಸ್ ಹಾವಳಿ ಹೆಚ್ಚಾಗುವ ಮೊದಲೆ ಚಿತ್ರತಂಡ ವಿದೇಶಕ್ಕೆ ಹಾರಿತ್ತು. ಸದ್ಯಾ ವಾಪಸ್ ಆಗಿರುವ ತಂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

ಈ ಬಗ್ಗೆ ಪ್ರಭಾಸ್ ಹೇಳಿದ್ದೇನು?

ಈ ಬಗ್ಗೆ ಪ್ರಭಾಸ್ ಹೇಳಿದ್ದೇನು?

ಈ ಬಗ್ಗೆ ನಟ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿದೇಶದಿಂದ ಚಿತ್ರೀಕರಣ ಮುಗಿಸಿ ಸುರಕ್ಷಿತವಾಗಿ ವಾಪಸ್ ಬಂದಿದ್ದೀವಿ. ಕೊರೊನಾ ಹೆಚ್ಚುತ್ತಿರುವ ಕಾರಣ ನಾನು ಸ್ವಯಂ ಸಂಪರ್ಕದಲ್ಲಿ ಇರಲು ನಿರ್ಧರಿಸಿದ್ದೇನೆ. ನೀವೆಲ್ಲರು ಸುರಕ್ಷಿತರಾಗಿರಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇನೆ" ಎಂದು ಪ್ರಭಾಸ್ ಹೇಳಿದ್ದಾರೆ.

ನಟಿ ಪೂಜಾ ಹೆಗ್ಡೆ ಸ್ವಯಂ ನಿರ್ಬಂಧ

ನಟಿ ಪೂಜಾ ಹೆಗ್ಡೆ ಸ್ವಯಂ ನಿರ್ಬಂಧ

ನಟ ಪ್ರಭಾಸ್ ಜೊತೆ ನಾಯಕಿ ಪೂಜಾ ಹೆಡಗೆ ಕೂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಜಾರ್ಜಿಯಾದಿಂದ ವಾಪಸ್ ಆಗುತ್ತಿರುವ ಫೋಟೋವನ್ನು ಹಾಕಿಕೊಂಡಿರುವ ಪೂಜಾ ಮಾಸ್ಕ್ ಹಾಕಿಕೊಂಡು ಏರ್ ಪೋರ್ಟ್ ನಲ್ಲಿ ಕುಳಿತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಪರಿಣಾಮ ಪೂಜಾ ಕೂಡ ಸ್ವಯಂಬಂಧಿಯಾಗಿದ್ದಾರೆ.

ರಾಧಕೃಷ್ಣ ನಿರ್ದೇಶನದ ಸಿನಿಮಾ

ರಾಧಕೃಷ್ಣ ನಿರ್ದೇಶನದ ಸಿನಿಮಾ

ಜಾನ್ ಸಿನಿಮಾದ ಸಿನಿಮಾವನ್ನು ನಿರ್ದೇಶಕ ರಾಧಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಈಗ ವಿದೇಶದಿಂದ ವಾಪಸ್ ಆದ ಇಡೀ ಚಿತ್ರತಂಡ ಸ್ವಯಂ ನಿರ್ಬಂಧದಲ್ಲಿ ಇದೆ. ಇತ್ತೀಚಿಗೆ ಪ್ರಭಾಸ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮಾಸ್ಕ್ ಹಾಕಿಕೊಂಡು ತಂಡದ ಜೊತೆ ಜಾರ್ಜಿಯಾಗೆ ಹೋಗುತ್ತಿದ್ದ ಪ್ರಭಾಸ್ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿದ್ದರು.

More from Filmibeat

English summary
Telugu Actor prabhas self quarantined after returning from georgia. Prabhas had gone to Georgia for the Jaan film shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X