'ಸಲಾರ್' ಚಿತ್ರದ ಇಂಟರೆಸ್ಟಿಂಗ್ ಮಾಹಿತಿ: ರಿವೀಲ್ ಆಯ್ತು ಪ್ರಭಾಸ್ ಪಾತ್ರ
ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಏಕಕಾಲಕ್ಕೆ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಮತ್ತು ಆದಿಪುರುಷ್ ಎರಡು ಸಿನಿಮಾಗಳಲ್ಲಿ ಪ್ರಭಾಸ್ ನಟೆಸುತ್ತಿದ್ದಾರೆ. ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಕ್ತಾಯವಾಗಿದೆ.
Recommended Video
ಕೊನೆಯ ಹಂತದ ಚಿತ್ರೀಕರಣದಲ್ಲಿದ್ದ ಚಿತ್ರತಂಡಕ್ಕೆ ಕೊರೊನಾ ಮುಳುವಾಗಿದೆ. ಸದ್ಯ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಸದ್ಯ ಸಲಾರ್ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಪ್ರಭಾಸ್ ಪಾತ್ರ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೀಗ ಕುತೂಹಲಕ್ಕೆ ತೆರೆಬಿದ್ದಿದೆ. ಮುಂದೆ ಓದಿ...

ಆರ್ಮಿ ಅಧಿಕಾರಿ ಪಾತ್ರದಲ್ಲಿ ಪ್ರಭಾಸ್
ಸಲಾರ್ ನಲ್ಲಿ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಒಂದು ಪಾತ್ರದಲ್ಲಿ ಸೇನಾ ಅಧಿಕಾರಿಯಾದರೆ ಮತ್ತೊಂದು ಪಾತ್ರ ಯಾವುದು ಎನ್ನುವುದು ಸದ್ಯದ ಕುತೂಹಲ. ಮೊದಲ ಬಾರಿಗೆ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ಆರ್ಮಿ ಉಡುಪಿನಲ್ಲಿ ಪ್ರಭಾಸ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಉಗ್ರಂ ಚಿತ್ರಕ್ಕಿಂತ ಭಿನ್ನವಾಗಿದೆ ಸಲಾರ್
ಅಂದಹಾಗೆ ಸಲಾರ್ 2014ರಲ್ಲಿ ಬಿಡುಗಡೆಯಾಗಿದ್ದ ಕನ್ನಡದ ಉಗ್ರಂ ಸಿನಿಮಾದ ರಿಮೇಕ್ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೂಡ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. ಆದರೆ ಸಲಾರ್ ಬಗ್ಗೆ ಸದ್ಯ ಕೇಳಿಬರುತ್ತಿರುವ ಮಾಹಿತಿ ನೋಡಿದ್ರೆ ಉಗ್ರಂ ಸಿನಿಮಾಗಿಂತ ಸಾಕಷ್ಟು ಭಿನ್ನವಾಗಿದೆ ಎನ್ನುವುದು ಗೊತ್ತಾಗುತ್ತಿದೆ.

ಪತ್ರಕರ್ತೆಯ ಪಾತ್ರದಲ್ಲಿ ಶ್ರುತಿ ಹಾಸನ್
ಇನ್ನು ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ಹಾಸನ್ ಚಿತ್ರದಲ್ಲಿ ತನಿಖಾ ಪತ್ರಕರ್ತೆಯಾಗಿ ಬಣ್ಣಹಚ್ಚಿದ್ದಾರೆ ಎನ್ನುವ ಮಾಹಿತಿ ರಿವೀಲ್ ಆಗಿದೆ. ಚಿತ್ರದಲ್ಲಿ ಆರ್ಮಿ ಅಧಿಕಾರಿ ಪಾತ್ರವೇ ಹೈಲೆಟ್ ಅಂತೆ. ಜೊತೆ ಅತೀ ಹೆಚ್ಚು ಆಕ್ಷನ್ ದೃಶ್ಯಗಳು ಇರಲಿದೆ ಎನ್ನುವಮಾತು ಕೇಳಿಬರುತ್ತಿದೆ.

ಹೊಂಬಾಳೆ ಫಿಲ್ಮ್ಸ್ ಬಂಡವಾಳ
ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಸಂಗೀತ ಕೆಲಸಗಳು ರವಿ ಬಸ್ರೂರ್ ಹೊಸ ಸ್ಟುಡಿಯೋದಲ್ಲಿ ನಡೆಯುತ್ತಿದೆ.


Click it and Unblock the Notifications











