For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿಯ ನಡುವೆಯೂ ಯೂರೋಪ್ ಗೆ ಹಾರಿದ ನಟ ಪ್ರಭಾಸ್

  |

  ಇಡೀ ವಿಶ್ವವೆ ಮಾರಣಾಂತಿಕ ಕೊರೊನಾ ವೈರಸ್ ಗೆ ಆತಂಕಕ್ಕೆ ಒಳಗಾಗಿದೆ. ಈಗಾಗಲೆ ಚೀನಾದಲ್ಲಿ ಸಾಕಷ್ಟು ಮಂದಿಯನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಈಗ ಭಾರತಕ್ಕೂ ಕಾಲಿಟ್ಟಿದ್ದು, 25ಕ್ಕು ಹೆಚ್ಚು ಮಂದಿಗೆ ವೈರಸ್ ಬಂದಿರುವುದು ಖಚಿತವಾಗಿದೆ. ಕೊರೊನಾ ವೈರಸ್ ಭೀತಿಯಿಂದ ಭಾರತೀಯರು ವಿದೇಶಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ.

  ಪ್ರಭಾಸ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದೀರಿ' ಎಂದು ನಂಬಿಸಿ ಖ್ಯಾತ ನಟಿಯ ಕಿಡ್ನಾಪ್ಪ್ರಭಾಸ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದೀರಿ' ಎಂದು ನಂಬಿಸಿ ಖ್ಯಾತ ನಟಿಯ ಕಿಡ್ನಾಪ್

  ಭಾರತೀಯ ಚಿತ್ರೋದ್ಯಮದ ಮೇಲು ಕೊರೊನಾ ವೈರಸ್ ಪರಿಣಾಮ ಬೀರಿದ್ದು, ಈಗಾಗಲೆ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಬೇಕಿದ್ದ ಚಿತ್ರಗಳ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಲಾಗಿದೆ. ಕನ್ನಡದ ಮೂರು ಚಿತ್ರಗಳು ಸೇರಿದಂತೆ ಸಾಕಷ್ಟು ಚಿತ್ರಗಳ ವಿದೇಶಿ ಚಿತ್ರೀಕರಣ ರದ್ದಾಗಿದೆ.

  ಕೊರೊನಾ ಭಯದ ನಡುವೆಯೂ ಟಾಲಿವುಡ್ ಸ್ಟಾರ್ ಪ್ರಭಾಸ್ ವಿದೇಶಕ್ಕೆ ಹಾರಿದ್ದಾರೆ. ಹೌದು, ಪ್ರಭಾಸ್ ಸದ್ಯ 'ಪ್ರಭಾಸ್ 20' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಯೂರೋಪ್ ನಲ್ಲಿ ನಡೆಯುತ್ತಿದೆ. ಹಾಗಾಗಿ ಇಡೀ ಚಿತ್ರತಂಡ ಯೂರೋಪ್ ಪಯಣ ಬೆಳೆಸಿದೆ.

  ಚಿತ್ರತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿದೇಶಕ್ಕೆ ಹಾರಿದೆ. ಇಂದು ಬೆಳಗ್ಗೆ ಇಡೀ ಚಿತ್ರತಂಡ ಮಾಸ್ಕ್ ಹಾಕಿಕೊಂಡು ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಪ್ರಭಾಸ್ ಮಾಸ್ಕ್ ಹಾಕಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ರಾಧಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಯೂರೋಪ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ.

  English summary
  Telugu Actor Prabhas traveled to Europe amid coronavirus. Telugu Actor Prabhas busy with Prabhas 20 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X