42ನೇ ವಸಂತಕ್ಕೆ ಕಾಲಿಟ್ಟ ಪ್ರಭಾಸ್: ಇಲ್ಲಿದೆ ವಿಶೇಷ ಸ್ಟೋರಿ

ಭಾರತೀಯ ಸಿನಿಮಾರಂಗದಲ್ಲಿ ವಿಶ್ವ ಮಟ್ಟಕ್ಕೆ ಛಾಪು ಮೂಡಿಸಿರುವ ನಟರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯ ನಟರು ವಿಶ್ವ ಮಟ್ಟದಲ್ಲಿ ಸದ್ದು ಮಾಡೋದು ಅಂದರೆ ಸುಮ್ಮನೆ ಅಲ್ಲ. ಹೀಗೆ ಪುಟ್ಟ, ಪುಟ್ಟ ಹೆಜ್ಜೆ ಇಟ್ಟು ಇವತ್ತು ವಿಶ್ವದ ಗಮನ ಸೆಳೆದಿರೊ ನಾಯಕ ನಟರಲ್ಲಿ ನಟ ಪ್ರಭಾಸ್ ಕೂಡ ಒಬ್ಬರು. ಪ್ರಭಾಸ್ ಬಗ್ಗೆ ಇಂದು ಮಾತನಾಡೋಕೆ ಕಾರಣ ಅವರ ಜನುಮ ದಿನ. ಇಂದು ಪ್ರಭಾಸ್ 42ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ರಾಧೆ ಶ್ಯಾಮ್ ಚಿತ್ರದ ಹೊಸ ಟೀಸರ್ ಬಿಡುಗಡೆ!

ಪ್ರಭಾಸ್ ಹುಟ್ಟು ಹಬ್ಬದ ಪ್ರಯುಕ್ತ ರಾಧೆ-ಶ್ಯಾಮ್ ಚಿತ್ರದ ಹೊಸ ಟೀಸರ್‌ ರಿಲೀಸ್‌ ಆಗಿದೆ. ಟೀಸರ್‌ ಶುರು ಆಗೋದೆ ಪ್ರಭಾಸ್‌ ರಗಡ್‌ ಧ್ವನಿಯಲ್ಲಿ. ಟೀಸರ್ ಮೂಲಕ ಪ್ರಭಾಸ್ ಪಾತ್ರವನ್ನ ರಿವೀಲ್ ಮಾಡಲಾಗಿದೆ. ವಿಕ್ರಮಾದಿತ್ಯನ ಅನ್ನೋ ಪಾತ್ರದಲ್ಲಿ ಪ್ರಭಾಸ್ ಅಭಿನಯಿಸಿದ್ದಾರೆ. ತನಗೆ ಎಲ್ಲವೂ ಗೊತ್ತು, ಆದರೆ ಏನನ್ನೂ ಹೇಳೋದಿಲ್ಲ ಅನ್ನೋ ಸಾಲುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಪ್ರಭಾಸ್ ಟೀಸರ್‌ನಲ್ಲಿ ಹೇಳುವ ಡೈಲಾಗ್ ಯಾರಿಗಾಗಿ ಎನ್ನುವ ಕುತೂಹಲ ಸದ್ಯಕ್ಕೆ ಮನೆ ಮಾಡಿದೆ. ರಾಧೆ-ಶ್ಯಾಮ್ ಚಿತ್ರದ ಬಗೆಗಿನ ಎಲ್ಲಾ ಕುತೂಹಲಗಳಿಗೆ ತೆರೆ ಬೀಳುವುದು ಸಿನಿಮಾ ರಿಲೀಸ್ ಬಳಿಕ. 2022ರ ಜನವರಿ 14ಕ್ಕೆ ರಾಧೆಶ್ಯಾಮ್ ತೆರೆಗೆ ಬರುತ್ತದೆ. ಸದ್ಯಕ್ಕೆ ಹೊಸ ಟೀಸರ್ ಸದ್ದು ಮಾಡ್ತಿದೆ.

Actor Prabhas turns 42: special story is here

ಪ್ರಭಾಸ್ ಅಭಿಮಾನಿಗಳ ಸಂಭ್ರಮ!

ಪ್ರಭಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಭಾಸ್ ಅಭಿಮಾನಿಗಳೊಂದಿಗೆ ಸೇರಿ ಕೇಕ್ ಕತ್ತರಿಸದೇ ಇದ್ದರೂ, ಅಭಿಮಾನಿಗಳು ಮಾತ್ರ ಪ್ರಭಾಸ್ ಹೆಸರಿನಲ್ಲಿ ಕೇಕ್ ಕತ್ತಸಿರಿ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ಸಂಭ್ರಮದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಭಿನ್ನವಾದ ಹೊಸ ಪೋಸ್ಟರ್‌ಗಳ ಮೂಲಕ ಪ್ರಭಾಸ್‌ಗೆ ಅಭಿಮಾನಿಗಳು ಶುಭಕೋರಿದ್ದಾರೆ. ಟ್ವಿಟ್ಟರ್‌ ನಲ್ಲಿ ಪ್ರಭಾ್ ಬರ್ತ್‌ ಡೇ ಪೋಸ್ಟರ್‌ಗಳು ಟ್ರೆಂಡಿಂಗ್‌ನಲ್ಲಿವೆ.

Actor Prabhas turns 42: special story is here

ಬಾಹುಬಲಿ ನಂತರ ಬದಲಾಯ್ತು ಅದೃಷ್ಟ!

ನಟ ಪ್ರಭಾಸ್ 2002ರಲ್ಲಿ "ಈಶ್ವರ್" ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿದರು. ಆದರೆ ಪ್ರಭಾಸ್‌ಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ ವರ್ಷಂ. ಬಳಿಕ ರಾಜಮೌಳಿ ನಿರ್ದೇಶನದ ಛತ್ರಪತಿ ಪ್ರಭಾಸ್‌ಗೆ ಸ್ಟಾರ್ ಗಿರಿ ತಂದು ಕೊಟ್ಟಿತು. ಕಡಿಮೆ ಸಮಯದಲ್ಲೇ ಹೆಚ್ಚು ಹೆಸರು ಗಳಿಸಿದ ಕೀರ್ತಿ ಪ್ರಭಾಸ್ ಅವರದ್ದು. ಸ್ಟಾರ್ ಪಟ್ಟಕ್ಕೇರಿದ ಪ್ರಭಾಸ್ ಇಂದಿಗೂ ಹಿಂದೆ ತಿರುಗಿ ನೋಡಿಲ್ಲ. ಬುಜ್ಜಿಗಾಡು, ಬಿಲ್ಲಾ, ಮಿಸ್ಟರ್ ಪರ್ಫೆಕ್ಟ್, ಡಾರ್ಲಿಂಗ್, ಮಿರ್ಚಿ ಅಂತಹ ಸಿನಿಮಾಗಳ ಮೂಲಕ ಪ್ರಭಾಸ್ ಕೋಟ್ಯಾನು ಕೋಟಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅದರಲ್ಲೂ ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ಮತ್ತಷ್ಟು ಉತ್ತುಂಗಕ್ಕೆ ಏರಿದ್ದು ಸುಳ್ಳಲ್ಲ. ಬಾಹುಬಲಿ ಚಿತ್ರ ಕೇವಲ ಪ್ರಭಾಸ್ ಸಿನಿಮಾ ಜೀವನಕ್ಕಷ್ಟೇ ಅಲ್ಲ, ಭಾರತೀಯ ಸಿನಿಮಾ ರಂಗದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾ. ಬಾಹುಬಲಿ ಸರಣಿ ಸಿನಿಮಾಗಳ ನಂತರ ಪ್ರಭಾಸ್‌ಗೆ ವಿಶ್ವ ಮಟ್ಟದಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಪ್ರಭಾಸ್ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

Actor Prabhas turns 42: special story is here

ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ಬ್ಯೂಸಿ!

ಪ್ರಭಾಸ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಎರಡೂ, ಮೂರು ಸಿನಿಮಾಗಳ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡಿ ಮುಗಿಸುತ್ತಿದ್ದಾರೆ. ಸದ್ಯ ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ-ಶ್ಯಾಮ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸಲಾರ್, ಆದಿಪುರುಷ್, ಪ್ರೊಜೆಕ್ಟ್ ಕೆ ಚಿತ್ರದ ಚಿತ್ರೀಕರಣದಲ್ಲಿ ಪ್ರಭಾಸ್ ನಿರತರಾಗಿದ್ದಾರೆ. ಜೊತೆಗೆ 25ನೇ ಸಿನಿಮಾ "ಸ್ಪಿರಿಟ್" ಕೂಡ ಪ್ರಕಟವಾಗಿದೆ. ಈ ಚಿತ್ರಕ್ಕೆ ಅರ್ಜುನ್ ರೆಡ್ಡಿ ಚಿತ್ರ ಖ್ಯಾತಿಯ ನಿರ್ದೇಶಕ ಸಂದೀಪ್‌ ವಂಗಾ ನಿರ್ದೇಶನವಿದೆ. ಇಷ್ಟು ಬ್ಯೂಸಿ ಇರುವ ಪ್ರಭಾಸ್ ಮದುವೆ ಬಗ್ಗೆಯೂ ಆಗಾಗ ಪ್ರಶ್ನೆ ಮೂಡುತ್ತಾ ಇರುತ್ತೆ. 42 ವರ್ಷ ವಯಸ್ಸು ಆದ್ರು ಪ್ರಭಾಸ್ ಯಾಕೆ ಮದುವೆ ಆಗಿಲ್ಲ ಅನ್ನೋ ಚರ್ಚೆ ನಡೆಯುತ್ತಲೇ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ಪ್ರಭಾಸ್ ಸದ್ಯಕ್ಕೆ ಮದುವೆ ಬಗ್ಗೆ ಸುದ್ದಿ ಕೊಡುವ ಸೂಚನೆ ಕಾಣುತ್ತಿಲ್ಲ. ಆದರೆ ಸಾಲು ಸಾಲು ಸಿನಿಮಾಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

More from Filmibeat

English summary
Birthday special: actor prabhas turns 42, radhe shyam teaser releas for prabhas birthday,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X