For Quick Alerts
  ALLOW NOTIFICATIONS  
  For Daily Alerts

  'ಮಹಾನಟಿ' ನಿರ್ದೇಶಕರ ಚಿತ್ರದಲ್ಲಿ 'ಬಾಹುಬಲಿ' ಪ್ರಭಾಸ್

  |

  ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಸದ್ಯ 'ಪ್ರಭಾಸ್ 20' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಜೊತೆಗೆ ಪ್ರಭಾಸ್ ಮತ್ತೊಂದು ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

  2018ರಲ್ಲಿ ತೆರೆಗೆ ಬಂದ ಸೂಪರ್ ಹಿಟ್ ಮಹಾನಟಿ ಚಿತ್ರದ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ವೈಜಯಂತಿ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಪ್ರಭಾಸ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾದ ಬಗ್ಗೆ ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸಿದೆ.

  'RRR' ಬಳಿಕ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಗೆ ರಾಜಮೌಳಿ ಸಜ್ಜು: ನಾಯಕರು ಇವರೆ'RRR' ಬಳಿಕ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಗೆ ರಾಜಮೌಳಿ ಸಜ್ಜು: ನಾಯಕರು ಇವರೆ

  ಚಿತ್ರರಂಗದಲ್ಲಿ 50 ವರ್ಷ ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿರುವ ವೈಜಯಂತಿ ನಿರ್ಮಾಣ ಸಂಸ್ಥೆಯು ಪುಟ್ಟ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಭಾಸ್ ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  ಪ್ರಭಾಸ್ ಸದ್ಯ ಇನ್ನು ಹೆಸರಿಡದ (ತಾತ್ಕಾಲಿಕ ಟೈಟಲ್ ಪ್ರಭಾಸ್ 20) ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಮತ್ತೊಂದು ಸಕ್ಸಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಸಹ ಮುಗಿಸಿದೆ ಚಿತ್ರತಂಡ. ಚಿತ್ರಕ್ಕೆ ಕೆ.ಕೆ.ರಾಧಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಬಾಹುಬಲಿ ಚಿತ್ರದ ನಂತರ ಪ್ಯಾನ್ ಇಂಡಿಯ ನಾಯಕನಾಗಿರುವ ಪ್ರಭಾಸ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ ಪ್ರಭಾಸ್. ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಕೊನೆಯದಾಗಿ ಸಾಹೋ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

  English summary
  Telugu Actor Prabhas will work in Mahanati Director Nag Ashwin's next. Prabhas currently busy in Prabhas 20 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X