ತೆಲುಗು ಸ್ಟಾರ್ ನಟನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟನೆ

ಕನ್ನಡದ ಕೆಲವು ನಟರಿಗೆ ನೆರೆ-ಹೊರೆ ಸಿನಿಮಾರಂಗದಲ್ಲಿ ಒಳ್ಳೆಯ ಬೇಡಿಕೆ ಇದೆ. ಸುದೀಪ್, ಧನಂಜಯ್, ಉಪೇಂದ್ರ ಇನ್ನಿತರ ಸ್ಟಾರ್ ನಟರು ಆಗಾಗ್ಗೆ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಬರುತ್ತಿರುತ್ತಾರೆ.

ಕೆಲವು ನಟರು ಕನ್ನಡ ಸಿನಿಮಾಗಳ ಹೊರತಾಗಿ ಇನ್ನಾವ ಭಾಷೆಯ ಸಿನಿಮಾಗಳಲ್ಲಿಯೂ ನಟಿಸುವುದಿಲ್ಲ ಅವರಲ್ಲಿ ಒಬ್ಬರು ಪುನೀತ್ ರಾಜ್‌ಕುಮಾರ್. ಆದರೆ ಈ ಬಾರಿ ತಮ್ಮ ನಿಯಮವನ್ನು ತಾವೇ ಮುರಿದು ತೆಲುಗು ಸಿನಿಮಾ ಒಂದರಲ್ಲಿ ನಟಿಸುವ ತಯಾರಿ ನಡೆಸಿದ್ದಾರೆ ಪುನೀತ್.

ತೆಲುಗು ಸಿನಿಮಾವೊಂದರಲ್ಲಿ ಪುನೀತ್ ರಾಜ್‌ಕುಮಾರ್ ನಟಿಸುವ ಸಾಧ್ಯತೆ ಇದೆ, ಆದರೆ ಅದು ಕೇವಲ ಅತಿಥಿ ಪಾತ್ರವಷ್ಟೆ. ಹಿರಿಯ ಸ್ನೇಹಿತರ ಒತ್ತಾಯದ ಮೇಲೆ ಪ್ರೀತಿಪೂರ್ವಕವಾಗಿ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಪುನೀತ್ ರಾಜ್‌ಕುಮಾರ್.

Actor Puneeth Rajkumar To Play Guest Role In Balkrishnas Movie

ತೆಲುಗಿನ ಸೂಪರ್ ಸ್ಟಾರ್ ನಟ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲವು ತೆಲುಗು ವೆಬ್‌ವಾಹಿನಿಗಳು ವರದಿ ಮಾಡಿವೆ.

ಬೊಯಪೇಟಿ ಶ್ರೀನಿವಾಸ್ ನಿರ್ದೇಶನದ ಮಾಸ್ ಸಿನಿಮಾದಲ್ಲಿ ಬಾಲಕೃಷ್ಣ ನಟಿಸುತ್ತಿದ್ದು, ಅದೇ ಸಿನಿಮಾದಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಪುನೀತ್ ರಾಜ್‌ಕುಮಾರ್. ಸಿನಿಮಾದಲ್ಲಿ ಪವರ್‌ ಫುಲ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಬಾಲಕೃಷ್ಣ ಅಭಿನಯದ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುನೀತ್ ಅವರು ಸಹ ಬಾಲಕೃಷ್ಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜ್‌ಕುಮಾರ್ ಕುಟುಂಬದೊಂದಿಗೆ ಬಹು ಆತ್ಮೀಯ ಸಂಬಂಧವನ್ನು ಎನ್‌ಟಿಆರ್ ಕುಟುಂಬ ಮೊದಲಿನಿಂದಲೂ ಹೊಂದಿದೆ. ಈ ಹಿಂದೆ ಪುನೀತ್ ಅಭಿನಯದ ಸಿನಿಮಾಕ್ಕೆ ಟೈಟಲ್ ಹಾಡನ್ನು ಜೂ ಎನ್‌ಟಿಆರ್ ಹಾಡಿದ್ದರು.

More from Filmibeat

English summary
Actor Puneeth Rajkumar to play a guest role in Balkrishna's next movie in Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X