ಖಾಸಗಿ ಜೆಟ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮೈಸೂರಿಗೆ ಬಂದ ನಟ ರಾಮ್ ಚರಣ್

ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಬಳಿಕ ಉತ್ತರ ಭಾರತದಲ್ಲೂ ಫ್ಯಾನ್ ಬೇಸ್ ಹೆಚ್ಚಿಸಿಕೊಂಡಿರುವ ತೆಲುಗು ಚಿತ್ರರಂಗದ ಪ್ರಮುಖ ನಟ ರಾಮ್ ಚರಣ್ ಮೈಸೂರಿಗೆ ಬಂದಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿರುವ ಮಗಧೀರನ ಲುಕ್ ಸಕತ್ ಸ್ಟೈಲಿಶ್ ಆಗಿದ್ದು, ಅಭಿಮಾನಿಗಳು ಇದೊಂದು 'ಗೇಮ್ ಚೇಂಜರ್' ಎನ್ನುತ್ತಿದ್ದಾರೆ.

ಮೆಗಾ ಸ್ಟಾರ್ ಪುತ್ರ ರಾಮ್ ಚರಣ್ ಪ್ರಸ್ತುತ ತಮ್ಮ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಿನಿಮಾ ಶೂಟಿಂಗ್‌ಗಾಗಿ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ನೀಲಿ ಬನ್ಣದ ಶರ್ಟ್‌ನಲ್ಲಿ ಬಂದಿಳಿದ ಅವರ ಲುಕ್ ಹಲವರನ್ನು ಆಕರ್ಷಿಸಿದೆ.

actor-ram-charan-arrives-mysuru

ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'

ರಾಮ್ ಚರಣ್ ನಿರ್ದೇಶಕ ಎಸ್ ಶಂಕರ್ ಅವರ 'ಗೇಮ್ ಚೇಂಜರ್' ಚಿತ್ರದ ಮುಂದಿನ ಶೆಡ್ಯೂಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ನಟ ವರುಣ್ ತೇಜಾ ಕೊನಿಡಾಲ ಅವರ ಮದುವೆ ಮುಗಿಸಿದ ಖುಷಿಯಲ್ಲಿಯೇ ಸಿನಿಮಾ ಶೂಟಿಂಗ್‌ನಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ.

ಎಸ್ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಕ್ಕಾಗಿ ರಾಮ್ ಚರಣ್ ಖಾಸಗಿ ಜೆಟ್ ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಖಾಸಗಿ ಜೆಟ್‌ನಿಂದ ಇಳಿದ ರಾಮ್ ಚರಣ್ ಅವರ ವೀಡಿಯೊ ಮತ್ತು ಕೆಲವು ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ನವೆಂಬರ್ 22 ರಂದು ರಾಮ್ ಚರಣ್ ಮೈಸೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಪ್ಯಾಂಟ್ ಜೊತೆಗೆ ನೀಲಿ ಶರ್ಟ್ ಮ್ಯಾಚ್ ಮಾಡಿದ್ದರು. ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಚಿತ್ರತಂಡ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅವರ ಜೊತೆಗೆ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.

actor-ram-charan-arrives-mysuru

ನಿರ್ದೇಶಕ ರಾಜಮೌಳಿಯವರ 'RRR' ನಂತರ 'ಗೇಮ್ ಚೇಂಜರ್' ಸಿನಿಮಾ ರಾಮ್ ಚರಣ್ ಅವರ ಹೈ ಬಜೆಟ್ ಚಿತ್ರವಾಗಿದೆ. ವರದಿಗಳ ಪ್ರಕಾರ ಚಿತ್ರವು 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಾಮ್ ಚರಣ್ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಕೆಲಸದಿಂದ ಕೆಲಸ ಕಾಲ ವಿರಾಮ ತೆಗೆದುಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ಇಟಲಿಯ ಟಸ್ಕನಿಯಲ್ಲಿ ನಡೆದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹದಲ್ಲಿ ಭಾಗವಹಿಸಿದ್ದರು.

ಗೇಮ್ ಚೇಂಜರ್ ಸಿನಿಮಾ ಬಗ್ಗೆ

ಎಸ್ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಪೊಲೀಟಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದು, ಶಂಕರ್ ಚಿತ್ರಕಥೆ ಬರೆದಿದ್ದಾರೆ. ನಟಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್, ಸುನೀಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸಿರ್ ಸೇರಿ ದೊಡ್ಡ ನಟ ನಟಿಯರ ಬಳಗವೆ ಸಿನಿಮಾದಲ್ಲಿದೆ.

ಚಿತ್ರಕ್ಕೆ ದಿಲ್ ರಾಜು ಅವರು ತಮ್ಮ ಬ್ಯಾನರ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಥಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಚಿತ್ರದ ಮೊದಲ ಹಾಡು 'ಜಾರುಗಂಡಿ' ದೀಪಾವಳಿಯಂದು (ನವೆಂಬರ್ 12) ಬಿಡುಗಡೆಯಾಗಬೇಕಿತ್ತು. ಆದರೆ, ಆಡಿಯೋ ದಾಖಲಾತಿ ಸಮಸ್ಯೆಯಿಂದಾಗಿ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ.

More from Filmibeat

English summary
Game Changer: Actor Ram Charan arrives Mysuru in a private jet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X