ಮೆಗಾ ಕುಟುಂಬದ ಬಿರಿಯಾನಿಗೆ ಮನಸೋತ ಬಾಲಿವುಡ್ ಸ್ಟಾರ್ಸ್!
ಸಿನಿಮಾ ತಾರೆಯರಲ್ಲಿ ತೆರೆ ಹಿಂದೆ ವಿಶೇಷವಾದ ಬಾಂಧವ್ಯ ಇರುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸ್ಟಾರ್‌ಗಳೊಂದಿಗೆ ಬಾಲಿವುಡ್ ನಟರು ವಿಶೇಷ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಬಾಲಿವುಡ್ ನಟರು, ಬಾಲಿವುಡ್ ಚಿತ್ರಗಳಲ್ಲಿ ಸೌತ್ ಕಲಾವಿದರು ಅಭಿನನಯಿಸುದು ಸಾಮಾನ್ಯಾ ಆಗಿ ಬಿಟ್ಟಿದೆ.
ಕನ್ನಡದ ಕೆಜಿಎಫ್ ಚಿತ್ರದಲ್ಲಿ ಸಂಜಯ್ ದತ್, ಆರ್‌ಆರ್‌ಆರ್ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರ ಕೊಂಡ, ಪೂಜಾ ಹೆಗ್ಡೆ ಹೀಗೆ ಹಲವು ಸೌತ್ ಕಲಾವಿದರು ಬಾಲಿವುಡ್‌ನಲ್ಲಿ, ಬಾಲಿವುಡ್ ಕಲಾವಿದರು ಸೌತ್ ಚಿತ್ರರಂಗದಲ್ಲಿ ಅಭಿನಯಿಸುವುದು, ಸಿನಿಮಾಗಳನ್ನು ರಿಮೇಕ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ.
ಅಷ್ಟಕ್ಕೂ ಈಗ ಸಿನಿಮಾ ತಾರೆಯರ ನಂಟಿನ ಬಗ್ಗೆ ಮಾತನಾಡೋಕೆ ಕಾರಣ ತೆಲುಗು ಮೆಗಾ ಕುಟುಂಬದ ಬಿರಿಯಾನಿ. ಬಾಲಿವುಡ್ ಸ್ಟಾರ್ ನಟರು ಚಿರು ಮನೆ ಬಿರಿಯಾನಿಗೆ ಫಿದಾ ಆಗಿದ್ದಾರೆ.

ರಣ್ವೀರ್ ಸಿಂಗ್‌ಗೆ ಬಿರಿಯಾನಿ ಟ್ರೀಟ್ ಕೊಟ್ಟ ರಾಮ್‌ಚರಣ್!
ನಟ ರಣ್ವೀರ್ ಸಿಂಗ್‌ಗೆ ರಾಮ್ ಚರಣ್ ತೇಜಾ ಬಿರಿಯಾನಿ ಟ್ರೀಟ್ ಕೊಟ್ಟಿದ್ದಾರೆ. ಹೈದ್ರಾಬಾದ್ ಬಿರಿಯಾನಿ ತಿಂದು ಬಾಲಿವುಡ್ ನಟ ರಣ್ವೀರ್ ವಾಹ್ ಎಂದಿದ್ದಾರಂತೆ. ಸದ್ಯ ಜಾಹೀರಾತು ಚಿತ್ರೀಕರಣಕ್ಕಾಗಿ ರಾಮ್ ಚರಣ್ ರಣ್ವೀರ್ ಸಿಂಗ್ ಹೈದ್ರಾಬಾದ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮ್ ಚರಣ್ ಮನೆಯಿಂದ ರಣ್ವೀರ್ ಸಿಂಗ್‌ಗೆ ಬಿರಿಯಾನಿ ಮಾಡಿ ಕಳಿಸಲಾಗಿದೆ. ಮೆಗಾ ಮನೆಯ ಹೈದ್ರಾಬಾದ್ ಬಿರಿಯಾನಿ ತಿಂದು ರಣ್ವೀರ್ ಸಿಂಗ್ ದಿಲ್ ಖುಷ್ ಆಗಿದ್ದಾರಂತೆ.

ಸಲ್ಮಾನ್ ಖಾನ್‌ಗೂ ಬಿರಿಯಾನಿ ಬಡಿಸಿದ್ದ ರಾಮಚರಣ್!
ಇನ್ನು ನಟ ರಾಮ್ ಚರಣ್ ಸಲ್ಮಾನ್ ಖಾನ್‌ಗೂ ಬಿರಿಯಾನಿ ಕಳಿಸುತ್ತಿದ್ದರು. ಸಲ್ಮಾನ್ ಖಾನ್‌ಗೆ ಮೆಗಾ ಮನೆಯ ಬಿರಿಯಾನಿ ಅಂದರೆ ಅಚ್ಚು ಮೆಚ್ಚು. ಹಾಗಾಗಿ ಸಲ್ಮಾನ್ ಖಾನ್ ಹೈದ್ರಾಬಾದ್‌ಗೆ ಚಿತ್ರಿಕರನಕ್ಕೆ ಬಂದರೆ ರಾಮ್‌ಚರಣ್ ಮನೆಯಿಂದಲೇ ಬಿರಿಯಾಗಿ ಬಾಕ್ಸ್ ಹೋಗುತ್ತದೆ. ಪ್ರತೀ ಬಾರಿ ಹೈದ್ರಾಬಾದ್‌ಗೆ ಬಂದಾಗೆಲ್ಲಾ ಸಲ್ಲು ಮೆಗಾ ಮನೆಯ ಬಿರಿಯಾನಿ ಸವಿಯುವುದನ್ನು ಮಿಸ್ ಮಾಡುವುದಿಲ್ಲ ಅಂತೆ.

ಒಂದೇ ಚಿತ್ರದಲ್ಲಿ ರಾಮ್‌ಚರಣ್ ಮತ್ತು ರಣ್ವೀರ್ ಸಿಂಗ್!
ಬಿರಿಯಾನಿ ನಂಟು ಮಾತ್ರವಲ್ಲ. ರಾಮ್‌ಚರಣ್ ಮತ್ತು ರಣ್ವೀರ್ ಸಿಂಗ್ ಇಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಾ ಇದ್ದಾರೆ. ರಾಮ್ ಚರಣ್ ಅಭಿನಯದ 15ನೇ ಚಿತ್ರದಲ್ಲಿ ರಣ್ವೀರ್ ಸಿಂಗ್ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತಕ್ಕಾಗಿ ಈ ಹಿಂದೆಯೇ ಒಮ್ಮೆ ಹೈದ್ರಾಬಾದ್‌ಗೆ ಭೇಟಿ ಕೊಟ್ಟಿದ್ದರು ರಣ್ವೀರ್ ಸಿಂಗ್. ಈ ಚಿತ್ರವನ್ನು ನಿರ್ದೇಶಕ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಪಾತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.

RRR ರಿಲೀಸ್‌ಗಾಗಿ ಕಾಯುತ್ತಿರುವ ರಾಮ್‌ಚರಣ್!
ಸದ್ಯ ರಾಮ್‌ಚರಣ್ ಆರ್‌ಆರ್‌ಆರ್ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಜನವರಿ 7ರಂದು ವಿಶ್ವಾದ್ಯಾಂತ ಆರ್‌ಆರ್‌ಆರ್ ರಿಲೀಸ್ ಆಗುತ್ತಿದೆ. ಅತ್ತ ರಣ್ವೀರ್ ಸಿಂಗ್ '83' ಚಿತ್ರದ ರಿಲೀಸ್‌ಗಾಗಿ ಕಾಯುತ್ತಲಿದ್ದಾರೆ.


Click it and Unblock the Notifications











