ಪ್ರಭಾಸ್ ಮದುವೆ ಆಗುವ ಹುಡುಗಿ ಯಾರು? ಸೀಕ್ರೆಟ್ ಲೀಕ್ ಮಾಡಿದ ರಾಮ್‌ಚರಣ್?

ತೆಲುಗು ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಮೋಸ್ಟ್ ಎಲಿಜಬಲ್ ಬ್ಯಾಚುಲರ್. ಯಂಗ್ ರೆಬಲ್ ಸ್ಟಾರ್ ಮದುವೆ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಅನುಷ್ಕಾ ಶೆಟ್ಟಿ, ಕೃತಿ ಸನೂನ್ ಸೇರಿದಂತೆ ಕೆಲ ನಟಿಯರ ಜೊತೆ ಹೆಸರು ತಳುಕು ಹಾಕಿಕೊಂಡಿದ್ದು ಇದೆ. ಆದರೆ ಯಾವುದು ನಿಜವಾಗಲಿಲ್ಲ.

ಮದುವೆ ವಿಚಾರ ಬಂದಾಗಲೆಲ್ಲಾ ಪ್ರಭಾಸ್ ಉತ್ತರಿಸದೇ ನುಣುಚಿಕೊಳ್ಳುತ್ತಾರೆ. ದೊಡ್ಡಮ್ಮ ಮಾತ್ರ ಆದಷ್ಟು ಬೇಗ ಮಗನ ಮದುವೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಸದ್ಯ ನಾಲ್ಕೈದು ಚಿತ್ರಗಳಿಗೆ ಪ್ರಭಾಸ್ ಕಮೀಟ್ ಆಗಿದ್ದಾರೆ. ಎಲ್ಲವೂ ನೂರಾರು ಕೋಟಿ ಬಜೆಟ್ಟಿನ ಪ್ಯಾನ್ ಇಂಡಿಯಾ ಸಿನಿಮಾಗಳೇ. ಇದೆಲ್ಲದರ ನಡುವೆ ಅವರ ಮದುವೆ ವಿಚಾರವನ್ನು ಅಭಿಮಾನಿಗಳು ಮರೆತುಬಿಟ್ಟಿದ್ದಾರೆ.

Actor Ramcharan interesting comments on friend Prabhas marriage

ಪ್ರಭಾಸ್‌ಗೆ ಮದುವೆ ಮಾಡಲು ದೊಡ್ಡಪ್ಪ ಕೃಷ್ಣಂರಾಜು ಬಹಳ ಪ್ರಯತ್ನ ಮಾಡಿದ್ದರು. ಆದರೆ ಆಗ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿ ಆಗಿಬಿಟ್ಟಿದ್ದರು. ಒಂದಷ್ಟು ಸಂಬಂಧಗಳನ್ನು ನೋಡಿದ್ದಾಗಿಯೂ ಕೃಷ್ಣಂರಾಜು ಹೇಳಿದ್ದರು. ಅವರ ಅಗಲಿಕೆ ಬಳಿಕ ಮತ್ತೆ ಆ ವಿಚಾರ ತಣ್ಣಗಾಗಿತ್ತು. ಸದ್ಯ ಪ್ರಭಾಸ್ ಮದುವೆ ಬಗ್ಗೆ ರಾಮ್‌ಚರಣ್ ಮಾತನಾಡಿದ್ದಾರೆ ಎನ್ನಲಾಗ್ತಿದೆ.

ವಿಷ್ಣು- ಪ್ರೇಮಾ ಜೋಡಿಯ 'ಪರ್ವ' ಚಿತ್ರದ ಬಜೆಟ್ ಎಷ್ಟು? ಕಲೆಕ್ಷನ್ ಎಷ್ಟಾಗಿತ್ತು?

ತೆಲುಗಿನ 'ಅನ್‌ಸ್ಟಾಪಬಲ್' ಶೋನಲ್ಲಿ ರಾಮ್‌ಚರಣ್ ಅತಿಥಿಯಾಗಿ ಬಂದಿದ್ದಾರೆ. ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಶೋ ಪ್ರಸಾರವಾಗುತ್ತದೆ. ಈ ಶೋನ 2ನೇ ಎಪಿಸೋಡ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ. ಅದರಲ್ಲಿ ಪ್ರಭಾಸ್ ಮದುವೆ ವಿಚಾರ ಪ್ರಸ್ತಾಪ ಆಗಿದೆ ಎನ್ನಲಾಗ್ತಿದೆ. ರಾಮ್‌ಚರಣ್ ಹಾಗೂ ಪ್ರಭಾಸ್ ಆತ್ಮೀಯ ಸ್ನೇಹಿತರು. ಆಗಾಗಿ ಸ್ನೇಹಿತನ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.

ನಟ ಬಾಲಕೃಷ್ಣ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ. ಶೋನಲ್ಲಿ ಪ್ರಭಾಸ್‌ಗೆ ಕರೆ ಮಾಡಿ ಬಾಲಕೃಷ್ಣ ಮಾತನಾಡಿಸಿದ್ದಾರೆ. ಅದನ್ನು ಈಗಾಗಲೇ ಮೊದಲ ಎಪಿಸೋಡ್‌ನಲ್ಲಿ ನೋಡಬಹುದು. ಅದರ ಮುಂದುವರೆದ ಭಾಗವಾಗಿ ಪ್ರಭಾಸ್ ಮದುವೆ ವಿಚಾರ ಬಂದಿದೆ ಎನ್ನಲಾಗ್ತಿದೆ.

Actor Ramcharan interesting comments on friend Prabhas marriage

ಪ್ರಭಾಸ್ ಬಳಿ ರಾಮ್‌ಚರಣ್ ಮದುವೆ ಪ್ರಶ್ನೆಯನ್ನು ಬಾಲಕೃಷ್ಣ ಇಟ್ಟಿದ್ದಾರೆ. ಆ ಹುಡುಗಿ ಯಾರು ಎಂದು ಕೇಳಿದ್ದಾರೆ. ಈ ವೇಳೆ ಮಾತನಾಡಿರುವ ರಾಮ್‌ಚರಣ್ "ಹುಡುಗಿ ಯಾರೋ ಅಲ್ಲ, ಪ್ರಭಾಸ್ ಅಪ್ಪಟ ತೆಲುಗು ಹುಡುಗಿಯನ್ನು ಮದುವೆ ಆಗುತ್ತಾನೆ. ಪಶ್ಚಿಮ ಗೋದಾವರಿಯ ಗಣಪವರದ ಊರಿನ ಹುಡುಗಿ" ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.

ರಾಮ್‌ಚರಣ್ ತಮಾಷೆಯಾಗಿ ಪ್ರಭಾಸ್ ಮದುವೆ ಆಗುವ ಹುಡುಗಿ ಬಗ್ಗೆ ಹೇಳಿದ್ರಾ? ಅಥವಾ ಅವರ ಮಾತುಗಳು ನಿಜನಾ? ಕಾದು ನೋಡಬೇಕಿದೆ. ಅಷ್ಟಕ್ಕೂ ರಾಮ್‌ಚರಣ್ ಏನು ಹೇಳಿದ್ದಾರೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ. ಒಟ್ಟಾರೆ ಈ ಸುದ್ದಿ ಕೇಳಿ ಡಾರ್ಲಿಂಗ್ ಫ್ಯಾನ್ಸ್ ಖುಷಿಯಾಗಿದ್ದಾರೆ.

ಸದ್ಯ ರಾಮ್‌ಚರಣ್ ನಟನೆಯ 'ಗೇಮ್‌ ಚೇಂಜರ್' ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಮೊದಲ ದಿನ ಸಿನಿಮಾ 186 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಗೆಲ್ಲುವ ಲೆಕ್ಕಾಚಾರ ನಡೀತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿಯೇ 'ಅನ್‌ಸ್ಟಾಪಬಲ್' ಶೋನಲ್ಲಿ ಮೆಗಾ ಪವರ್ ಸ್ಟಾರ್ ಭಾಗಿ ಆಗಿದ್ದಾರೆ.

ನಟ ಪ್ರಭಾಸ್ ಕೂಡ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಜೊತೆ 3 ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ. ಸದ್ಯ 'ರಾಜಾಸಾಬ್' ಸಿನಿಮಾ ಬಿಡುಗಡೆ ಆಗಬೇಕಿದೆ. ಏಪ್ರಿಲ್ 10ಕ್ಕೆ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಇನ್ನುಳಿದಂತೆ 'ಫೌಜಿ' ಚಿತ್ರೀಕರಣ ಭರದಿಂದ ಸಾಗುತ್ತಿದೆ.

'ಸ್ಪಿರಿಟ್' ಎನ್ನುವ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್-2' ಕೂಡ ಬರಬೇಕಿದೆ. ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಎಂದು ಸಾಕಷ್ಟು ಬಾರಿ ಊಹಾಪೋಹ ಶುರುವಾಗಿತ್ತು. ಅಭಿಮಾನಿಗಳು ಕೂಡ ಇಬ್ಬರು ಮದುವೆ ಆಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಇಬ್ಬರೂ ಹೇಳುತ್ತಾ ಬರ್ತಿದ್ದಾರೆ.

More from Filmibeat

English summary
Is Prabhas Getting Married Soon? Ramchran Dropped A Big Hint in unstoppable show;
Read more about: tollywood prabhas ramcharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X