ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾದಲ್ಲಿ ನಟ ರವಿತೇಜ

ಮೆಗಾಸ್ಟಾರ್ ಚಿರಂಜೀವಿ ಬಳಿ ಸದ್ಯ ಅನೇಕ ಸಿನಿಮಾಗಳಿವೆ. ಆಚಾರ್ಯ ಸಿನಿಮಾ ಮುಗಿಸಿರುವ ಚಿರಂಜೀವಿ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳು ಸಿನಿಮಾದ ರಿಮೇಕ್ ನಲ್ಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ಇನ್ನು ಹೆಸರಿಡದ ಮತ್ತೊಂದು ಸಿನಿಮಾ ಚಿರಂಜೀವಿ ಕೈಯಲ್ಲಿದೆ. ಈ ಸಿನಿಮಾಗೆ ಕೆಎಸ್ ರವೀಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಕಳೆದ ತಿಂಗಳು ಚಿರಂಜೀವಿ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿತ್ತು.

ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಈಗಾಗಲೇ ಚಿತ್ರೀಕರಣಕ್ಕೆ ಸಜ್ಜಾಗಿದೆ ಸಿನಿಮಾತಂಡ. ಇದೀಗ ಚಿರಂಜೀವಿ ಹೊಸ ಸಿನಿಮಾದ ಬಗ್ಗೆ ಮತ್ತೊಂದು ಭರ್ಜರಿ ಸುದ್ದಿ ಕೇಳಿಬರುತ್ತಿದೆ. ಚಿರಂಜೀವಿ ಹೊಸ ಚಿತ್ರದಲ್ಲಿ ತೆಲುಗಿನ ಮತ್ತೋರ್ವ ಸ್ಟಾರ್ ನಟ ರವಿತೇಜಾ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ನಟ ರವಿತೇಜಾ ಜೊತೆ ಮಾತುಕತೆ ನಡೆಸಿದ್ದು, ಚಿರಂಜೀವಿ ಜೊತೆ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ ರವಿತೇಜಾ ಈಗಾಗಲೇ ಚಿರಂಜೀವಿ ಜೊತೆ ನಟಿಸಿದ್ದಾರೆ. ಅಣ್ಣಯ್ಯ ಸಿನಿಮಾದಲ್ಲಿ ರವಿತೇಜಾ ಮತ್ತು ಚಿರಂಜೀವಿ ಒಟ್ಟಿಗೆ ನಟಿಸಿದ್ದರು. ಬಳಿಕ ಚಿರಂಜೀವಿ ನಟನೆಯ ಶಂಕರ್ ದಾದಾ ಜಿಂದಾಬಾದ್ ಸಿನಿಮಾದಲ್ಲೂ ರವಿತೇಜಾ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೂರನೇ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ ಚಿರಂಜೀವಿ ಮತ್ತು ರವಿತೇಜಾ.

Actor Ravi Teja act with Chiranjeevis next movie

ಅಂದಹಾಗೆ ಈ ಸಿನಿಮಾ ಮೈತ್ರಿ ಮೂವಿಸ್‌ನಲ್ಲಿ ಮೂಡಿಬರುತ್ತಿದೆ. ರವಿತೇಜ ಚಿತ್ರಕ್ಕೆ ಸಹಿ ಹಾಕಿದ ಬಳಿಕ ಅಧಿಕೃತವಾಗಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಇನ್ನು ನಟ ರವಿತೇಜಾ ಖಿಲಾಡಿ ಮತ್ತು ರಾಮರಾವ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾದ ಬಳಿಕ ಚಿರಂಜೀವಿ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

More from Filmibeat

English summary
Telugu Actor Ravi Teja act with Chiranjeevi's next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X