ಮನೆಗೆ ಮರಳಿದ ಸಾಯಿ ಧರಮ್ ತೇಜ್: ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ
ಕಳೆದ 35 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಾಯಿಧರಮ್ ತೇಜ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಸಾಯಿಧರಮ್ ತೇಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ವಿಷಯವನ್ನು ಅವರ ಸೋದರ ಮಾವ, ಮೆಗಾಸ್ಟಾರ್ ಸ್ವತಃ ಚಿರಂಜೀವಿ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.
ಸ್ವತಃ ಚಿರಂಜೀವಿ ಟ್ವೀಟ್ ಮಾಡಿ ಅಭಿಮಾನಿಗಳೊಂದಿಗೆ ಈ ಗುಡ್ ನ್ಯೂಸ್ ಹಂಚಿಕೊಂಡಿರುವ ಅವರು ಇದೇ ಸಂದರ್ಭದಲ್ಲಿ 'ಇಂದು ಸಾಯಿಧರಮ್ ತೇಜ್ ಅವರ ಜನ್ಮದಿನವಾಗಿದ್ದು, ಅವನು ಇದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದು. ಈ ಶುಭಸಂದರ್ಭದಲ್ಲಿ ನಾವೆಲ್ಲ ಒಟ್ಟಿಗೆ ಸೇರಿ ಅವನೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಸಾಯಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಚಿರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ವಿಜಯ ದಶಮಿಯಂದು ಸಾಯಿಧರಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಮತ್ತು ಮತ್ತು ಸಂಪೂರ್ಣ ಆರೋಗ್ಯದಿಂದ ಮರಳಿ ಬಂದಿರುವುದಕ್ಕೆ ಇಡಿ ಮೆಗಾ ಕುಟುಂಬ ಸಂತಸವನ್ನು ವ್ಯಕ್ತಪಡಿಸಿದೆ. ಅಲ್ಲದೆ ಇಂದು ಸಾಯಿ ಜನ್ಮದಿನ ಜೊತೆಗೆ ವಿಜಯದಶಮಿಯ ಹಬ್ಬ ಎರಡರ ಸಂಭ್ರಮ ಕುಟುಂಬದಲ್ಲಿ ಮನೆಮಾಡಿದೆ. ಕುಟುಂಬದ ಸದಸ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಜೊತೆಗೆ ಟಾಲಿವುಡ್ ಮಂದಿ ಸಂಪೂರ್ಣವಾಗಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ಸಾಯಿಗೆ ಜನ್ಮದಿನದ ಶುಭಾಶಯಗಳು ತಿಳಿಸುತ್ತಾ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ದೊಡ್ಡ ಅಪಘಾತದಿಂದ ಬದುಕುಳಿದ ತೇಜಿಗೆ ಮರುಹುಟ್ಟು ಸಿಕ್ಕಿದೆ ಎಂದು ಅವರೆಲ್ಲ ಅಭಿಪ್ರಾಯಪಡುತ್ತಿದ್ದಾರೆ.

ಇನ್ನು ರಾಮ್ ಚರಣ್ ತೇಜ ಕೂಡ ಟ್ವೀಟ್ ಮಾಡಿ 'ಡಾರ್ಲಿಂಗ್ ಬ್ರದರ್ ಹ್ಯಾಪಿ ಬರ್ತಡೇ ನಿನ್ನೊಂದಿಗೆ ಕುಣಿಯಲು ಎದುರುನೋಡುತ್ತಿದ್ದೇನೆ' ಅಂತ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಅಲ್ಲು ಅರ್ಜುನ್ ಕೂಡ ತೇಜ್ ಗೆ ವಿಶ್ ಮಾಡಿ ಟ್ವೀಟ್ ಮಾಡಿ 'ಮುಂದಿನ ದಿನಗಳಲ್ಲಿ ಶುಭವಾಗಲಿ. ಮತ್ತೆ ಸಿನಿಮಾದಲ್ಲಿ ಸಕ್ರಿಯನಾಗಿ ಎಲ್ಲರ ಹೃದಯ ನೀನು ಗೆಲ್ಲುವಂತ ಆಗಲಿ' ಎಂದು ಎಂದು ಹಾರೈಸಿದ್ದಾರೆ.
ವಿನಾಯಕ ಚತುರ್ಥಿ ದಿನ ಬೈಕ್ ನಲ್ಲಿ ಹೋಗುತ್ತಿದ್ದ ಸಾಯಿಧರಮ್ ತೇಜ್ ಆಕಸ್ಮಿಕವಾಗಿ ಜಾರಿಬಿದ್ದರು. ಅಪಘಾತದಲ್ಲಿ ತೇಜ್ ಗಂಭೀರವಾಗಿ ಗಾಯಗೊಂಡರು. ಮುರಿದ ಕಾಲರ್ ಮೂಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. 'ಅಪಘಾತದ ತೀವ್ರತೆಯಿಂದಾಗಿ ಸಾಯಿಧರಮ್ ತೇಜ್ ಕೋಮಾಕ್ಕೆ ಹೋಗಿದ್ದಾರೆ' ಎಂದು ಸ್ವತಃ ಪವನ್ ಪವನ್ ಕಲ್ಯಾಣ್ ಹೇಳಿದರು. ಕೆಲದಿನಗಳ ಕಾಲ ಕೋಮಾಗೆ ಜಾರಿದ್ದ ನಿಧಾನವಾಗಿ ಚೇತರಿಸಿಕೊಂಡು 35 ದಿನಗಳ ಕಾಲ ಚಿಕಿತ್ಸೆ ಪಡೆದವರೇ ಪೂರ್ಣವಾಗಿ ಗುಣಮುಖರಾಗಿರುವ ಸಾಯಿಧರಮ್ ತೇಜ್ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ. ವಿನಾಯಕ ಚತುರ್ಥಿ ಹಬ್ಬದ ದಿನ ಅಪಘಾತದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಸಾಯಿಧರಂ ತೇಜ್ ವಿಜಯದಶಮಿ ದಿನದಂದು ಮನೆಗೆ ತಲುಪಿದ್ದಾರೆ.
'ಆ ಕುಟುಂಬದ ಮೇಲೆ ದೈವಾನುಗ್ರಹವಿದೆ ಹೀಗಾಗಿಯೇ ಕೋಮವರೆಗೂ ಹೋಗಿದ್ದ ಸಾಯಿಧರಮ್ ಇಂದು ಅದು ಅವನ ಹುಟ್ಟಿದ ಹಬ್ಬದ ದಿನ ಜೊತೆಗೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಪೂರ್ಣವಾಗಿ ಗುಣಮುಖನಾಗಿ ಹೊರ ಬಂದಿದ್ದಾನೆ' ಅಂತ ಮೆಗಾ ಕುಟುಂಬದ ಅಭಿಮಾನಿಯೊಬ್ಬ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ.


Click it and Unblock the Notifications











