'ಅಮೃತ ವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ: ತೀವ್ರ ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ನಿಧನ

ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು ಇಂದು (ಮೇ 22) ನಿಧನರಾಗಿದ್ದಾರೆ. ಬಹಳ ದಿನಗಳಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶರತ್ ಬಾಬು ಕೊನೆಯುಸಿರೆಳೆದಿದ್ದಾರೆ.

71 ವರ್ಷದ ಹಿರಿಯ ನಟ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅವರ ಸ್ಥಿತಿ ಗಂಭೀರ ಎಂದೇ ಹೇಳಲಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

Actor Sarath Babu passes Away at the age of 71 in Hyderabad

ಶರತ್ ಬಾಬು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಆ ಬಳಿಕ ಮತ್ತೆ ಎರಡನೇ ಬಾರಿ ಆರೋಗ್ಯ ಸಮಸ್ಯೆ ಎದುರಾದಾಗ, ಹೈದರಾಬಾದ್‌ನ ಗಚ್ಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿಂದಲೂ ಶರತ್ ಬಾಬು ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇತ್ತು. ಕೆಲ ದಿನಗಳ ಹಿಂದೆ ಶರತ್ ಬಾಬು ಇನ್ನಿಲ್ಲ ಎನ್ನವ ಸುದ್ದಿ ವೈರಲ್ ಆಗಿತ್ತು. ಕುಟುಂಬ ಸದಸ್ಯರು ಅದೆಲ್ಲ ಸುಳ್ಳು, ಅವರು ಆರೋಗ್ಯವಾಗಿದ್ದಾರೆ ಎಂದಿದ್ದರು.

ಶರತ್ ಬಾಬು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ರಮೇಶ್ ಅರವಿಂದ್, ಸುಹಾಸಿನಿ ನಟಿಸಿದ್ದ 'ಅಮೃತ ವರ್ಷಿಣಿ' ಸಿನಿಮಾದಲ್ಲಿ ಹೇಮಂತ್ ಪಾತ್ರದಲ್ಲಿ ಶರತ್ ಬಾಬು ನಟಿಸಿ ಸಿನಿರಸಿಕರ ಮನಗೆದ್ದಿದ್ದರು.

More from Filmibeat

English summary
Actor Sarath Babu passes Away at the age of 71 in hyderabad, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X