ಒಂದೇ ವೇದಿಕೆಯಲ್ಲಿ ಅಲ್ಲು ಅರ್ಜುನ್, ಪ್ರಭಾಸ್, ಚಿರಂಜೀವಿ, ಶಾಹಿದ್ ಕಪೂರ್!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಚಿತ್ರ ಪುಷ್ಪ ರಿಲೀಸ್‌ಗೆ ರೆಡಿ ಆಗಿದೆ. ಡಿಸೆಂಬರ್ 17 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಪುಷ್ಪ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್, ಪೋಸ್ಟರ್‌ಗಳು ವೈರಲ್ ಆಗಿವೆ.
ಈ ಚಿತ್ರ ತಂಡ ಪ್ರಚಾರದ ಮತ್ತೊಂದು ಹಂತ ತಲುಪಿದೆ. ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಚಿತ್ರ ತಂಡ ಯೋಜನೆ ರೂಪಿಸುತ್ತಿದೆ.
ಸದ್ಯ ಟಾಲಿವುಡ್ ಅಂಗಳದಲ್ಲಿ ಪುಷ್ಪ ಚಿತ್ರದ ಬಗ್ಗೆಯೇ ಸುದ್ದಿ ಹರಿದಾಡುತ್ತಿದೆ. ಈಗ ಚಿತ್ರ ಮತ್ತೊಂದು ದೊಡ್ಡ ಕಾರ್ಯಕ್ರಮ ಮಾಡಲು ಮುಂದಾಗಿದೆ. ಈ ವೇದಿಕೆಯಲ್ಲಿ ಚಿತ್ರರಂಗದ ಅತಿರಥ ಮಹಾರಥರು ಒಂದಾಗಲಿದ್ದಾರೆ.

ಹೇಗೆ ಇರಲಿದೆ ಪುಷ್ಪ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ?
ಕೊರೊನಾ ಬಳಿಕ ಚಿತ್ರರಂಗದಲ್ಲಿ ಹಲವು ಬದಲಾವಣೆಗಳು ಆಗಿವೆ. ಸ್ಟಾರ್ ನಟರ ಸಿನಿಮಾ, ದೊಡ್ಡ ಬಜೆಟ್ ಸಿನಿಮಾ ಅಂತೆಲ್ಲಾ ಸುಮ್ಮನೆ ಇರ ಹಾಗಿಲ್ಲ. ಪ್ರಚಾರ ಮಾಡಬೇಕಾಗಿರುವುದು ಪ್ರತಿಯೊಂದು ಚಿತ್ರಕ್ಕೆ ಅನಿವಾರ್ಯ. ಹಾಗಾಗಿ ದೊಡ್ಡ ದೊಡ್ಡ ಚಿತ್ರಗಳು ವಿಭಿನ್ನ ಪ್ರಚಾರದ ತಂತ್ರಕ್ಕೆ ಇಳಿದಿವೆ. ಸದ್ಯ ಟಾಲಿವುಡ್ ಚಿತ್ರಗಳು ಬಾಲಿವುಡ್ ಚಿತ್ರ ರಂಗದ ಸಹೋಗದೊಂದಿಗೆ ಸಿನಿಮಾ ಪ್ರಚಾರಕ್ಕೆ ಮುಂದಾಗಿವೆ.

ಅಲ್ಲು ಅರ್ಜುನ್ ಚಿತ್ರಕ್ಕೆ ಶಾಹಿದ್ ಕಪೂರ್ ಸಾಥ್!
ಆರ್‌ಆರ್‌ಆರ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಬರ್ತಿದ್ದಾರೆ. ಇತ್ತ ಪುಷ್ಪ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ನಟ ಶಾಹಿದ್ ಕಪೂರ್ ಆಗಮಿಸಲಿದ್ದಾರೆ. ನಟ ಶಾಹಿದ್ ಕಪೂರ್ ಮತ್ತು ಟಾಲಿವುಡ್ ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯ ಇದೆ. ತೆಲುಗಿನ ಅರ್ಜುನ್ ರೆಡ್ಡಿ, ಜೆರ್ಸಿ ಚಿತ್ರಗಳನ್ನು ಶಾಹಿದ್ ಕಪೂರ್ ಬಾಲಿವುಡ್‌ಗೆ ರಿಮೇಕ್ ಮಾಡಿದ್ದಾರೆ. ಇನ್ನೂ ತೆಲುಗಿನ ಸಾಕಷ್ಟು ಸ್ಟಾರ್ ನಟರು ಶಾಹಿದ್ ಕಪೂರ್ ಅವರಿಗೆ ಆಪ್ತರು. ಹಾಗಾಗಿ ಪುಷ್ಪ ಚಿತ್ರ ಕಾರ್ಯಕ್ರಮಕ್ಕೆ ಶಾಹಿದ್ ಕಪೂರ್ ಆಗಮಿಸುತ್ತಿದ್ದಾರೆ.

ಒಂದೇ ವೇದಿಕೆಯಲ್ಲಿ ಪ್ರಭಾಸ್, ಚಿರಂಜೀವಿ, ಅಲ್ಲು ಅರ್ಜುನ್!
ಹೈದ್ರಾಬಾದ್‌ನಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಶಾಹಿದ್ ಕಪೂರ್ ಜೊತೆಗೆ ಟಾಲಿವುಡ್‌ನ ಅನೇಕ ಕಲಾವಿದರು ಭಾಗಿ ಆಗಲಿದ್ದಾರೆ. ನಟ ಪ್ರಭಾಸ್, ಚಿರಂಜೀವಿ, ನಂದಮೂರಿ ಬಾಲಕೃಷ್ಣ ಅವರ ಹೆಸರುಗಳು ಕೂಡ ಕೇಳಿ ಬರುತ್ತಿವೆ. ಪ್ರಭಾಸ್ ಎಂಟ್ರಿಗೆ ಇನ್ನೂ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಎಲ್ಲಾ ಓಕೆ ಆದ್ರೆ ಪುಷ್ಪ ಪ್ರೀ ರಿಲೀಸ್ ಕಾರ್ಯಕ್ರಮ ವೇದಿಕೆಯಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ, ಶಾಹಿದ್ ಕಪೂರ್, ಪ್ರಭಾಸ್, ಚಿರಂಜೀವಿ, ಬಾಲಯ್ಯ ಅವರ ಸಮಾಗಮ ಆಗಲಿದೆ.

ಕರ್ನಾಟಕಕ್ಕೂ ಬರಲಿದೆ ಪುಷ್ಪ ಚಿತ್ರ ತಂಡ!
ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ. ಕನ್ನಡದಲ್ಲೂ ಪುಷ್ಪ ತೆರೆಗೆ ಬರುತ್ತಿದೆ. ಹಾಗಾಗಿ ಹೈದ್ರಾಬಾದ್ ನಂತರ ಮುಂಬೈ, ಚೆನ್ನೈ, ಕೊಚ್ಚಿ ಮತ್ತು ಕರ್ನಾಟಕದಲ್ಲೂ ಕೂಡ ಚಿತ್ರದ ಪ್ರಚಾರವನ್ನು ಕೈಗೊಳ್ಳಲಿದೆ ಚಿತ್ರ ತಂಡ ಎನ್ನುವ ಸುದ್ದು ಕೂಡ ಹರಿದಾಡುತ್ತಲಿದೆ. ಡಿಸೆಂಬರ್ 17 ಪುಷ್ಪ ತೆರೆಗೆ ಬರುತ್ತಿದೆ. ಪುಷ್ಪ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ವಿಶ್ವದಾದ್ಯಂತ ಪುಷ್ಪ ಸಿನಿಮಾ ನೋಡಲು ಅಭಿಮಾನಿಗಳು, ಸಿನಿ ಪ್ರೇಕ್ಷಕರು ಕಾತರರಾಗಿದ್ದಾರೆ.


Click it and Unblock the Notifications











