ಪ್ರೀತಿಸಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟ ಶರ್ವಾನಂದ್: ಪ್ರಭಾಸ್‌ಗೆ ನಂಬಿಕೆ ದ್ರೋಹ?
ತೆಲುಗು ಯುವ ನಟ ಶರ್ವಾನಂದ್ ಪ್ರೀತಿಸಿದ ಹುಡುಗಿ ಕೈ ಹಿಡಿಯಲು ಸಿದ್ಧರಾಗಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಗಣರಾಜ್ಯೋತ್ಸವ ಸಂಭ್ರಮದಲ್ಲೇ ರಕ್ಷಿತಾ ರೆಡ್ಡಿ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ರಾಮ್‌ಚರಣ್, ನಾಗಾರ್ಜುನಾ ದಂಪತಿ ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕೆ ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ.
ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ. ಸಾಫ್‌ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಎಂಗೇಜ್‌ಮೆಂಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೆಲ್ಲದರ ನಡುವೆ ಶರ್ವಾನಂದ್ ಎಂಗೇಜ್‌ಮೆಂಟ್ ಬಗ್ಗೆ ಸಾಕಷ್ಟು ಜೋಕ್ಸ್, ಮೀಮ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಪ್ರಭಾಸ್‌ಗೆ ಶರ್ವಾನಂದ್ ನಂಬಿಕೆ ದ್ರೋಹ ಮಾಡಿದ್ದಾರೆ ಎನ್ನು ಮೀಮ್ ಸಖತ್ ಸದ್ದು ಮಾಡ್ತಿದೆ.

ಕೆಲ ದಿನಗಳ ಹಿಂದೆ ಅನ್‌ಸ್ಟಾಪಬಲ್ ಟಾಕ್ ಶೋನಲ್ಲಿ ಶರ್ವಾನಂದ್ ಭಾಗಿ ಆಗಿದ್ದರು. ಶರ್ವಾನಂದ್ ಮದುವೆ ಯಾವಾಗ ಬಾಲಕೃಷ್ಣ ಕೇಳಿದ್ದಕ್ಕೆ ಪ್ರಭಾಸ್ ಮದುವೆ ನಂತರ ನನ್ನ ಮದುವೆ ಎಂದು ಹೇಳಿದ್ದರು. ಆದರೆ ಈಗ ಎಂಗೇಜ್‌ಮೆಂಟ್ ಮಾಡಿಕೊಂಡಿರುವುದು ಸರೀನಾ? ಇದು ನಂಬಿಕೆ ದ್ರೋಹ ಅಲ್ಲವೇ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. ನಿನ್ನೆ ತಾನೇ ಪ್ರಭಾಸ್ ಮದುವೆ ಆದಮೇಲೆ ಮದುವೆ ಆಗ್ತೀನಿ ಅಂತ ಹೇಳಿದ್ದೆ, ಈಗ ನೋಡಿದ್ರೆ, ನೀನು ಮಾಡ್ತಿರೋದು ಏನು? ಎಂದು ಪ್ರಭಾಸ್ ಫ್ಯಾನ್ಸ್ ಮೀಮ್ಸ್ ಕ್ರಿಯೇಟ್ ಮಾಡಿ ಶೇರ್ ಮಾಡುತ್ತಿದ್ದಾರೆ.

ಇನ್ನು ಬ್ಯಾಚುಲರ್ ಲಿಸ್ಟ್‌ನಿಂದ ಎಗ್ಜಿಟ್ ಆಗಿದ್ದೀಯಾ, ಪ್ರಭಾಸ್‌ಗೂ ಹೇಳು ಬೇಗ ಮದುವೆಆಗುವುದಕ್ಕೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಶರ್ವಾನಂದ್ ಹಾಗೂ ರಾಮ್‌ಚರಣ್ ಬಾಲ್ಯ ಸ್ನೇಹಿತರು. ಸ್ನೇಹಿತನ ಎಂಗೇಜ್‌ಮೆಂಟ್‌ಗೆ ಪತಿ ಸಮೇತರಾಗಿ ಚರಣ್ ಆಗಮಿಸಿದ್ದರು. ಇನ್ನು ಪ್ರಭಾಸ್ ಹಾಗೂ ಶರ್ವಾನಂದ್ ನಡುವೆ ಕೂಡ ಆತ್ಮೀಯ ಒಡನಾಟವಿದೆ. ಕಾಮನ್ ಫ್ರೆಂಡ್ ಮೂಲಕ ಶರ್ವಾನಂದ್‌ಗೆ ರಕ್ಷಿತಾ ರೆಡ್ಡಿ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿ ಅದು ಮುಂದೆ ಪ್ರೀತಿಯಾಗಿ ಮಾರ್ಪಟ್ಟಿತ್ತು. ಪೋಷಕರು ಒಪ್ಪಿಗೆ ನೀಡಿದ್ದರಿಂದ ಈಗ ಉಂಗುರ ಬದಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.


Click it and Unblock the Notifications











