"ನಟಿಯರು ಸಾ** ಕಾಣ್ಸೋ ತರ ಬಟ್ಟೆ ಹಾಕ್ಬೇಡಿ" ಎಂದ ನಟ; ಕ್ಷಮೆ ಕೇಳಿದ್ರು ಮುಗಿಯದ ವಿವಾದ
ನಟಿಯರ ವಸ್ತ್ರಧಾರಣೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ ಹೇಳಿಕೆ ಭಾರೀ ವಿವಾದ ಹುಟ್ಟಾಕ್ಕಿದೆ. ಇತ್ತೀಚೆಗೆ ತಮ್ಮದೇ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಟಿಯರು ತುಂಟು ಬಟ್ಟೆ, ಅಂಗಾಂಗ ಕಾಣುವಂತೆ ಬಟ್ಟೆ ಧರಿಸಿ ಓಡಾಡಬೇಕು. ಅದು ಸರಿಯಲ್ಲ ಎಂದು ಶಿವಾಜಿ ಹೇಳಿದ್ದರು. ಆದರೆ ಹೀಗೆ ಮಾತನಾಡುವಾಗ ಬಳಸಿದ 3 ಪದಗಳು ಈಗ ವಿವಾದದ ಕೇಂದ್ರಬಿಂದುವಾಗಿದೆ.
ನಟ ಶಿವಾಜಿ ವಿರುದ್ಧ ನಟಿ ಅನಸೂಯ, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಟ ಶಿವಾಜಿ ಪ್ರತಿಕ್ರಿಯಿಸಿ ತಾವು ಬಳಸಿದ ಆ ಎರಡು ಅವಹೇಳನಕಾರಿ ಪದಗಳ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದರೂ ನಾನು ಹೇಳಿದ್ದರಲ್ಲಿ ತಪ್ಪಿಲ್ಲ. ಹೇಳುವ ಭರದಲ್ಲಿ ಬಳಸಿದ 2 ಪದಗಳು ತಪ್ಪಾಗಿತ್ತು. ಅದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಆದರೆ ಅಷ್ಟಕ್ಕೆ ಇದನ್ನು ಬಿಡಲು ಕೆಲವರು ಸಿದ್ಧರಿಲ್ಲ.

ಈಗಾಗಲೇ ತೆಲಂಗಾಣ ಮಹಿಳಾ ಆರೋಗ ನಟ ಶಿವಾಜಿ ಹೇಳಿಕೆ ಬಗ್ಗೆ ಸುಮೊಟೊ ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಮಹಿಳಾ ಆಯೋಗದ 1998ರ ಸೆಕ್ಷನ್ 16(1) (b) ಪ್ರಕಾರ ವಿಚಾರಣೆ ನಡೀತಿದೆ. ಈಗಾಗಲೇ ನಟ ಶಿವಾಜಿಗೆ ನೋಟಿಸ್ ನೀಡಿ ಡಿಸೆಂಬರ್ 27ರಂದು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಈಗಾಗಲೇ ಸ್ಥಳಿಯ ಪೊಲೀಸ್ ಠಾಣೆಗೂ ಮಹಿಳಾ ಆಯೋಗ ಮಾಹಿತಿ ನೀಡಿದೆ.
ತೆಲುಗಿನ 'ದಂಡೋರ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಟ ಶಿವಾಜಿ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಏರಿ ಮಾತನಾಡುತ್ತಾ ""ಹೀರೊಯಿನ್ಸ್ ಹೀಗೆ ಕೆಟ್ಟದಾಗಿ ಬಟ್ಟೆ ಹಾಕಿಕೊಂಡು ಹೋದ್ರೆ ದರಿದ್ರ ಅನುಭವಿಸಬೇಕಾಗುತ್ತದೆ. ನಟಿಯರು ಯಾರು ನನ್ನ ಮಾತನ್ನು ಕೆಟ್ಟದಾಗಿ ಭಾವಿಸಬೇಡಿ. ನೀವು ಕೇಳಿದ್ರೂ ತಿರುಗೇಟು ಕೊಡ್ತೀನಿ. ನಿಮ್ಮ ಅಂದ ಸೀರೆಯಲ್ಲಿ, ಮೈತುಂಬಾ ತೊಡವ ಬಟ್ಟೆಯಲ್ಲಿರುತ್ತೆ. ಸಾ** ಕಾಣಿಸೋದ್ರಲ್ಲಿ ಏನೂ ಇರಲ್ಲ. ಇಂತಹ ಬಟ್ಟೆ ಹಾಕಿಕೊಂಡಾಗ ಕೆಲವರು ನಗುತ್ತಾ ಚೆನ್ನಾಗಿದೆ ಅನ್ನಬಹುದು. ಮನಸ್ಸಿನಲ್ಲಿ ಥೂ ಇಂದೆಂಥಾ ಬಟ್ಟೆ ಹಾಕ್ಕೊಂಡಿದ್ದೀಯಾ? ಚೆನ್ನಾಗಿರೋ ಬಟ್ಟೆ ಹಾಕಿಕೊಳ್ಳಬಹುದಲ್ವಾ, ಅಂತ ಹೇಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ತಾರೆ, ಆದ್ರೆ ಹೇಳೋಕ್ಕಾಗಲ್ಲ" ಎಂದಿದ್ದರು.
ಅಂದಹಾಗೆ ನಟ ಶಿವಾಜಿ ಹೇಳಿಕೆಗೆ ಕೆಲ ಸೆಲೆಬ್ರೆಟಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಕೆಲವರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟಿ ಅನಸೂಯ ಅಸಮಾಧಾನ ವ್ಯಕ್ತಪಡಿಸಿ ತಿರುಗೇಟು ನೀಡಿದ್ದಾರೆ. "ಮಹಿಳೆಯ ಡ್ರೆಸ್ಸಿಂಗ್ ಅವಳ ವೈಯಕ್ತಿಕ ಆಯ್ಕೆ. ಅದು ಯಾರನ್ನೂ ಗುರಿಯಾಗಿಸಿಕೊಂಡು ಇರಲ್ಲ. ಅದು ಯಾರಿಗೂ ಹಾನಿ ಮಾಡಲ್ಲ. ವಾಸ್ತವವಾಗಿ, ಚಿಂತಿಸಬೇಕಾದದ್ದು ಏನೆಂದರೆ ಮತ್ತೊಬ್ಬರ ಬಗ್ಗೆ ಮಾಡುವ ಇಂತಹ ಕಾಮೆಂಟ್‌ಗಳು. ಇವರ ಅಭದ್ರತೆಯನ್ನು ನೈತಿಕ ಪೊಲೀಸ್‌ಗಿರಿಯಾಗಿ ಪರಿವರ್ತಿಸುವುದು ಪುರುಷತ್ವವೆಂದು ಭಾವಿಸುವುದಿಲ್ಲ. ಅದು ಕೇವಲ ನಿಯಂತ್ರಣವಾಗುತ್ತದೆ. ಗೌರವಕ್ಕೆ ಮೇಲ್ವಿಚಾರಣೆಯ ಅಗತ್ಯವಿಲ್ಲ. ಇತರರನ್ನು ನಿಯಂತ್ರಿಸುವುದು ಬಲ ಎಂದುಕೊಂಡಿರುವ ದೌರ್ಬಲ್ಯ. ಗೌರವ ನೀಡುವುದು ನಿಜವಾದ ಶಕ್ತಿ" ಎಂದು ಅನಸೂಯ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. 'ಇದು ನನ್ನ ದೇಹ.. ನಿನ್ನದಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಅನಸೂಯಾಗೂ ಮುನ್ನ ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ನಟ ಶಿವಾಜಿ ಹೇಳಿಕ ಖಂಡಿಸಿದ್ದರು. "ನಟಿಯರ ವಸ್ತ್ರಧಾರಣೆ ಇರಲಿ, ಅದಕ್ಕೂ ಮುನ್ನ ನೀವು ಧೋತಿ ಹಾಕಿಕೊಳ್ಳಿ, ಮದುವೆ ಆಗಿದೆ ಎಂದು ತೋರಿಸಲು ಕಂಕಣ ಕಟ್ಟಿಕೊಳ್ಳಿ, ಕಾಲುಂಗುರ ಧರಿಸಿ ಎಂದು ಸಲಹೆ ಹೇಳಿದ್ದಾರೆ. ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಶಿವಾಜಿ ಹೊರಗಡೆ ಇಂತಹ ಹೇಳಿಕೆ ಕೊಟ್ಟು ಸ್ತ್ರೀಯರನ್ನು ದ್ವೇಷಿಸುವ ಪುರುಷರ ಮುಂದೆ ಹೀರೊ ಆಗುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











