"ಮಹಿಳೆಯರೇ ನಿಮ್ಮ ಕನ್ಯತ್ವ ಗಂಡನಿಗೆ ಮಾತ್ರ, ಎಲ್ಲರಿಗೂ ಅಲ್ಲ.. ಅರೆಬರೆ ಬಟ್ಟೆ ಹಾಕ್ಬೇಡಿ"; ಸುಮನ್

ಯುವತಿಯರು ಅರೆಬರೆ ಬಟ್ಟೆ ತೊಡುವುದೇ ಅತ್ಯಾಚಾರಕ್ಕೆ ಕಾರಣ ಎಂದು ಕೆಲವರು ಹೇಳುವುದನ್ನು ಕೇಳಿದ್ದೇವೆ. ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಮಾಡುವಾಗ ಯಾವ ಬಟ್ಟೆ ಕಾರಣವಾಯಿತು ಎಂದು ಮರುಪ್ರಶ್ನೆ ಹಾಕುವವರು ಇದ್ದಾರೆ. ಬಹುಭಾಷಾ ನಟ ಸುಮನ್ ಮಹಿಳೆಯರ ತೊಡುವ ಬಟ್ಟೆಯ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗುತ್ತಿದೆ.

ತುಳು ಮಾತನಾಡುವ ಬಿಲ್ಲವ ಕುಟುಂಬದಲ್ಲಿ ಹುಟ್ಟಿ ಬೆಳೆದವರು ನಟ ಸುಮನ್ ತಲ್ವಾರ್. 70ರ ದಶಕದಲ್ಲೇ ಅವರು ಚಿತ್ರರಂಗ ಪ್ರವೇಶಿದರು. ತಮಿಳು, ತೆಲುಗು ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹೀರೊ ಆಗಿ ಒಂದ್ಕಾಲದಲ್ಲಿ ಮಿಂಚಿದ ಸುಮನ್ ಬಳಿಕ ಪೋಕಷ ಪಾತ್ರಗಳತ್ತ ಮುಖ ಮಾಡಿದರು. ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ.

Actor Suman Comments on Women s Clothing and Culture goes viral

ಸಿನಿಮಾ ಹಾಗೂ ಸಮಾಜದ ಬಗ್ಗೆ ನಟ ಸುಮನ್ ತೆಲುಗು ಟಿವಿ5 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ಬಹಳ ಪವರ್‌ಫುಲ್ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಳ್ಳಬೇಕು. ಇಲ್ಲದಿದ್ದರೆ ಅದರಿಂದ ಆಗುವ ಒಳಿತಿಗಿಂತ ಕೆಡುಕೇ ಹೆಚ್ಚು. ಸದಭಿರುಚಿಯ ಸಿನಿಮಾಗಳು ಬರಬೇಕು. ಸಮಾಜದಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗಬೇಕು. ನಾವು ನಮ್ಮ ದೇಶದ ಸಂಸ್ಕೃತಿ, ಆಚರಣೆ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಲು ಮುಂದಾಗಿರುವುದು ತಪ್ಪು ಎಂದಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ನಟ ಸುಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಇಲ್ಲದೇ ಇದ್ದರೆ ದುಶ್ಚಟಗಳಿಗೆ ದಾಸರಾಗುವುದು ಮಾತ್ರವಲ್ಲ, ಕೆಟ್ಟ ಹಾದಿ ತುಳಿಯುತ್ತಾರೆ ಎಂದು ಸುಮನ್ ಆತಂಕ ವ್ಯಕ್ತಪಡಿಸಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಇಲ್ಲದ, ಅಶ್ಲೀಲತೆ, ಹಸಿಬಿಸಿ ದೃಶ್ಯಗಳಿಲ್ಲ ಸಿನಿಮಾಗಳನ್ನು ಮಾಡಬೇಕು. ಇವತ್ತು ಮೊಬೈಲ್‌ನಲ್ಲಿ ಪೋರ್ನ್ ನೋಡುವಂತಾಗಿದೆ. ಕೊನೆ ಪಕ್ಷ ಸಿನಿಮಾಗಳನ್ನಾದರೂ ಸರಿಯಾಗಿ ಮಾಡಬೇಕು. ಇದರಿಂದಲೇ ಸಮಾಜ ಹಾಳಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು. ಮಹಿಳೆಯರು ಕೂಡ ತಾವು ಧರಿಸುವ ಉಡುಪಿನ ಬಗ್ಗೆ ಗಮನ ಹರಿಸಬೇಕು ಎಂದು ನಟ ಸುಮನ್ ಅಭಿಪ್ರಾಯಪಟ್ಟಿದ್ದಾರೆ.

"ಮಹಿಳೆಯರಿಗೆ ನಾನು ಒಂದು ಮಾತು ಹೇಳ್ತೀನಿ. ಇದು ಭಾರತ ದೇಶ. ಹಾಗಾಗಿ ನೀವು ಧರಿಸುವ ಉಡುಪಿನ ಬಗ್ಗೆ ಗಮನ ಇರಲಿ. ನಿಮ್ಮ ಮನೆಯೊಳಗೆ ಯಾವ ಬಟ್ಟೆ ಬೇಕಾದರೂ ಧರಿಸಿ. ಹೊರಗಡೆ ಬಂದಾಗ ಸೆಕ್ಸಿಯಾಗಿ ಬಟ್ಟೆ ಹಾಕಿಕೊಂಡರೆ ನಿಮ್ಮನ್ನು ಕಾಪಾಡಲು ಯಾವ ಕಾನೂನು ಇಲ್ಲ. ವಿದೇಶದಲ್ಲಿ ಅದಕ್ಕೆ ಕಾನೂನು ಇದೆ. ಅಲ್ಲಿ ಅದೆಲ್ಲ ನಡೆಯುತ್ತದೆ. ಮಹಿಳೆಯರೇ ನಿಮ್ಮ ದೇಹವನ್ನು ನಿಮ್ಮ ಗಂಡ ಬಿಟ್ಟು ಯಾರು ನೋಡಬೇಕು? ಗಂಡನಿಗೆ ತೋರಿಸ್ತೀರಾ? ಊರಿಗೆಲ್ಲಾ ತೋರಿಸ್ತೀರಾ? ಆಲೋಚಿಸಿ. ನಿಮ್ಮ ವರ್ಜಿನಿಟಿ ನಿಮ್ಮ ಗಂಡನಿಗೆ ಮಾತ್ರ. ಎಲ್ಲರಿಗೂ ಅಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬಟ್ಟೆ ಧರಿಸಿ" ಎಂದು ನಟ ಸುಮನ್ ಹೇಳಿದ್ದಾರೆ.

"ದೇವಸ್ಥಾನಕ್ಕೆ ಬರುವಾಗ ನಿಮ್ಮ ಉಡುಪು ಹೇಗಿರಬೇಕು? ಜೀನ್ಸ್, ಟೀ-ಶರ್ಟ್ ಯಾಕೆ? ಚೂಡಿದಾರ್ ಯಾಕೆ ಹಾಕಿಕೊಂಡು ಬರಬಾರದು. ಮದುವೆಗೆ ಹೋದಾಗ, ಹೊರಗಡೆ ಹೋದಾಗ, ಮನೆಯಲ್ಲಿ ಇದ್ದಾಗ, ಪಬ್- ಕ್ಲಬ್‌ಗೆ ಹೋದಾಗ ನಿಮ್ಮ ವೇಷಭೂಷಣ ಹೇಗಿರಬೇಕು? ಎನ್ನುವುದು ನಿಮ್ಮ ಇಷ್ಟ. ಇದು ಹೀಗೆ ಮುಂದುವರೆದರೆ ಇಂತಹ ಪ್ರಕರಣಗಳು ನಡೆಯುತ್ತದೆ. ಪುರುಷರನ್ನು ನೀವು ಆಕರ್ಷಿಸುವುದರಿಂದ ಅವ್ರು ಹೀಗೆಲ್ಲಾ ಮಾಡ್ತಾರೆ. ಅವ್ರ ವಯಸ್ಸು ಆ ರೀತಿ ಇದೆ. ಸಿನಿಮಾ, ಮೊಬೈಲ್, ಟಿವಿಯಲ್ಲಿ ನೋಡಿ ಹೀಗೆ ಆಡುತ್ತಾರೆ. ಪೋಷಕರಿಗೆ ಒಳ್ಳೆ ಹೆಸರು ತರಬೇಕು. ನಿಮ್ಮಿಂದಲೇ ನಿಮ್ಮ ಪೋಷಕರಿಗೆ ಕೆಟ್ಟ ಹೆಸರು ಬರುತ್ತದೆ. ಇದು ಭಾರತ ದೇಶ, ಇಲ್ಲಿ ಒಂದಷ್ಟು ರೀತಿ ನೀತಿ, ವೇಷಭೂಷಣ ಎನ್ನುವುದು ಇದೆ ಅದನ್ನು ಅನುಸರಿಸಿ" ಎಂದು ನಟ ಸುಮನ್ ಹೇಳಿದ್ದಾರೆ.

More from Filmibeat

English summary
Actor Suman Talwar’s recent remarks urging women to dress modestly in public have gone viral
Read more about: suman tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X