ಸ್ನೇಹಿತನಿಗೆ ಕಾರ್ ಕೊಟ್ಟು ಬ್ಲೂ ಫಿಲ್ಮ್ ಕೇಸ್‌ನಲ್ಲಿ ತಗ್ಲಾಕ್ಕೊಂಡಿದ್ದ ಸುಮನ್: ಬೆಂಬಲಕ್ಕೆ ನಿಂತಿದ್ದು ಇಬ್ಬರು ನಟಿಯರು

ಬಹುಭಾಷಾ ನಟ ಸುಮನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮಿಳುನಾಡಿನಲ್ಲಿ ತುಳು ಕುಟಂಬದಲ್ಲಿ ಹುಟ್ಟಿ ಬೆಳೆದ ಸುಮನ್ ಮುಂದೆ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವತ್ತಿಗೂ ಪೋಷಕ ಪಾತ್ರಗಳಲ್ಲಿ ಸುಮನ್ ನಟಿಸುತ್ತಿದ್ದಾರೆ. ಆದರೆ 1985ರಲ್ಲಿ ಗಂಭೀರ ಪ್ರಕರಣವೊಂದರಲ್ಲಿ ಸುಮನ್ ಜೈಲು ಪಾಲಾಗಿದ್ದರು. ತಮ್ಮದಲ್ಲದ ತಪ್ಪಿಗೆ ಸೆರೆವಾಸ ಅನುಭವಿಸಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

1979ರಲ್ಲಿ ಸುಮನ್ ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬಹಳ ಸ್ಪುರದ್ರೂಪಿಯಾಗಿದ್ದ ಸುಮನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ತೆಲುಗು ಚಿತ್ರಗಳಲ್ಲೂ ನಟಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಆದರೆ ಅದೊಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಪೊಲೀಸರು ಸುಮನ್ ನಿವಾಸಕ್ಕೆ ಹೋಗಿ ಅವರನ್ನು ಬಂಧಿಸಿದ್ದರು. ಕೆಲ ನೀಲಿ ಚಿತ್ರಗಳ ಕ್ಯಾಸೆಟ್‌ಗಳನ್ನು ಸೀಜ್ ಮಾಡಿದ್ದಾಗಿ ವರದಿ ಆಗಿತ್ತು. ಈ ಸುದ್ದಿ ಭಾರೀ ಸಂಚಲನ ಸೃಷ್ಟಿಸಿತ್ತು.

Actor Suman Talwar remember that he arrested in alleged Blue Film Case in 1985

ದಕ್ಷಿಣ ಭಾರತದ ಸಿನಿಮಾ ನಟನೊಬ್ಬನನ್ನು ಇಂತಾದೊಂದು ಗಂಭೀರ ಪ್ರಕರಣದಲ್ಲಿ ಬಂಧಿಸಿದ್ದು ಅದೇ ಮೊದಲು. ಮೂವರು ಯುವತಿಯರು ಸುಮನ್ ನಮ್ಮನ್ನು ಅಪಹರಿಸಿ, ದೌರ್ಜನ್ಯ ಎಸಗಿ, ನೀಲಿ ಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸಿದರು ಆರೋಪಿಸಲಾಗಿತ್ತು. ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ನನಗೆ ಬೇಲ್ ಕೂಡ ಸಿಗಲಿಲ್ಲ. ಕೆಲವರು ಬೇಕು ಅಂತಲೇ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಈ ಹಿಂದೆ ಸಾಕಷ್ಟು ಸಂದರ್ಶನಗಳಲ್ಲಿ ಸುಮನ್ ಹೇಳಿದ್ದಾರೆ.

ತಮ್ಮನ್ನು ಸೈದಾಬಾದ್ ಕೋರ್ಟ್‌ಗೆ ಹಾಜರು ಪಡಿಸಿದರು. ನಂತರ ಚೆನ್ನೈ ಜೈಲಿನಲ್ಲಿ ಇಟ್ಟಿದ್ದರು. ಸಾಮಾನ್ಯ ಕೈದಿಗಳನ್ನು ಇಡುವ ಜೈಲು ಬಿಟ್ಟು ಭಯೋತ್ಪಾದಕರನ್ನು ಇಡುವ ಜೈಲಿನಲ್ಲಿ ಇಟ್ಟಿದ್ದರು. ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿ ಬೇಲ್ ಪಡೆದು ಬಂದಿದ್ದಾಗಿ ಹೇಳಿದ್ದರು. ಸುಮನ್ ಸ್ನೇಹಿತ ದಿವಾಕರ್ ಎಂಬಾತ ಕ್ಯಾಸೆಟ್ ಬಾಡಿಗೆಗೆ ಕೊಡುವ ಶಾಪ್ ಇಟ್ಟುಕೊಂಡಿದ್ದ. ಆತನ ಬಳಿ ಸುಮನ್ ಕೂಡ ಕ್ಯಾಸೆಟ್ ಬಾಡಿಗೆಗೆ ಪಡೆಯುತ್ತಿದ್ದರು.

Actor Suman Talwar remember that he arrested in alleged Blue Film Case in 1985

ದಿವಾಕರ್ ಸ್ನೇಹಿತ ಆಗಿದ್ದರಿಂದ ಕಾರ್ ಕೊಟ್ಟಿದ್ದೆ. ಅದನ್ನು ಆತ ನೀಲಿ ಚಿತ್ರ ಚಿತ್ರೀಕರಿಸಲು ಬಳಸಿದ್ದ ಎನ್ನುವ ಕಾರಣಕ್ಕೆ ಬಂಧಿಸಿದ್ದರು. ನಾವೆಲ್ಲಾ ಸ್ನೇಹಿತರಾಗಿದ್ದರಿಂದ ಇದರಲ್ಲಿ ನಾನು ಶಾಮೀಲಾಗಿದ್ದೀನಿ ಎನ್ನುವ ಆರೋಪದ ಮೇಲೆ ಬಂಧಿಸಿದ್ದರು. ಸ್ನೇಹಿತರು ಮಾಡಿದ ತಪ್ಪಿಗೆ ನಾನು ಸಮಸ್ಯೆ ಎದುರಿಸುವಂತಾಯಿತು. ಅದನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ಆ ಸಮಯಲ್ಲಿ ನಟಿಯರಾದ ಸುಮಲತಾ ಹಾಗೂ ಸುಹಾಸಿನಿ ನನ್ನ ಪಡ ಮಾತನಾಡಿದರು. ಸುಮನ್ ಅಂತಹ ವ್ಯಕ್ತಿ ಅಲ್ಲ ಎಂದು ಹೇಳಿದ್ದರು ಅಂತ ನೆನಪಿಸಿಕೊಂಡಿದ್ದಾರೆ.

ರಾಂಜೆಠ್ಮಾಲಾನಿ, , ಸೋಲಿ ಸೊರಾಬ್ಜಿರಂತಹ ವಕೀಲರ ಸಲಹೆಯಂತೆ ತಮಿಳುನಾಡಿನ ರಾಮಸ್ವಾಮಿ ಎಂಬುವ ವಕೀಲರು ವಾದಿಸಿ ನನಗೆ ಬೇಲ್ ಕೊಡಿಸಿದರು ಎಂದು ವಿವರಿಸಿದ್ದರು. 5 ತಿಂಗಳ ನಂತರ ಜೈಲಿನಿಂದ ಸುಮನ್ ಹೊರ ಬಂದಿದ್ದರು. ಇದೀಗ ಸಂದರ್ಶನವೊಂದರಲ್ಲಿ ಸುಮನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ನಾನು ಜೈಲಿಗೆ ಯಾಕೆ ಹೋದೆ ಎನ್ನುವುದು ಎಲ್ಲರಿಗೂ ಗೊತ್ತು. ಆ ಕೇಸ್‌ನಲ್ಲಿ ನನ್ನ ತಪ್ಪು ಇರಲಿಲ್ಲ. ಆದರೂ ನನ್ನನ್ನು ಸಿಲುಕಿಸಿದ್ದರು. ಸುಹಾಸಿನಿ, ಸುಮಲತಾ ಬೆಂಬಲಕ್ಕೆ ನಿಂತರು. ಸುಮನ್ ಅಂತಹ ವ್ಯಕ್ತಿ ಅಲ್ಲ ಅಂದ್ರು. ಅದು ನನಗೆ ಬಹಳ ಸಹಾಯ ಆಯಿತು" ಎಂದಿದ್ದಾರೆ.

Actor Suman Talwar remember that he arrested in alleged Blue Film Case in 1985

10 ಭಾಷೆಗಳಲ್ಲಿ 700ಕ್ಕೂ ಅಧಿಕ ಸಿನಿಮಾಗಳಲ್ಲಿ ಸುಮನ್ ನಟಿಸಿದ್ದಾರೆ. ತೆಲುಗಿನಲ್ಲಿ 'ಅನ್ನಮಯ್ಯ' ಚಿತ್ರದ ವೆಂಕಟೇಶ್ವರ ಸ್ವಾಮಿ ಪಾತ್ರ ಮೆಚ್ಚುಗೆ ಗಳಿಸಿತ್ತು. ತಮಿಳಿನಲ್ಲಿ ರಜನಿಕಾಂತ್ ನಟನೆಯ 'ಶಿವಾಜಿ' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಇನ್ನು ಕನ್ನಡದಲ್ಲಿ 'ಜಾಕಿಚಾನ್', 'ಸ್ವಯಂಕೃಷಿ', 'ಅಂಜದ ಗಂಡು'(2014), 'ವಜ್ರಕಾಯ', 'ಜಾನಿ', 'ಭರಾಟೆ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸುಮನ್ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actor Suman Talwar remember that he arrested in alleged Blue Film Case in 1985. he also Speaks about His Life In Jail. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X