ವರುಣ್ ತೇಜ್ - ಲಾವಣ್ಯ ತ್ರಿಪಾಠಿ ಮದುವೆ ತಯಾರಿ ಬಲು ಜೋರು: ಫೋಟೋ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

ಟಾಲಿವುಡ್‌ನಲ್ಲಿ ತಾರಾ ಜೋಡಿಯೊಂದರ ವಿವಾಹಕ್ಕೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಎಸ್.. ಕೆಲವೇ ದಿನಗಳಲ್ಲಿ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಯಾಗಲಿದ್ದಾರೆ. ಶನಿವಾರ, ಹಿರಿಯ ನಟ, ಮೆಗಾಸ್ಟಾರ್ ಚಿರಂಜೀವಿ ಅವರು ಹೈದರಾಬಾದ್‌ನಲ್ಲಿ ನಡೆದ ವಿವಾಹದ ಮೊದಲ ಆಚರಣೆಯ ಫೋಟೋಗಳ ಸರಣಿಯನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ನಟ ರಾಮ್ ಚರಣ್ , ತಮ್ಮ ಪತ್ನಿ ಉಪಾಸನಾ ಕೊನಿಡೆಲಾ ಮತ್ತು ಅವರ ಕುಟುಂಬದೊಂದಿಗೆ ಭಾಗಿಯಾಗಿದ್ದಾರೆ. ಎಲ್ಲರೂ ನಗುಮುಖದೊಂದಿಗೆ ಭಾವಿ ದಂಪತಿಯ ಜೊತೆಗೆ ಗ್ರೂಪ್ ಫೋಟೋಗೆ ಫೋಸ್ ನೀಡಿದ್ದಾರೆ. ನಟ ಅಲ್ಲು ಅರ್ಜುನ್ ಕೂಡ ಇವರಿಗೆ ಕುಟುಂಬ ಸಂಬಂಧಿ. ಆದರೆ ಅವರು ಮಿಸ್ ಆಗಿದ್ದಾರೆ.

Actor Varun Tej and Lavanya Tripathis pre wedding celebration in Hyderabad

ಸುಂದರ ಕ್ಷಣಗಳನ್ನು ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

" ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹಪೂರ್ವ ಆಚರಣೆಗಳು. ಸಂಭ್ರಮಿಸಬೇಕಾದ ಕ್ಷಣಗಳು" ಎಂದು ಚಿರಂಜೀವಿ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ಬರೆದಿದ್ದಾರೆ. ಫೋಟೋಗಳಲ್ಲಿ, ವರುಣ್ ತೇಜಾ ಪ್ರಿಂಟೆಡ್ ಕಪ್ಪು-ಬಿಳುಪು ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದರೆ, ಲಾವಣ್ಯ ಹಳದಿ ಸೂಟ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಗ್ರೂಪ್ ಫೋಟೋ ಜೊತೆಗೆ ಭಾವಿ ದಂಪತಿ ನಟ ಚಿರಂಜೀವಿ ಮತ್ತು ಪತ್ನಿ ಸುರೇಖಾ ಕೊನಿಡಾಲ ಅವರೊಂದಿಗೆ ಫೋಟೋವೊಂದರಲ್ಲಿ ಪೋಸ್ ನೀಡಿದ್ದಾರೆ. ಫ್ಯಾಮಿಲಿ ಗ್ರೂಪ್ ಫೋಟೋದಲ್ಲಿ ಚಿರಂಜೀವಿ ಅವರ ಮಗ, ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೂಡ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಅವರು ವರುಣ್ ಮತ್ತು ಲಾವಣ್ಯ ತ್ರಿಪಾಠಿ ನಗುತ್ತಿರುವ ಮತ್ತು ಒಟ್ಟಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜಾ ಮದುವೆ

ಜೂನ್ 9 ರಂದು ಹೈದರಾಬಾದ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ನಟ ವರುಣ್ ತೇಜಾ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೈದರಾಬಾದ್ ಟೈಮ್ಸ್ ವರದಿ ಪ್ರಕಾರ, ಲಾವಣ್ಯ ಮತ್ತು ವರುಣ್ ಮದುವೆ ಇದೇ ನವೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿದೆ. ಆದರೆ, ಈ ಬಗ್ಗೆ ಭಾವಿ ದಂಪತಿ ಅಥವಾ ಕುಟುಂಬದವರು ಇನ್ನೂ ಯಾವುದೇ ಅಧಿಕೃತ ದಿನಾಂಕವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ.

Actor Varun Tej and Lavanya Tripathis pre wedding celebration in Hyderabad

"ಮದುವೆಯು ಇಟಲಿಯ ಸುಂದರವಾದ ವಿಲ್ಲಾದಲ್ಲಿ ನಡೆಯಲಿದೆ. ಮದುವೆಯು ತೆಲುಗು ಸಾಂಪ್ರದಾಯದಂತೆ ನಡೆಯುತ್ತದೆ. ಮದುವೆಗೂ ಮುನ್ನ ನಡೆಯುವ ಹಲವು ಆಚರಣೆಗಳ ತಯಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಾರಂಭಗಳು ನಟಿ ಲಾವಣ್ಯ ಅವರ ಕುಟುಂಬದ ಸಂಪ್ರದಾಯಕ್ಕನುಗುಣವಾಗಿ ಅಂದರೆ ಉತ್ತರ ಪ್ರದೇಶದ ಆಚರಣೆಗಳಂತೆ ಇರಲಿವೆ" ಸಮಾರಂಭಗಳ ವಿವರಗಳನ್ನು ಅಂತಿಮಗೊಳಿಸುತ್ತಿದ್ದಾರೆ, ಇದು ಲಾವಣ್ಯ ಅವರ ಯುಪಿ ಬೇರುಗಳನ್ನು ಪ್ರತಿಬಿಂಬಿಸುವ ಆಚರಣೆಗಳನ್ನು ಹೊಂದಿರುತ್ತದೆ" ಎಂದು ಮೂಲಗಳು ತಿಳಿಸಿವೆ.

ಇಟಲಿಯಲ್ಲಿ ವಿವಾಹವಾದ ಬಳಿಕ ಇಲ್ಲಿ ಎರಡು ಆರತಕ್ಷತೆಗಳನ್ನು ಆಯೋಜಿಸುವ ಪ್ಲ್ಯಾನ್ ಕುಟುಂಬದವರದ್ದು. ಒಂದು ಹೈದರಾಬಾದ್‌ನಲ್ಲಿ ಮತ್ತು ಇನ್ನೊಂದು ಡೆಹ್ರಾಡೂನ್‌ನಲ್ಲಿ ನಡೆಯಲಿದೆ ಎಂದು ಮೂಲವು ಮಾಹಿತಿ ನೀಡಿದೆ. "ಅವರ ನಿಶ್ಚಿತಾರ್ಥದಂತೆಯೇ ವಿವಾಹದಲ್ಲಿಯೂ ಆತ್ಮೀಯರು ಮಾತ್ರ ಇರುತ್ತಾರೆ. ಹಾಗಾಗಿ, ಹೈದರಾಬಾದ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳಿಗಾಗಿ ಆರತಕ್ಷತೆ ಇರುತ್ತದೆ. ನಟಿ ಲಾವಣ್ಯ ಡೆಹ್ರಾಡೂನ್‌ನಲ್ಲಿ ಬೆಳೆದಿದ್ದರಿಂದ ಅವರ ಹತ್ತಿರದ ಸ್ನೇಹಿತರಿಗಾಗಿ ಅಲ್ಲಿಯೂ ಚಿಕ್ಕ ಸಮಾರಂಭ ನಡೆಯಲಿದೆ.

More from Filmibeat

English summary
Actor Varun Tej and Lavanya Tripathi's pre wedding celebration in Hyderabad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X