ವರುಣ್ ತೇಜ್ ಕೊರೊನಾ ನೆಗಿಟಿವ್: ಎಲ್ಲರಿಗೂ ಧನ್ಯವಾದ ಹೇಳಿದ ಮೆಗಾ ಹೀರೋ

ತೆಲುಗು ನಟ ವರುಣ್ ತೇಜಗೆ ಕೊನೆಗೂ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ''ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

''ನೆಗಿಟಿವ್ ಎನ್ನುವುದು ಇಷ್ಟೊಂದು ಸಂತಸ ತರುತ್ತದೆ ಎನ್ನುವುದು ನನಗೆ ಯಾವತ್ತು ತಿಳಿದಿರಲಿಲ್ಲ. ಹೌದು, ನನಗೆ ಕೊರೊನಾ ನೆಗಿಟಿವ್. ನನ್ನ ಬಗ್ಗೆ ಕಾಳಜಿ ತೋರಿದ ಹಾಗೂ ನನ್ನ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದಾರೆ.

ವರುಣ್ ತೇಜ್ ನೆಗಿಟಿವ್ ಎಂದು ಪೋಸ್ಟ್ ಹಾಕಿದ ಮೇಲೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

Actor Varun Tej Tests Negative for Covid-19

ಡಿಸೆಂಬರ್ 29 ರಂದು ನಾಗಬಾಬು ಪುತ್ರ ವರುಣ್ ತೇಜಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಸೋಂಕು ತಗುಲಿರುವುದು ಖಚತವಾಗುತ್ತಿದ್ದಂತೆ ನಟ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟರು.

ವರುಣ್ ತೇಜಗೆ ಸೋಂಕು ತಗುಲಿದ ಅದೇ ದಿನ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಗೂ ಸೋಂಕು ಅಂಟಿಕೊಂಡಿತ್ತು. ರಾಮ್ ಚರಣ್ ಸಹ ಟ್ವಿಟ್ಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದರು. ''ಕೊರೊನಾ ಸೋಂಕು ತಗುಲಿದೆ, ನಾನು ಕ್ವಾರಂಟೈನ್ ಆಗಿದ್ದೇನೆ'' ಎಂದು ಹೇಳಿದ್ದರು.

Actor Varun Tej Tests Negative for Covid-19

ರಾಮ್ ಚರಣ್ ಸೋಂಕು ಖಚಿತಪಡಿಸಿದ ಕೆಲವೇ ಗಂಟೆಗಳಲ್ಲಿ ವರುಣ್ ತೇಜ ಸಹ ಪಾಸಿಟಿವ್ ಎಂದು ಮಾಹಿತಿ ನೀಡಿದ್ದರು. ಈ ಇಬ್ಬರಿಗೂ ಸೋಂಕು ದೃಢಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಮಗಾಸ್ಟಾರ್ ಕುಟುಂಬದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಆತಂಕ ಉಂಟಾಗಿತ್ತು.

ಕ್ರಿಸ್‌ಮಸ್‌ ಪ್ರಯುಕ್ತ ಮೆಗಾ ಫ್ಯಾಮಿಲಿ ಎಲ್ಲ ಸದಸ್ಯರು ರಾಮ್ ಚರಣ್ ಮನೆಯಲ್ಲಿ ಸಂಭ್ರಮಿಸಿದ್ದರು. ಹಾಗಾಗಿ, ಉಳಿದವರಿಗೆ ಸೋಂಕಿನ ಭೀತಿ ಕಾಡಿತ್ತು. ಆಮೇಲೆ ಬೇರೆ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ.

More from Filmibeat

English summary
Tollywood actor Varun Tej tested positive for coronavirus and he thank to his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X