ಗರ್ಭಿಣಿ ಪತ್ನಿಗಾಗಿ ಬಾಣಸಿಗನಾದ ನಟ; ಬಿಸಿ ಬಿಸಿಯಾಗಿ ಮಾಡಿ ಬಡಿಸಿದ್ದೇನು?

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯೂ ವರ. ಜೀವನದ ಬಹುಮುಖ್ಯವಾದ ಘಟ್ಟ. ತಂದೆ-ತಾಯಿ ಇಬ್ಬರೂ ಮಗುವಿನ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಅವರ ಜೀವನ ಶೈಲಿಯೇ ಬದಲಾಗಿಬಿಡುತ್ತದೆ. ಗರ್ಭವಸ್ಥೆಯಲ್ಲಿರುವ ಮಹಿಳೆಗೆ ತಾನು ತಾಯಿಯಾಗುತ್ತಿದ್ದೇನೆ ಸಂತಸ ಅಷ್ಟಿಷ್ಟಲ್ಲ.

ಇನ್ನು ಗರ್ಭಿಣಿ ಮಹಿಳೆಯರಿಗೆ ನಾನಾ ಬಯಕೆಗಳಿರುತ್ತವೆ. ಅದನ್ನು ಪೂರೈಸಲು ಆಪ್ತರು, ಮುಖ್ಯವಾಗಿ ಪತಿ ಪ್ರಯತ್ನಿಸುತ್ತಾನೆ. ಗರ್ಭಾವಸ್ಥೆಯ ಮದಯಲ್ಲಿ ಆರೋಗ್ಯಕರ ಆಹಾರ ಸೇವನೆ ತಾಯಿಯ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆ ಬಹಳ ಮುಖ್ಯ. ವೈದರು ಇದನ್ನೇ ಸೂಚಿಸುತ್ತಾರೆ. ಗರ್ಭಿಣಿಯರಿಗೆ ಊಟ, ತಿಂಡಿ ವಿಚಾರದಲ್ಲಿ ಬಯಕೆ ಹೆಚ್ಚು. ಅಲ್ಲಿಯವರೆಗೂ ಇಷ್ಟಪಟ್ಟು ತಿನ್ನುತ್ತಿದ್ದ ತಿಂಡಿ ಬಿಟ್ಟು ಬೇರೆ ಬೇರೆ ತಿಂಡಿ ತಿನ್ನಲು ಇಷ್ಟಪಡುತ್ತಾರೆ.

Actor Varun Tej Turns Chef for Pregnant Wife Lavanya Tripathi Wins Hearts Online

ತೆಲುಗು ನಟಿ ಇತ್ತೀಚೆಗೆ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಗರ್ಭಿಣಿ ಪತ್ನಿಗಾಗಿ ಪತಿ ಬಾಣಸಿಗನಾಗಿಬಿಟ್ಟಿದ್ದಾರೆ. ಪತ್ನಿ ಇಷ್ಟಪಟ್ಟ ಅಡುಗೆ ಮಾಡಿ ಬಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟಿ ಲಾವಣ್ಯ ತ್ರಿಪಾಠಿ. ಇನ್ನು ಪತ್ನಿಗಾಗಿ ಅಡುಗೆ ಭಟ್ಟನಾಗಿದ್ದು ತೆಲುಗು ನಟ ವರುಣ್ ತೇಜ್. ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಚಿತ್ರರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ.

ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಈ ವಿಚಾರವನ್ನು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸಿದ್ದರು.

ಸದ್ಯ ಗರ್ಭಿಣಿ ಮಡದಿ ಬಗ್ಗೆ ವರುಣ್ ತೇಜ್ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಮನೆಯಲ್ಲಿ ಬಾಣಸಿಗರು ಇದ್ದರೂ ಕೂಡ ತಾವೇ ಖುದ್ದಾಗಿ ಮಡದಿಗೆ ಪಿಜ್ಜಾ ಮಾಡಿ ವರುಣ್ ತೇಜ್ ಕೊಟ್ಟಿದ್ದಾರೆ. ತಾವೇ ಹಿಟ್ಟು ಕಲಸಿ, ಈರುಳ್ಳಿ ಕತ್ತರಿಸಿ, ಪಿಜ್ಜಾ ಸಿದ್ಧಪಡಿಸಿ ಓವನ್‌ನಲ್ಲಿ ಇಟ್ಟು ತೆಗೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ಲಾವಣ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿ ಅಭಿಮಾನಿಗಳು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಮಡದಿಗಾಗಿ ಎಷ್ಟೆಲ್ಲಾ ಆರೈಕೆ ಮಾಡ್ತಾರೆ ನೋಡಿ ವರುಣ್ ತೇಜ್ ಎಂದು ಹೇಳಿದ್ದಾರೆ.

ದೊಡ್ಡಪ್ಪ ಚಿರಂಜೀವಿ, ಚಿಕ್ಕಪ್ಪ ಪವನ್ ಕಲ್ಯಾಣ್ ಹಾಗೂ ತಂದೆ ನಾಗಬಾಬು ಹಾದಿಯಲ್ಲೇ ವರುಣ್ ತೇಜ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಬಾಲನಟನಾಗಿ ಮೊದಲಿಗೆ ಮಿಂಚಿದ್ದರು. ಬಳಿಕ 'ಮುಕುಂದ' ಎಂಬ ಸಿನಿಮಾ ಮೂಲಕ ಹೀರೊ ಆಗಿ ಪರಿಚಿತರಾಗಿದ್ದರು. ಮುಂದೆ ಪೂರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದಲ್ಲಿ ಕೂಡ ನಟಿಸಿದ್ದರು. ಆದರೆ ಯಾವುದೇ ಸಿನಿಮಾ ದೊಡ್ಡದಾಗಿ ಹಿಟ್ ಆಗಲಿಲ್ಲ.

ಕಳೆದ ವರ್ಷ ಬಂದ 'ಮಟ್ಕಾ' ಚಿತ್ರದಲ್ಲಿ ಕೊನೆಯದಾಗಿ ವರುಣ್ ತೇಜ್ ನಟಿಸಿದ್ದರು. ಇತ್ತೀಚೆಗೆ ಹೊಸದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸೆಟ್ಟೇರಿದ್ದು ಹೀರೊ ಆಗಿ ನಟಿಸುತ್ತಿದ್ದಾರೆ. ಮರ್ಲೆಪಾಕ ಗಾಂಧಿ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2017ರಲ್ಲಿ ಬಂದಿದ್ದ 'ಮಿಸ್ಟರ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ವರುಣ್ ತೇಜ್ ಹಾಗೂ ಲಾವಣ್ಯ ನಾಯಕ-ನಾಯಕಿ ಆಗಿ ನಟಿಸಿದ್ದರು. ಆಗ ಶುರುವಾಗಿದ್ದ ಸ್ನೇಹ ಪ್ರೀತಿಗೆ ತಿರುಗಿತ್ತು. ಪೋಷಕರ ಒಪ್ಪಿಗೆ ಪಡೆದು ಇಬ್ಬರೂ ಹಸೆಮಣೆ ಏರಿದ್ದರು.

2023, ನವೆಂಬರ್ 1ರಂದು ಇಟಲಿಯಲ್ಲಿ ವರುಣ್- ಲಾವಣ್ಯ ಮದುವೆ ನಡೆದಿತ್ತು. ಈ ಡೆಸ್ಟಿನೇಷಲ್ ವೆಡ್ಡಿಂಗ್‌ನಲ್ಲಿ ಎರಡೂ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಿದ್ದರು.

More from Filmibeat

English summary
Famous Actor is winning hearts as he lovingly cooks for his pregnant wife. The couple, who married in 2023, recently shared their pregnancy news, delighting fans.
Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X