ನಟಿ ಸೌಂದರ್ಯ ಕಾಲು ಹಿಡಿದಿದ್ದ ಘಟನೆ ನೆನಪಿಸಿಕೊಂಡ ವೆಂಕಟೇಶ್
ನಟ ವೆಂಕಟೇಶ್ ನಟಿಸಿರುವ 'ನಾರಪ್ಪ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
ವೆಂಕಟೇಶ್ ಅಭಿಮಾನಿಗಳಿಗೆ 'ನಾರಪ್ಪ' ಸಿನಿಮಾ ಹೆಚ್ಚಿನ ಖುಷಿ ಕೊಟ್ಟಿಲ್ಲ. ಅದರಲ್ಲೂ ಕೆಲವು ದೃಶ್ಯಗಳ ಬಗ್ಗೆ ಅಭಿಮಾನಿಗಳು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವೆಂಕಟೇಶ್ ಹಳ್ಳಿಗರ ಕಾಲು ಹಿಡಿಯುವ ದೃಶ್ಯದ ಬಗ್ಗೆ.
'ನಾರಪ್ಪ' ಸಿನಿಮಾದ ಬಗ್ಗೆ ಇತ್ತೀಚೆಗೆ ವೆಂಕಟೇಶ್ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಪಯಣದ ಬಗ್ಗೆ ಹಾಗೂ ಪ್ರಯೋಗಗಳಿಗೆ ತಾವು ಒಡ್ಡಿಕೊಂಡ ಬಗ್ಗೆ ಮಾತನಾಡುತ್ತಾ, ನಟಿ ಸೌಂದರ್ಯ ಕಾಲು ಹಿಡಿದುಕೊಂಡಿದ್ದ ಘಟನೆ ಬಗ್ಗೆಯೂ ಮಾತನಾಡಿದ್ದಾರೆ.

'ಚಂಟಿ' ಸಿನಿಮಾ ಬಗ್ಗೆ ಆಕ್ಷೇಪ ಎತ್ತಿದ್ದರು
'ಪ್ರಯೋಗಾತ್ಮಕ ಸಿನಿಮಾಗಳು, 'ಹೀರೋ' ಝೋನ್‌ನ ಹೊರಗಿನ ಸಿನಿಮಾಗಳನ್ನು ಈ ಮುಂಚೆಯೂ ನಾನು ಒಪ್ಪಿಕೊಂಡು ಖುಷಿಯಿಂದಲೇ ಮಾಡಿದ್ದೇನೆ. ನಾನು 'ಚಂಟಿ' ಸಿನಿಮಾ ಮಾಡಿದಾಗ ಹಲವರು ಇಂಥ ಸಿನಿಮಾಗಳನ್ನು ಮಾಡಬಾರದು ಎಂದರು ಆದರೆ ನಾನು ಇಷ್ಟಪಟ್ಟು ಆ ಸಿನಿಮಾ ಮಾಡಿದೆ'' ಎಂದಿದ್ದಾರೆ ವೆಂಕಟೇಶ್.

'ಪವಿತ್ರ ಬಂಧಂ' ಸಿನಿಮಾದಲ್ಲಿನ ದೃಶ್ಯ
''ಇನ್ನು 'ಪವಿತ್ರ ಬಂಧಂ' ಸಿನಿಮಾದಲ್ಲಿ ನಾನು ಸೌಂದರ್ಯ ಕಾಲು ಹಿಡಿದುಕೊಂಡ ದೃಶ್ಯವನ್ನು ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದರು. ಆದರೆ ನನಗೆ ಅದರಲ್ಲೆನೂ ವಿಶೇಷ ಎನಿಸಿರಲಿಲ್ಲ. ಆ ದೃಶ್ಯಕ್ಕೆ ಅದು ಅವಶ್ಯಕ ಎನಿಸಿದ್ದಕ್ಕೆ ನಾನು ಮಾಡಿದೆ'' ಎಂದಿದ್ದಾರೆ ವೆಂಕಟೇಶ್.

ಊರ ಜನರ ಕಾಲಿಗೆ ಬೀಳುವ ದೃಶ್ಯ
'ನಾರಪ್ಪ' ಸಿನಿಮಾದಲ್ಲಿ ದಲಿತ ವ್ಯಕ್ತಿಯ ಪಾತ್ರ ಮಾಡಿರುವ ವೆಂಕಟೇಶ್, ಮಗನನ್ನು ಜೈಲಿನಿಂದ ಬಿಡಿಸಲು ಊರ ಮುಖಂಡನ ಆದೇಶದಂತೆ ಊರ ಜನರ ಕಾಲಿಗೆ ಬೀಳುವ ದೃಶ್ಯವಿದೆ. ಆ ದೃಶ್ಯದ ಬಗ್ಗೆ ವೆಂಕಟೇಶ್ ಅಭಿಮಾನಿಗಳು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video

ಕತೆಗೆ ಅನುಗುಣವಾಗಿ ಪಾತ್ರಗಳು ವರ್ತಿಸಬೇಕು: ವೆಂಕಿ
''ಸಿನಿಮಾದಲ್ಲಿ ಪಾತ್ರಗಳು ಕತೆಯ ಅನುಗುಣವಾಗಿ ವರ್ತಿಸಬೇಕು. ಆಗಲೇ ಜನ ಕತೆಯನ್ನು ನಂಬುತ್ತಾರೆ ಮೆಚ್ಚುತ್ತಾರೆ'' ಎಂದಿದ್ದಾರೆ ವೆಂಕಟೇಶ್. ಹೀರೋ ಛಾಯೆ ಇಲ್ಲದ ಕೆಲವಾರು ಸಿನಿಮಾಗಳನ್ನು ವೆಂಕಟೇಶ್ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ್ದಾರೆ.


Click it and Unblock the Notifications











