ಖ್ಯಾತ ಛಾಯಾಗ್ರಾಹಕ ಡಬು ರತ್ನಾನಿ ಕ್ಯಾಲೆಂಡರ್ ನಲ್ಲಿ ಮಿಂಚಿದ ಮೊದಲ ಸೌತ್ ಸ್ಟಾರ್
ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಅವರ 2021ರ ಕ್ಯಾಲೆಂಡರ್ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ. ಡಬೂ ರತ್ನಾನಿ ಫೋಟೋಶೂಟ್ ಅಂದ್ಮೇಲೆ ಕುತೂಹಲ ಹೆಚ್ಚಾಗೆ ಇರುತ್ತೆ. ಸಿನಿ ಸೆಲೆಬ್ರಿಟಿಗಳನ್ನು ತನ್ನ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಸೆರೆಹಿಡಿಯುವ ಡಬೂ ಅಂದರೆ ಬಾಲಿವುಡ್ ಮಂದಿಗೆ ಅಪಾರ ಗೌರವ, ಅಭಿಮಾನ.
ಪ್ರತಿವರ್ಷ ಕ್ಯಾಲೆಂಡರ್ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುವ ಡಬೂ ಈ ಬಾರಿಯೂ ಅಂದರೆ 2021ರ ಕ್ಯಾಲೆಂಡರ್ ಶೂಟ್ ಮಾಡಿದ್ದಾರೆ. ಪ್ರತಿಬಾರಿ ಡಬೂ ಕ್ಯಾಮರಾಗೆ ಸೆರೆಯಾಗುತ್ತಿದ್ದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ. ಆದರೆ ಈ ಬಾರಿ ಸೌತ್ ಸ್ಟಾರ್ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಬಾರಿಗೆ ಡಬೂ ರತ್ನಾನಿ ಕ್ಯಾಲೆಂಡರ್‌ನಲ್ಲಿ ನಿಂಚಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ. ಫೆಬ್ರವರಿಯಲ್ಲೇ ಫೋಟೋಶೂಟ್ ಮಾಡಲಾಗಿತ್ತು. ಈ ಬಗ್ಗೆ ವಿಜಯ್ ಮತ್ತು ಡಬೂ ರತ್ನಾನಿ ಇಬ್ಬರು ಮಾಹಿತಿ ನೀಡಿದ್ದರು. ಇದೀಗ ಡಬೂ ಸೆರೆಹಿಡಿದ ಫೋಟೋವನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವಿಜಯ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಬೈಕ್ ಮೇಲೆ ಕುಳಿತು ಕಿಲ್ಲಿಂಗ್ ನೋಟ ಬೀರುತ್ತಿರುವ ವಿಜಯ್ ಪೋಸ್ ಅಭಿಮಾನಿಗಳ ಹೃದಯಗೆದ್ದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ್ 'ಒಂದು ದಿನ ಅವರ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ತಿಳಿದಿತ್ತು. ಆದರೆ ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಲೈಗರ್ ಮೊದಲು ಆಗಬೇಕು ಎನ್ನುವುದು ನನ್ನ ಬಯಕೆ. ಜನರು ಮೊದಲು ಲೈಗರ್ ನೋಡಬೇಕು ಎಂದು ಬಯಸುತ್ತೇನೆ. ಆದರೆ ಈ ಕ್ಯಾಲೆಂಡರ್ ಪ್ರಸ್ತಾಪ ಬಂದಾಗ ಇದನ್ನು ಮುಂದೂಡಲು ಬಯಸಿಲ್ಲ' ಎಂದು ಹೇಳಿದ್ದಾರೆ.
Recommended Video
ಅಂದಹಾಗೆ ವಿಜಯ್ ಸದ್ಯ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಅಂದುಕೊಂಡಂತೆ ಆಗಿದ್ದರೆ ಬಿಡುಗಡೆಗೆ ಸಿದ್ಧವಾಗಿರುತ್ತಿತ್ತು. ಆದರೀಗ ತಡವಾಗಿದ್ದು, ಸದ್ಯದಲ್ಲೇ ಸಿನಿಮಾ ಕೆಲಸಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಸಿನಿಮಾ ಬಳಿಕ ವಿಜಯ್ ಮುಂದಿನ ಸಿನಿಮಾ ಕೂಡ ಕುತೂಹಲ ಮೂಡಿಸಿದೆ.


Click it and Unblock the Notifications











