For Quick Alerts
  ALLOW NOTIFICATIONS  
  For Daily Alerts

  'ತಪ್ಪುಗಳಿಂದ ಪಾಠ ಕಲಿಯಿರಿ, ನೀವು ಬಯಸಿದಂತೆ ಜೀವಿಸಿ': ವಿಜಯ್ ದೇವರಕೊಂಡ

  |

  'ಲೈಗರ್' ಸಿನಿಮಾ ಸೋಲಿನ ನಂತರ ನಟ ವಿಜಯ್ ದೇವರಕೊಂಡ ಸೈಲೆಂಟ್ ಆಗಿಬಿಟ್ಟಿದ್ದಾರೆ. ದೇಶಾದ್ಯಂತ ಸುತ್ತಾಡಿ ಚಿತ್ರಕ್ಕಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಹೋದಲೆಲ್ಲಾ ಚಿತ್ರತಂಡಕ್ಕೆ ಭವ್ಯ ಸ್ವಾಗತವೇ ಸಿಕ್ಕಿತ್ತು. ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸಿನಿಮಾ ಸೋಲಿನ ನಂತರ ತಂಡದ ಯಾರೊಬ್ಬರು ಮಾತನಾಡುವ ಗೋಜಿಗೆ ಹೋಗಲಿಲ್ಲ.

  ವಿಜಯ್ ದೇವರಕೊಂಡ ಸದ್ಯ 'ಖುಷಿ' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ 'ಜನ ಗಣ ಮನ' ಸಿನಿಮಾ ನಿಂತೇಹೋಗಿದೆ ಎನ್ನಲಾಗ್ತಿದೆ. 'ಲೈಗರ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ದೇವರಕೊಂಡ ಕನಸು ನುಚ್ಚು ನೂರಾಗಿದೆ.

  ವೇಣು ಸ್ವಾಮಿ ಭವಿಷ್ಯ ನಿಜವಾಯ್ತಾ? 'ಲೈಗರ್' ಸೋಲಿಗೆ ಅದೇ ಕಾರಣನಾ?ವೇಣು ಸ್ವಾಮಿ ಭವಿಷ್ಯ ನಿಜವಾಯ್ತಾ? 'ಲೈಗರ್' ಸೋಲಿಗೆ ಅದೇ ಕಾರಣನಾ?

  ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಮೌನಕ್ಕೆ ಜಾರಿದ್ದರು. ಸೋಶಿಯಲ್‌ ಮೀಡಿಯಾದಿಂದಲೂ ದೂರವೇ ಉಳಿದಿದ್ದರು. ಇದೀಗ ಒಂದು ಸ್ಟಂಟ್ ಟ್ರೈನಿಂಗ್ ವಿಡಿಯೋ ಶೇರ್ ಮಾಡಿ ಇದನ್ನು ಬಹಳ ಮಿಸ್‌ ಮಾಡಿಕೊಳ್ತಿದ್ದೀನಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಸ್ಪೂರ್ತಿ ತುಂಬುವ ಸಾಲುಗಳನ್ನು ಬರೆದುಕೊಂಡಿದ್ದಾರೆ. "ಕಷ್ಟಪಟ್ಟು ಕೆಲಸ ಮಾಡಿ. ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿ. ಹೊಸ ಸ್ಕಿಲ್ಸ್ ಕಲಿಯಿರಿ. ತಪ್ಪುಗಳಿಂದ ಪಾಠ ಕಲಿಯಿರಿ. ಯಶಸ್ಸನ್ನು ಎಂಜಾಯ್ ಮಾಡಿ. ನೀವು ಬಯಸಿದಂತೆ ಜೀವಿಸಿ" ಎಂದಿದ್ದಾರೆ.

  ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ 'ಲೈಗರ್' ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ, ರಮ್ಯಕೃಷ್ಣ, ಮೈಕ್ ಟೈಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕರಣ್‌ ಜೋಹರ್, ಪುರಿ ಜಗನ್ನಾಥ್, ಚಾರ್ಮಿ ಕೌರ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿತ್ರಕ್ಕಾಗಿ ವಿಜಯ್ ಬಹಳ ಕಷ್ಟಪಟ್ಟಿದ್ದರು.

  Actor Vijay Devarakonda Shares stunt training Video after the failure of Liger

  ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಅಥ್ಲೆಟ್ ಆಗಿ ಬಣ್ಣ ಹಚ್ಚಿದ್ದಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿ, ತರಬೇತಿ ಪಡೆದುಕೊಂಡಿದ್ದರು. ಆದರೆ ಸಿನಿಮಾ ಕಥೆ, ಸ್ಕ್ರೀನ್‌ಪ್ಲೇ ಕೈಕೊಟ್ಟು ಎಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

  English summary
  Actor Vijay Devarakonda Shares stunt training Video after the failure of Liger. Know More.
  Wednesday, September 21, 2022, 8:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X