Khushi: ಸಮಂತಾ ಆರೋಗ್ಯದ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

ನಟಿ ಸಮಂತಾ ರುತ್ ಪ್ರಭು ಅವರಿಗೆ ಮಯೋಸಿಟಿಸ್ (Myositis) ಇರುವುದು ತಿಳಿದಾಗ, ಅವರು ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರು. ಈ ವೇಳೆ ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಯಾರನ್ನೂ ಭೇಟಿಯಾಗುತ್ತಿರಲಿಲ್ಲ. ಎಲ್ಲವನ್ನೂ ನಿಲ್ಲಿಸಿಬಿಟ್ಟಿದ್ದರು ಎಂದು ವಿಜಯ್ ದೇವರಕೊಂಡ ಭಾವುಕರಾಗಿ ಮಾತನಾಡಿದ್ದಾರೆ.

ತೆಲುಗಿನ ಬಹುನಿರೀಕ್ಷಿತ ಖುಷಿ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ, ಮಾತನಾಡಿರುವ ನಟ ವಿಜಯ್ ದೇವರಕೊಂಡ ಕಳೆದ ವರ್ಷ ನಟಿ ಸಮಂತಾ ರುತ್ ಪ್ರಭು ತೀವ್ರ ಅನಾರೋಗ್ಯಕ್ಕೆ ಒಳಗಾದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಹಲವು ಘಟನೆಗಳನ್ನು ವಿವರಿಸಿದ್ದಾರೆ. ನಟಿ ಸಮಂತಾ ಅವರು 2022 ರಲ್ಲಿ ಸ್ವಯಂ ನಿರೋಧಕ ಸ್ಥಿತಿಯನ್ನು ಕಳೆದುಕೊಳ್ಳುವ ಮಯೋಸಿಟಿಸ್ ರೋಗಕ್ಕೆ ಒಳಗಾಗಿದ್ದರು.

vijay-devarakonda-talks-about-samantha-ruth

ಮಾತು ನಿಲ್ಲಿಸಿದ್ದ ಸಮಂತಾ!

ನಟಿ ಸಮಂತಾ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ಜುಲೈನಲ್ಲಿ ತಾವು ಬೇರೆ ಚಿತ್ರದ ಪ್ರಚಾರ ಮಾಡುವಾಗ ಸಮಂತಾ ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡಿದ್ದಾಗಿಗೆ ಹೇಳಿದ್ದಾರೆ. ಈ ವೇಳೆ ಅವರು ತಮ್ಮ ಆರೋಗ್ಯದ ಬಗ್ಗೆ ಮಾತನಾಡಲು ಬಯಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ತಾವು ಹೇಗೆ ಅವರಿಗೆ ಮಾತನಾಡಲು ಪ್ರೇರೆಪಿಸಿದ್ದೇ ಎಂಬುದನ್ನು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ನಾವು ನಟರು ಮತ್ತು ನಾವು ಕಥೆಯನ್ನು ಹೇಳುವವರು ಎಂದು ನಾನು ಸ್ಯಾಮ್‌ಗೆ ಹೇಳಿದೆ. ನಮ್ಮ ಆರೋಗ್ಯ ಹೋರಾಟದ ಬಗ್ಗೆ ಬಹಿರಂಗವಾಗಿ ಮಾತನಾಡಬೇಕಾಗಿಲ್ಲ ಎಂದು ನಾನು ಭಾವಿಸಿದೆ. ಸ್ವಲ್ಪ ಸಮಯದ ನಂತರ, ತನ್ನ ಆರೋಗ್ಯದ ಬಗ್ಗೆ ಮಾತನಾಡುವುದು ತನ್ನ ಜವಾಬ್ದಾರಿ ಎಂದು ಸಮಂತಾ ಭಾವಿಸಿದರು. ಆದರೆ, ಅವರು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಜೊತೆಗೆ ನಮ್ಮೆಲ್ಲರನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದರು. ಆಕೆ ತೀರಾ ಅಸ್ವಸ್ಥಳಾಗಿದ್ದರು. ಈ ವೇಳೆ ಆಕೆ ಅನೇಕ ಸಮಸ್ಯೆಗಳಿಮದ ಬಳಲುತ್ತಿದ್ದರು. ಕೆಲವು ಸಮಯದ ನಂತರ ಇನ್ನು ಭರವಸೆ ಇದೆ ಎಂಬುದನ್ನು ತನ್ನವರಿಗೆ ತಿಳಿಸುವ ಕಾರಣಕ್ಕೆ ಆಕೆ ಎಲ್ಲರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದರು" ಎಂದು ಹೇಳಿದ್ದಾರೆ.

vijay-devarakonda-talks-about-samantha-ruth

ಎಲ್ಲರಿಗೂ ಸಮಂತಾ ಕಷ್ಟ ಅರ್ಥವಾಗುವುದೇ?

ಮುಂದುವರಿದು ಮಾತನಾಡಿದ ಅವರು, ತಾವು ಸಮಂತಾ ನಗುವನ್ನು ನೋಡಲು ಬಯಸುವುದಾಗಿ ಹೇಳಿದ್ದಾರೆ. ಸಮಂತಾ ಖುಷಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. "ನಾವು ಈ ಚಿತ್ರವನ್ನು ಏಪ್ರಿಲ್ 2022 ರಲ್ಲಿ ಖುಷಿಯಿಂದ ಪ್ರಾರಂಭಿಸಿದ್ದೇವು. 60% ಪೂರ್ಣಗೊಳಿಸಿದ್ದೆವು. 30-35% ಚಿತ್ರೀಕರಣ ಮಾತ್ರ ಬಾಕಿ ಇತ್ತು. ಆದರೆ, ಜುಲೈ ವೇಳೆಗೆ, ಸ್ಯಾಮ್‌ನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಅವರು ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿದರು. ಶಿವ ಮತ್ತು ನಾನು 'ನೀವು ಸುಂದರವಾಗಿ ಕಾಣುತ್ತೀರಿ. ನಿಮಗೇನು ಸಮಸ್ಯೆ?' ಎಂದು ನಾವು ಅವರ ಮಾತನ್ನು ಲಘುವಾಗಿ ತೆಗೆದುಕೊಂಡಿದ್ದೇವು. ನಂತರ, ನಾವು ಅವರ ಕಷ್ಟವನ್ನು ಅರ್ಥಮಾಡಿಕೊಂಡಿದ್ದೇವೆ" ಎಂದು ವಿವರವಾಗಿ ಮಾತನಾಡಿದ್ದಾರೆ.

ಖುಷಿ ಸಿನಿಮಾ

ಶಿವ ನಿರ್ವಾಣ ಬರೆದು ನಿರ್ದೇಶಿಸಿರುವ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಖುಷಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಸೆಪ್ಟೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಸಿನಿಮಾದಲ್ಲಿ ನಾಯಕನಾಗಿ ವಿಜಯಗ ದೇವರಕೊಂಡ ಮತ್ತು ನಾಯಕಿಯಾಗಿ ಸಮಂತಾ ರುತ್ ಪ್ರಭು ನಟಿಸಿದ್ದಾರೆ.

ಆರೋಗ್ಯ ಸಮಸ್ಯೆಗಳ ನಂತರ ಬಾಕಿ ಉಳಿದಿರುವ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸಿರುವ ನಟಿ ಸಮಂತಾ ಕನಿಷ್ಠ ಒಂದು ವರ್ಷ ವಿರಾಮದಲ್ಲಿದ್ದಾರೆ. ಸಮಂತಾ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವ ನಿರೀಕ್ಷೆಯಿದೆ.

More from Filmibeat

English summary
Vijay Devarakonda talks about Samantha Ruth Prabhu's health.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X