For Quick Alerts
  ALLOW NOTIFICATIONS  
  For Daily Alerts

  ನಾನು ಈ ಹಂತಕ್ಕೆ ಬೆಳೆಯಲು ಆ ಗೆಳೆಯ ಕಾರಣ: ಭಾವುಕರಾದ ವಿಜಯ್ ದೇವರಕೊಂಡ

  |

  ನಟ ವಿಜಯ್ ದೇವರಕೊಂಡ ಇಂದು ತೆಲುಗಿನ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ.

  ಮೊದಲಿಗೆ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವಿಜಯ್ ದೇವರಕೊಂಡ 'ಪೆಳ್ಳಿ ಚೂಪುಲು' ಸಿನಿಮಾದ ಮೂಲಕ ನಾಯಕನಟನಾಗಿ ಗುರುತಿಸಿಕೊಂಡರು. 'ಪೆಳ್ಳಿ ಚೂಪುಲು' ಸಿನಿಮಾ ದೊಡ್ಡ ಹಿಟ್ ಆಗಲಿಲ್ಲವಾದರೂ ಒಳ್ಳೆಯ ವಿಮರ್ಶೆ ಗಳಿಸಿಕೊಂಡಿತು. ಆ ನಂತರ ಬಂದ 'ದ್ವಾರಕ' ಅಷ್ಟೇನೂ ಯಶಸ್ವಿಯಾಗಲಿಲ್ಲ.

  ಆ ನಂತರ ಬಂದ 'ಅರ್ಜುನ್ ರೆಡ್ಡಿ' ವಿಜಯ್ ದೇವರಕೊಂಡ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟಿತು. ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ತಮ್ಮ ಗೆಳೆಯನೊಬ್ಬನ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲಿ ತಮ್ಮ ನಟನೆಯ ಆರಂಭದ ದಿನಗಳನ್ನು ಮೆಲುಕು ಹಾಕಿದ ಅವರು, 'ನಾನು ಇಂದು ಈ ಸ್ಥಾಯಿಯಲ್ಲಿ ಇದ್ದೀನೆಂದರೆ ಅದಕ್ಕೆ ಆ ಒಬ್ಬ ಗೆಳೆಯನೇ ಕಾರಣ' ಎಂದು ಭಾವುಕರಾದರು. ಹಾಗಿದ್ದರೆ ಯಾರು ಆ ಗೆಳೆಯ?

  ಸಿನಿಮಾ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ

  ಸಿನಿಮಾ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ

  ನಟ ವಿಜಯ್ ದೇವರಕೊಂಡ ಅವರು ತಮ್ಮ ಆತ್ಮೀಯ ಗೆಳೆಯ ನವೀನ್ ಪೋಲಿಶೆಟ್ಟಿ, ಪ್ರಿಯದರ್ಶನ್ ಪುಲಿಕೊಂಡ, ರಾಹುಲ್ ರಾಮಕೃಷ್ಣ ನಟಿಸಿರುವ 'ಜಾತಿರತ್ನಾಲು' ಸಿನಿಮಾದ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಆ ವೇದಿಕೆಯಲ್ಲಿ ತಮ್ಮ ಆತ್ಮೀಯ ಗೆಳೆಯರನ್ನು ನೋಡಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು ವಿಜಯ್.

  ಒಟ್ಟಿಗೆ ತಿಂದೆವು, ಒಟ್ಟಿಗೆ ಕುಡಿದೆವು: ವಿಜಯ್

  ಒಟ್ಟಿಗೆ ತಿಂದೆವು, ಒಟ್ಟಿಗೆ ಕುಡಿದೆವು: ವಿಜಯ್

  'ನಾವುಗಳು ಒಟ್ಟಿಗೆ ಬಂದೆವು, ನೂರು-ನೂರು ಹಣ ಹೊಂದಿಸಿಕೊಂಡು ಒಟ್ಟಿಗೆ ತಿಂದೆವು, ಒಟ್ಟಿಗೆ ಕುಡಿದೆವು. ರಾತ್ರಿಗಳು ನಿದ್ದೆಹೋಗದೆ ಕನಸುಗಳನ್ನು ಕಂಡೆವು. ನಟರಾಗಬೇಕು ಎಂದು ಕನಸು ಕಟ್ಟಿದೆವು ಅಂತೆಯೇ ಇಂದು ನಟರಾಗಿದ್ದೇವೆ' ಎಂದು ಭಾವುಕರಾದರು ವಿಜಯ್ ದೇವರಕೊಂಡ. ನವೀನ್ ಹಾಗೂ ವಿಜಯ್ ದೇವರಕೊಂಡ ಲೈಫ್ ಈಸ್ ಬ್ಯುಟಿಫುಲ್ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.

  ನಾನು ಈ ಸ್ಥಾನದಲ್ಲಿರಲು ಆ ಗೆಳೆಯನೇ ಕಾರಣ: ವಿಜಯ್

  ನಾನು ಈ ಸ್ಥಾನದಲ್ಲಿರಲು ಆ ಗೆಳೆಯನೇ ಕಾರಣ: ವಿಜಯ್

  ಆ ನಂತರ 'ಜಾತಿರತ್ನಾಲು' ಸಿನಿಮಾದ ನಿರ್ಮಾಪಕ ನಾಗ್ ಅಶ್ವಿನ್ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ. 'ಲೈಫ್ ಈಸ್ ಬ್ಯೂಟಿಫುಲ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಾಗ್ ಅಶ್ವಿನ್ ಕೊಡಿಸಿದ್ದ. ಹೀರೋಗೆ ಸಮಾನ ಪಾತ್ರದಲ್ಲಿ ನಟಿಸಿದ್ದ 'ಎವಡೇ ಸುಬ್ರಹ್ಮಣ್ಯಂ' ಸಿನಿಮಾದಲ್ಲಿ ನಿರ್ದೇಶಕರೊಂದಿಗೆ ಜಗಳವಾಡಿ ನನಗೆ ಪಾತ್ರ ಕೊಡಿಸಿದ್ದ. 'ನಾನು ಇಂದು ಈ ಹಂತದಲ್ಲಿ ಇದ್ದೀನೆಂದರೆ ಅದಕ್ಕೆ ನಾಗ್ ಅಶ್ವಿನ್ ಕಾರಣ' ಎಂದರು ವಿಜಯ್ ದೇವರಕೊಂಡ.

  ರಸ್ತೆ ವಿಚಾರಕ್ಕೆ ಗ್ರಾಮಸ್ಥರೊಡನೆ ಕಚ್ಚಾಡಿಕೊಂಡ ಯಶ್ ತಂದೆ-ತಾಯಿ | Filmibeat Kannada
  ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದಾರೆ

  ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದಾರೆ

  'ಜಾತಿರತ್ನಾಲು' ಸಿನಿಮಾದ ಟ್ರೇಲರ್ ಅನ್ನು ಕೆಲವು ದಿನಗಳ ಹಿಂದಷ್ಟೆ ಪ್ರಭಾಸ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಸಖತ್ ಹಿಟ್ ಆಗಿದೆ. ನವೀನ್ ಪೋಲಿಶೆಟ್ಟಿ, ಪ್ರಿಯದರ್ಶನ್ ಪುಲಿಕೊಂಡ, ರಾಹುಲ್ ರಾಮಕೃಷ್ಣ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶಕ ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದಾರೆ.

  English summary
  Actor Vijay Devarkonda remembers Nag Ashwin's help in his career. He became emotional on the stage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X