ತಮ್ಮ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ 25 ಲಕ್ಷಕ್ಕೆ ಮಾರಾಟ; ವಿಜಯ್ ದೇವರಕೊಂಡ ಕೊಟ್ಟ ಸ್ಪಷ್ಟನೆ ಏನು?
ನಟ ವಿಜಯ್ ದೇವರಕೊಂಡ ಎಲ್ಲರಿಗೂ ಚಿರಪರಿಚಿತ. ಸೌತ್ ಇಂಡಿಯನ್ ಸೂಪರ್ ಸ್ಟಾರ್‌ಗಳಲ್ಲಿ ಇವರು ಒಬ್ಬರು. ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ನಟ ವಿಜಯ್ ದೇವರಕೊಂಡ 'ಗೀತ ಗೋವಿಂದಂ', 'ಖುಷಿ', 'ಅರ್ಜುನ್ ರೆಡ್ಡಿ', 'ಡಿಯರ್ ಕಾಮ್ರೇಡ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಟಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳ ನಟನಾಗಿರುವ ಇವರಿಗೆ ಪ್ರಶಸ್ತಿಗಳೆಂದರೆ ಅಷ್ಟಕ್ಕಷ್ಟೇ ಅಂತೆ. ಇವರ ಕಲೆ ಹಾಗೂ ನಟನೆಗೆ ಹಲವು ಪ್ರಶಸ್ತಿಗಳು ಈಗಾಗಲೇ ಸಂದಿವೆ. ಆದರೆ, ಈ ಪ್ರಶಸ್ತಿಗಳ ಹಿಂದೆ ಬೀಳದ ನಟ ವಿಜಯ್ ದೇವರಕೊಂಡ ಅದು ಅವರ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮಾರಿದ್ದಾರೆ.

ಹೌದು, ಸದ್ಯಕ್ಕೆ ನಟ ವಿಜಯ್ ದೇವರಕೊಂಡ ಇಂದು (ಏಪ್ರಿಲ್ 5) ತೆರೆಕಂಡಿರೋ 'ಫ್ಯಾಮಿಲಿ ಸ್ಟಾರ್' ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಹಲವಾರು ಪ್ರೆಸ್‌ಮೀಟ್‌ಗಳಲ್ಲಿ ಆಗಾಗ ಜನರ ಮುಂದೆ ಕಾಣಿಸಿಕೊಳ್ಳುತ್ತಿರುವ ನಟ ವಿಜಯ್ ದೇವರಕೊಂಡ ತಾವು ಮಾರಿದ ಫಿಲಂ ಫೇರ್ ಅವಾರ್ಡ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
"ಮೊದಲಿಂದಲೂ ನನಗೆ ಅವಾರ್ಡ್‌ಗಳೆಂದರೆ ಅಷ್ಟಕ್ಕಷ್ಟೇ. ಆದರೂ, ನನ್ನ ನಟನೆಗೆ ಸಿಕ್ಕ ಗೌರವದ ಪ್ರತಿರೂಪ ಆ ಫಿಲ್ಮ್ ಫೇರ್ ಅವಾರ್ಡ್. ಅದನ್ನು ನಾನು ಅಷ್ಟೇ ಗೌರವದಿಂದ ಸ್ವೀಕರಿಸಿದ್ದೇನೆ. ಆದರೆ, 2019ರಲ್ಲಿ ನಾನು ಆ ಅವಾರ್ಡ್ ಅನ್ನು 5 ಲಕ್ಷ ರೂಪಾಯಿಗೆ ಮಾರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದೆ. ಶಾಮಲಾದೇವಿ ಅವರು ಅದನ್ನು 25 ಲಕ್ಷ ರೂಪಾಯಿಗೆ ಕೊಂಡುಕೊಂಡಿದ್ದಾರೆ. ಆ 25 ಲಕ್ಷ ರೂಪಾಯಿ ಹಣವನ್ನು ನಾನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇನೆ. ಈ ಬಗ್ಗೆ ನನಗೆ ಬಹಳ ಸಂತೃಪ್ತಿ ಇದೆ" ಎಂದು ಪ್ರೆಸ್ ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ನಟ ವಿಜಯ್ ದೇವರಕೊಂಡ ಅವರ ರೆಮ್ಯುನರೇಷನ್ ಬಗ್ಗೆ ಕೇಳಿದಾಗ "ನಾನು ಕೆಲವು ಹಿಟ್ ಫಿಲಂಗಳನ್ನು ನೀಡಿದ್ದರೂ, ನನಗೆ ಸಿಕ್ಕಿರುವ ಹಣ ಅಷ್ಟೇನು ಹೆಚ್ಚಲ್ಲ. ಇಂದು ಟಾಲಿವುಡ್ ಬಹಳ ಹೆಸರು ಮಾಡಿದೆ. ಇಲ್ಲಿನ ನಟರು 50 ಕೋಟಿ, ನೂರು, ಇನ್ನೂರು ಕೋಟಿ ರೂಪಾಯಿಯವರೆಗೂ ಹಣ ಪಡೆಯುತ್ತಿದ್ದಾರೆ. ಆದರೆ ನನಗೆ ಇತ್ತೀಚೆಗಿನವರೆಗೂ ಪ್ರತಿ ಸಿನಿಮಾಗೂ ಕಡಲೆಕಾಯಿ ಬೆಲೆಗೆ ಸಮನಾದ ಸಂಭಾವನೆ ಸಿಕ್ಕಿದೆ" ಎಂದು ಪ್ರೆಸ್ ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
"ಆದರೆ ಈಗ ನಾನು ನನಗೆ ಸರಿಯೇನಿಸುವಂತಹ ಬೆಲೆಯನ್ನು ಕೇಳುತ್ತಿದ್ದೇನೆ. ಫ್ಯಾಮಿಲಿ ಸ್ಟಾರ್ ಸಿನಿಮಾಗೆ ನಾನು ಒಳ್ಳೆಯ ಬೆಲೆಯನ್ನು ಕೇಳಿದ್ದೇನೆ ಎಂದು ನಂಬಿದ್ದೇನೆ. ಈ ಬಗ್ಗೆ ಹೊರಗಿನವರು ಹೆಚ್ಚಿನ ಆಸಕ್ತಿ ತೋರಿಸುವುದು ನನಗಷ್ಟು ಸರಿ ಅನಿಸುವುದಿಲ್ಲ. ನಟರ ಸಂಭಾವನೆ ಎಷ್ಟು ಎಂಬುದು ನಟ ಹಾಗೂ ಪ್ರೊಡಕ್ಷನ್ ಹೌಸ್ ನಡುವಿನ ವಿಚಾರ" ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ 'ಫ್ಯಾಮಿಲಿ ಸ್ಟಾರ್' ಸಿನಿಮಾಗೆ ನಟ ವಿಜಯ್ ದೇವರಕೊಂಡ ಸುಮಾರು 12 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಸಿನಿಮಾ ಬಗ್ಗೆ ಬಹಳಷ್ಟು ಕುತೂಹಲ ಹೆಚ್ಚಾಗಿದ್ದು ಇವರ ಫ್ಯಾನ್ಸ್ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











